ಜೋಗಿ ಸಿನಿಮಾ ಖ್ಯಾತಿಯ ಪ್ರೇಮ್ ನಿರ್ದೇಶನದಲ್ಲಿ ಹಲವಾರು ವಿಭಿನ್ನ ರೀತಿಯ ಸಿನಿಮಾಗಳು ಮೂಡಿ ಬಂದಿದೆ. ನಿರ್ದೆಶಕ ಪ್ರೇಮ್ ಒಂದೊಂದು ಸಿನಿಮಾದಲ್ಲೂ ವಿಭಿನ್ನ ರೀತಿ ಪ್ರೇಮಕಥೆ, ಅದರಲ್ಲೂ ಹೆಚ್ಚಿನ ಸಿನಿಮಾಗಳಲ್ಲಿ ತಾಯಿ ಪ್ರೀತಿಯ ಬಹಳ ವಿಶೇಷವಾಗಿ ಪ್ರಸ್ತುತಪಡಿಸಿದ್ದಾರೆ. ಇನ್ನೂ ಪ್ರೇಮ್ ನಿರ್ದೇಶನದ “ಕೆಡಿ” ಸಿನಿಮಾ ಸಿನಿಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾ ಆರಂಭಿಕ ಹಂತದಲ್ಲೇ ಸಖತ್ ಸೌಂಡ್ ಮಾಡುತ್ತಿದೆ. ಇನು ಈ ಸಿನಿಮಾದಲ್ಲಿ ರವಿಚಂದ್ರನ್, ಸಂಜಯ್ ದತ್ ಹಾಗೂ ಶಿಲ್ಪಾ ಶೆಟ್ಟಿಯಂತಹ ಘಟಾನುಘಟಿಗಳು ಒಳಗೊಂಡ ತಾರಾಂಗಣವಿದೆ. ಈ ಸಿನಿಮಾದ ಹೆಚ್ಚಿನ ಪಾತ್ರ ಪರಿಚಯವಾಗಿದ್ದು, ಸದ್ಯ ಸಿನಿಮಾ ನಾಯಕಿ ಪಾತ್ರ ಬಾಕಿ ಉಳಿದಿತ್ತು. ಸದ್ಯ ಇಂದು (ಏಪ್ರಿಲ್ 28) ಕೆಡಿ ಸಿನಿಮಾದ ನಾಯಕಿ ಮಚ್ಚ್‌ಲಕ್ಷ್ಮಿ ಯಾರು ಎನ್ನುವುದನ್ನು (KD Movie – Reeshma nanaiah) ನಿರ್ದೇಶಕ ಪ್ರೇಮ್ ರಿವೀಲ್ ಮಾಡಿದ್ದಾರೆ.
ನಿರ್ದೇಶಕ ಪ್ರೇಮ್ ಟ್ವೀಟ್‌ನಲ್ಲಿ, ” ಕಾಯುವಿಕೆ ಮುಗಿದಿದೆ! ನಾವೆಲ್ಲಾ ಕಾಯುತ್ತಿದ್ದ ಪಾತ್ರ ಕೊನೆಗೂ ಬಹಿರಂಗವಾಗಿದೆ. ರೀಷ್ಮಾ ನಾಣಯ್ಯ ಕೆಡಿಯ ರಾಣಿಯಾಗಿ ಯುದ್ಧಭೂಮಿಯನ್ನು ಅಲುಗಾಡಿಸಲಿರುವ ಮಚ್ಚಲಕ್ಷ್ಮಿಯಾಗಿ! ಕಿಲಾಡಿ ನಿಮಗೆ ಜನ್ಮದಿನದ ಶುಭಾಶಯಗಳು ಅಮ್ಮ ” ಎಂದು ನಾಯಕಿ ರೀಷ್ಮಾ ನಾಣಯ್ಯಕ್ಕೆ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. ಈ ಸಿನಿಮಾ ನಟಿ ರೀಷ್ಮಾ ನಾಣಯ್ಯ
ಅವರ ಪ್ರೇಮ್ ನಿರ್ದೇಶನದ ಎರಡನೇ ಸಿನಿಮಾವಾಗಿದೆ.
Wait is over!
— PREM❣️S (@directorprems) April 28, 2023
The character that we were all waiting for is finally revealed @Reeshmananaiah as #MacchLakshmi who will rock the battlefield as #KD’s Queen! #kDlady
Wish u Happy Birthday ma #Reeshma.@KvnProductions @DhruvaSarja @duttsanjay @TheShilpaShetty @ArjunJanyaMusic pic.twitter.com/KywTF8vuCU
ನಿರ್ದೇಶಕ ಪ್ರೇಮ್ ಹೆಚ್ಚಾಗಿ ಪರಭಾಷೆಯನ್ನು ನಟಿಯರನ್ನು ಕರೆತರಲುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಪ್ರೇಮ್ ‘ಏಕ್‌ಲವ್ ಯಾ’ ಸಿನಿಮಾದ ನಾಯಕಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು “ಕೆಡಿ” ಫ್ಯಾನ್ ಇಂಡಿಯಾ ಸಿನಿಮಾವಾಗಿದೆ. ಈ ಸಿನಿಮಾ 5 ಭಾಷೆಗಳಲ್ಲಿ ಏಕಕಾಲಕ್ಕೆ ಬಹಳ ದೊಡ್ಡಮಟ್ಟದಲ್ಲಿ ತೆರೆ ಕಾಣಲಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ರಗಡ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಇನ್ನು ಈ ಸಿನಿಮಾದಲ್ಲಿ ನಟಿ ರೀಷ್ಮಾ ನಾಯಕಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸಿನಿತಂಡ ಅಧಿಕೃತವಾಗಿ ಹೇಳಿದೆ.
ಇದನ್ನೂ ಓದಿ : ರಾಜ್ಯದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ರಾಘವೇಂದ್ರ ಸ್ಟೋರ್ಸ್ : ಶುಭ ಹಾರೈಸಿದ ಪವನ್ ಒಡೆಯರ್
1968 ರಿಂದ 1978ರ ನಡುವೆ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ರೆಟ್ರೋ ಸಿನಿಮಾ ಹಣೆಯಲಾಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಅದಕ್ಕೆ ತಕ್ಕಂತೆ ಸ್ಟಾರ್ ಕಾಸ್ಟ್, ಮೇಕಿಂಗ್, ಪ್ರಮೋಷನ್ ಎಲ್ಲವೂ ಇರಲಿದೆ. ಈ ಸಿನಿಮಾಕ್ಕಾಗಿ ಕೇವಲ 23 ದಿನಗಳಲ್ಲಿ 18 ಕೆಜಿ ತೂಕ ಇಳಿಸಿ ಧ್ರುವ ಸರ್ಜಾ ನಟಿಸುತ್ತಿದ್ಧಾರೆ. ಧ್ರುವ ನಟನೆಯ ‘ಮಾರ್ಟಿನ್’ ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆಗಪ್ಪಳಿಸಲು ಸಿದ್ಧವಾಗುತ್ತಿದೆ. ಅದರ ಬೆನ್ನಲ್ಲೇ ತೆರೆಮೇಲೆ ‘ಕೆಡಿ’ ಕರಾಮತ್ತು ಶುರುವಾಗಲಿದೆ. ಸದ್ಯ ಎಲ್ಲದಕ್ಕೂ ಮೊದಲು ಮುನ್ನ ಟೀಸರ್, ಟ್ರೈಲರ್, ಸಾಂಗ್ಸ್ ಅಂತ ಅಭಿಮಾನಿಗಳಿಗೆ ಟ್ರೀಟ್ ಕಾದಿರುತ್ತದೆ.
KD Movie – Reeshma nanaiah : Prem directed “KD” movie heroine look release: Do you know who is that actress?