ಮಂಗಳವಾರ, ಏಪ್ರಿಲ್ 29, 2025
HomeCinemaKGF 2 Box Office Collection : ದೇಶ-ವಿದೇಶಗಳಲ್ಲಿಯೂ ಜೋರಾಗಿದೆ ರಾಕಿ ಭಾಯ್​ ಹವಾ..!​ವಿದೇಶಗಳಲ್ಲಿಯೂ ಹೌಸ್​​ಫುಲ್​ ಪ್ರದರ್ಶನ

KGF 2 Box Office Collection : ದೇಶ-ವಿದೇಶಗಳಲ್ಲಿಯೂ ಜೋರಾಗಿದೆ ರಾಕಿ ಭಾಯ್​ ಹವಾ..!​ವಿದೇಶಗಳಲ್ಲಿಯೂ ಹೌಸ್​​ಫುಲ್​ ಪ್ರದರ್ಶನ

- Advertisement -

KGF 2 Box Office Collection : ಕೆಜಿಎಫ್​ ಚಾಪ್ಟರ್​​ 2 ಸಿನೆಮಾ ಸ್ಯಾಂಡಲ್​ವುಡ್​​ ಇಂಡಸ್ಟ್ರಿಯಲ್ಲಿ ಹೊಸ ಇತಿಹಾಸವನ್ನೇ ಬರೆದಿದೆ. ಹಿಂದ್ಯಾವ ಸಿನಿಮಾವೂ ಗಳಿಸಿರದ ಮಟ್ಟಿಗಿನ ಆದಾಯವನ್ನು ಈ ಸಿನಿಮಾ ಗಳಿಸುತ್ತಿದೆ. ಕನ್ನಡ ಸಿನಿಮಾಗಳಲ್ಲಿಯೂ ಹೂಡಿಕೆ ಮಾಡಿ ನೀವು ಲಾಭವನ್ನು ಗಳಿಸಬಹುದು ಎಂಬುದನ್ನು ಪ್ರಶಾಂತ್​ ನೀಲ್​ ಸಾಬೀತುಪಡಿಸಿದ್ದಾರೆ. ಯಶ್​ ಅಭಿನಯದ ಈ ಸಿನಿಮಾವು ಅಭಿಮಾನಿಗಳ ಕಣ್ಣಿಗೆ ರಸದೌತಣವನ್ನೇ ಬಡಿಸಿದೆ. ಕೇವಲ ಸ್ಯಾಂಡಲ್​ವುಡ್​ ಮಾತ್ರವಲ್ಲದೇ ವಿಶ್ವಾದ್ಯಂತ ಈ ಸಿನಿಮಾ ಘೀಳಿಡುತ್ತಿದೆ.


ಬೆಳಗ್ಗೆಯಿಂದ ಸಿನಿಮಾ ಮಂದಿರಗಳಲ್ಲಿ ಅತೀ ಕಡಿಮೆ ಪ್ರೇಕ್ಷಕರು ಕಂಡ ಹಿನ್ನೆಲೆಯಲ್ಲಿ ಬೀಸ್ಟ್​ ಸಿನಿಮಾ ಪ್ರದರ್ಶಗಳನ್ನ ಕೆಲವು ಕಡೆಗಳಲ್ಲಿ ರದ್ದುಗೊಳಿಸಲಾಗಿದೆ. ಕೆಜಿಎಫ್​ ಚಾಪ್ಟರ್​ 2 ಸಿನಿಮಾವು ಎಲ್ಲಾ ಪ್ರೇಕ್ಷಕರನ್ನು ತನ್ನತ್ತ ಎಳೆದುಕೊಂಡಿದೆ ಎಂದು ಚಲನಚಿತ್ರೋದ್ಯಮದ ಟ್ರ್ಯಾಕರ್ ಮನೋಬಾಲಾ ವಿಜಯಬಾಲನ್ ಅಭಿಪ್ರಾಯಪಟ್ಟಿದ್ದಾರೆ.


ವಾರಾಂತ್ಯಗಳು ಮುಗಿದಿದ್ದರೂ ಸಹ ಕೆಜಿಎಫ್​ ಚಾಪ್ಟರ್​ 2ಕಲೆಕ್ಷನ್​​ಗೆ ಮಾತ್ರ ಯಾವುದೇ ರೀತಿಯ ಹೊಡೆತ ಬಿದ್ದಂತೆ ಕಾಣುತ್ತಿಲ್ಲ. ಸಂಜೆಯ ಪ್ರದರ್ಶನಗಳಲ್ಲಂತೂ ಕೆಜಿಎಫ್​ 2 ತನ್ನ ನಾಗಾಲೋಟವನ್ನು ಎಂದಿನಂತೆ ಮುಂದುವರಿಸಿದೆ. ಉತ್ತರ ಭಾರತಗಳಲ್ಲಿಯೂ ಕೂಡ ಈ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ ಎಂದು ಹಿಂದಿ ಸಿನಿಮಾ ವಿಶ್ಲೇಷಕರು ಹೇಳಿದ್ದಾರೆ.

ತಮಿಳು ಇಂಡಸ್ಟ್ರಿಯಲ್ಲಿಯೂ ಕೆಜಿಎಫ್​ 2 ಹವಾ ಜೋರಾಗಿದೆ. ಸಿಂಗಾಪುರದಲ್ಲಿಯೂ ರಾತ್ರಿಯ ಶೋಗಳು ಶೇಕಡಾ 80 ರಿಂದ 100 ಪ್ರತಿಶತದಷ್ಟು ಫುಲ್​ ಆಗಿವೆ. ಹೀಗಾಗಿ ಕೇವಲ ರಾಜ್ಯದಲ್ಲಿ ಮಾತ್ರವಲ್ಲದೇ ದೇಶ, ವಿದೇಶಗಳಲ್ಲಿಯೂ ರಾಕಿ ಹವಾ ಜೋರಾಗಿದೆ ಅಂದರೆ ತಪ್ಪಾಗಲಾರದು.

ಇದನ್ನು ಓದಿ : free kgf2 tickets : ಉದ್ಯೋಗಿಗಳಿಗೆ ಉಚಿತ ಕೆಜಿಎಫ್​ 2 ಟಿಕೆಟ್​ ವಿತರಿಸಿದೆ ಈ ಖಾಸಗಿ ಕಂಪನಿ..!

ಇದನ್ನೂ ಓದಿ :RCB KGF 2 : ಆರ್ ಸಿ ಬಿ ಅಂಗಳದಲ್ಲಿ ಕೆಜಿಎಫ್-2 ಹವಾ : ಸಿನಿಮಾ ವೀಕ್ಷಿಸಿದ ಕ್ರಿಕೆಟ್ ಟೀಂ

KGF 2 Box Office Collection Day 5: Yash Starrer Enters The Week With a Smash in Hindi Market After Crossing Rs 550 Crore Worldwide – Check Detailed Report

RELATED ARTICLES

Most Popular