ಮಂಗಳವಾರ, ಏಪ್ರಿಲ್ 29, 2025
HomeCinemaKerala Story Box Office : ದಾಖಲೆಯ ಗಳಿಕೆ ಕಂಡ ದಿ ಕೇರಳ ಸ್ಟೋರಿ, ಆದಾ...

Kerala Story Box Office : ದಾಖಲೆಯ ಗಳಿಕೆ ಕಂಡ ದಿ ಕೇರಳ ಸ್ಟೋರಿ, ಆದಾ ಶರ್ಮಾ ಸಿನಿಮಾ 3 ನೇ ವಾರ ಭರ್ಜರಿ ಕಲೆಕ್ಸನ್ಸ್‌

- Advertisement -

ಅದಾ ಶರ್ಮಾ ನಟನೆಯ ದಿ ಕೇರಳ ಸ್ಟೋರಿ ಸಿನಿಮಾ (Kerala Story Box Office) ದಿನೇ ದಿನೇ ಭರ್ಜರಿ ರೆಸ್ಪಾನ್ಸ್‌ ಪಡೆಯುತ್ತಿದೆ. ಪರ ವಿರೋಧದ ಚರ್ಚೆಯ ನಡುವಲ್ಲೇ ಸಿನಿಮಾ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯುತ್ತಿದೆ. ಸಿನಿಮಾವನ್ನು ಪಶ್ಚಿಮ ಬಂಗಾಳದಲ್ಲಿ ನಿಷೇಧಿಸಲ್ಪಟ್ಟಿದ್ದರೂ, ಕೆಲವು ರಾಜ್ಯಗಳಲ್ಲಿ ಹಿನ್ನಡೆ ಉಂಟಾಗಿದ್ದರೂ ಕೂಡ ಸಿನಿಮಾವನ್ನು ಬಹು ಸಂಖ್ಯೆಯಲ್ಲಿ ಜನರು ಮೆಚ್ಚಿಕೊಂಡಿದ್ದಾರೆ. ಐಸಿಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ) ನಿಂದ ಮಲಯಾಳಿ ಹುಡುಗಿಯರ ಮತಾಂತರ ಹಾಗೂ ಐಸಿಸಿ ಸೇರ್ಪಡೆಯ ಕಥಾ ಹಂದರವನ್ನು ಹೊಂದಿರುವ ಕೇರಳ ಸ್ಟೋರಿಯನ್ನು ಕೆಲ ರಾಜಕಾರಣಿಗಳು ವಿರೋಧಿಸಿದ್ದಾರೆ.

‘ದಿ ಕೇರಳ ಸ್ಟೋರಿ’ ಯಲ್ಲಿ ಅತ್ಯಾಚಾರದ ದೃಶ್ಯಗಳಿಗೆ ಸಂಬಂಧಿಸಿದಂತೆ ಆದಾ ಶರ್ಮಾ ಪ್ರತಿಕ್ರಿಯೆ ಸಾಕಷ್ಟ ಸದ್ದು ಮಾಡಿತ್ತು. 15 ಜನರು ನಿಮ್ಮ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ರೆ ಎಲ್ಲಿಂದ ಸಾಕ್ಷಿ ತರುತ್ತೀರಿ ಎಂದು ಮಾಧ್ಯಮಗಳಿಗೆ ಪ್ರಶ್ನೆ ಮಾಡಿದ್ದರು. ಇದೆಲ್ಲದರ ನಡುವಲ್ಲೇ ಕೇರಳ ಸ್ಟೋರಿ ಮೂರನೇ ವಾರದಲ್ಲಿ 9.15 ಕೋಟಿ ಸಂಪಾದಿಸಿದೆ. ಈ ಚಿತ್ರ ಇದುವರೆಗೆ ಬಾಕ್ಸ್ ಆಫೀಸ್ ನಲ್ಲಿ 187 ಕೋಟಿ ಗಳಿಸಿದೆ. ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಸಂಗ್ರಹ ವರದಿಯನ್ನು ಹಂಚಿಕೊಂಡಿದ್ದಾರೆ.

ಕೇರಳ ಸ್ಟೋರಿ ಬಾಕ್ಸ್‌ ಆಫೀಸ್‌ ಕೆಲೆಕ್ಷನ್ಸ್‌ :

  • ಶುಕ್ರವಾರ : ರೂ. 8.03 ಕೋಟಿ
  • ಶನಿವಾರ : ರೂ. 11.22 ಕೋಟಿ
  • ಭಾನುವಾರ : ರೂ. 16 ಕೋಟಿ
  • ಸೋಮವಾರ : ರೂ. 10.07 ಕೋಟಿ
  • ಮಂಗಳವಾರ : ರೂ. 11.14 ಕೋಟಿ
  • ಬುಧವಾರ : ರೂ. 12.00 ಕೋಟಿ
  • ಗುರುವಾರ : ರೂ. 12.50 ಕೋಟಿ
  • ಶುಕ್ರವಾರ : ರೂ. 12.35 ಕೋಟಿ
  • ಶನಿವಾರ : ರೂ. 19.50 ಕೋಟಿ
  • ಭಾನುವಾರ : ರೂ. 23.75 ಕೋಟಿ
  • ಸೋಮವಾರ : ರೂ. 10.30 ಕೋಟಿ
  • ಮಂಗಳವಾರ : ರೂ. 9.65 ಕೋಟಿ
  • ಬುಧವಾರ : ರೂ. 8.03 ಕೋಟಿ
  • ಗುರುವಾರ : ರೂ. 7.00 ಕೋಟಿ
  • ಶುಕ್ರವಾರ : ರೂ. 6.6 ಕೋಟಿ
  • ಶನಿವಾರ : ರೂ. 9.15 ಕೋಟಿ
  • ಒಟ್ಟು : ರೂ. 187.72 ಕೋಟಿ

ಇದನ್ನೂ ಓದಿ : ಜೂನಿಯರ್ ಎನ್ ಟಿಆರ್ ಹುಟ್ಟುಹಬ್ಬಕ್ಕೆ ನೀಲ್ ಸರ್ಪ್ರೈಸ್ : NTR31 ಸಿನಿಮಾದ ಶೂಟಿಂಗ್ ಯಾವಾಗ ಶುರು

ಇದನ್ನೂ ಓದಿ : Chota Champion : ಛೋಟಾ ಚಾಂಪಿಯನ್‌, ಅಪ್ಪನಿಗಾಗಿ ಹಂಬಲಿಸಿದ ಮಂಗಳೂರಿನ ಪ್ರನ್ವಿ

ಕೇರಳ ಸ್ಟೋರಿ ಮೇ 5, 2023 ರಂದು ಬಿಡುಗಡೆಯಾಗಿದ್ದು, ಎಲ್ಲೆಡೆಯಿಂದಲೇ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಬಹುತೇಕ ಕಡೆಗಳಲ್ಲಿ ಪ್ರೀ ಶೋಗಳನ್ನು ಆಯೋಜನೆ ಮಾಡಲಾಗುತ್ತಿದೆ. ಸುದೀಪ್ತೋ ಸೇನ್ ನಿರ್ದೇಶಿಸಿರುವ ಸಿನಿಮಾವನ್ನು ಯೋಗಿತಾ ಬಿಹಾನಿ, ಸೋನಿಯಾ ಬಲಾನಿ, ಸಿದ್ಧಿ ಇದ್ನಾನಿ ಮತ್ತು ದೇವದರ್ಶಿನಿ ನಟಿಸಿರುವ ಚಲನಚಿತ್ರವನ್ನು ವಿಪುಲ್ ಅಮೃತಲಾಲ್ ಶಾ ನಿರ್ಮಿಸಿದ್ದಾರೆ.

Kerala Story Box Office: The Kerala Story, Adah Sharma’s Movie Hits Record 3rd Week Collections

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular