kgf-2 : ಕೆಜಿಎಫ್ 2 ಸಿನಿಮಾ,..ಸ್ಯಾಂಡಲ್ವುಡ್ನ ಸಿನಿಮಾವೊಂದು ಇಷ್ಟು ಎತ್ತರಕ್ಕೆ ಬೆಳೆಯಬಹುದು ಎಂದು ಯಾರೂ ಊಹಿಸದಷ್ಟರ ಮಟ್ಟಿಗೆ ಯಶಸ್ಸನ್ನು ಸಾಧಿಸಿತ್ತು. ವಿಶ್ವ ಮಟ್ಟದಲ್ಲಿ ಕನ್ನಡ ಭಾಷೆಯ ಸಿನಿಮಾವೊಂದು ಸದ್ದು ಮಾಡುತ್ತೆ ಎಂಬುದನ್ನು ಯಾರು ಊಹೆ ಕೂಡ ಮಾಡಿರಲಿಲ್ಲ. ಆದರೆ ಇಂತಹ ಸಾಧನೆಯನ್ನು ಪ್ರಶಾಂತ್ ನೀಲ್ ಹಾಗೂ ರಾಕಿಂಗ್ ಸ್ಟಾರ್ ಯಶ್ ನಟನೆಯ ಸಿನಿಮಾವೊಂದು ಮಾಡಿತ್ತು. ಈ ಸಿನಿಮಾ ಬೆಳ್ಳಿ ತೆರೆಯಲ್ಲಿ ಪ್ರದರ್ಶನ ಕಾಣಲು ಆರಂಭಿಸಿ ಇಂದಿಗೆ ನೂರು ದಿನಗಳನ್ನು ಪೂರೈಸಿದೆ. ಹೌದು..! ಏಪ್ರಿಲ್ 14ರಂದು ತೆರೆ ಕಂಡಿದ್ದ ಕೆಜಿಎಫ್ 2 ಇಂದು ಶತದಿನೋತ್ಸವದ ಸಂಭ್ರಮದಲ್ಲಿದೆ. ಈ ಸಂಬಂಧ ನಿರ್ದೇಶಕ ಪ್ರಶಾಂತ್ ನೀಲ್ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ವಿಡಿಯೋವನ್ನು ಶೇರ್ ಮಾಡಿರುವ ಪ್ರಶಾಂತ್ ನೀಲ್, ಈ ಸಿನಿಮಾ ಎಂದಿಗೂ ನೆನಪಿನಲ್ಲಿ ಉಳಿಯಲಿದೆ. ಕೆಜಿಎಫ್ನ ಆ ಎಮೋಷನ್ ನಮ್ಮೊಂದಿಗೆ ಶಾಶ್ವತವಾಗಿರಲಿದೆ. ನೂರು ದಿನಗಳ ಭರವಸೆಗೆ ಧನ್ಯವಾದಗಳು ಎಂದು ಶೀರ್ಷಿಕೆ ನೀಡಿದ್ದಾರೆ.
Thank u to each and everyone for making this happen 🙏#100MonsterDaysOfKGF2#KGFChapter2 @TheNameIsYash @VKiragandur @hombalefilms @HombaleGroup @duttsanjay @TandonRaveena @SrinidhiShetty7 @RaviBasrur @bhuvangowda84 @shivakumarart #KGF2 #HombaleFilms pic.twitter.com/hvk53oyaqj
— Prashanth Neel (@prashanth_neel) July 22, 2022
ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ, ಮಲಯಾಳಂ ,ಇಂಗ್ಲೀಷ್ ಸೇರಿದಂತೆ ಹಲವಾರು ಭಾಷೆಗಳಲ್ಲಿ ತೆರೆ ಕಂಡಿರುವ ಈ ಸಿನಿಮಾ 1350 ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ದೊಡ್ಡ ಮಟ್ಟದಲ್ಲಿ ಸಾಧನೆಯನ್ನು ಮಾಡಿದೆ. ಈ ನಡುವೆ ಚಿತ್ರತಂಡ ಕೆಜಿಎಫ್ 3 ಸಿನಿಮಾದ ಬಗ್ಗೆಯೂ ಸಾಕಷ್ಟು ರೀತಿಯಲ್ಲಿ ಸುಳಿವನ್ನು ನೀಡಿದೆ. ಕೆಜಿಎಫ್ 3 ಸಿನಿಮಾ ಕೂಡ ಕೆಜಿಎಫ್ 2 ಸಿನಿಮಾದಂತೆಯೆ ಚಂದನವನದ ಗರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಅನ್ನೋದೇ ಕನ್ನಡ ಸಿನಿ ರಸಿಕರ ಆಶಯವಾಗಿದೆ.
ಇತ್ತ ನಟ ಯಶ್ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಎಲ್ಲರ ಮನಸ್ಸಲ್ಲೂ ಮನೆ ಮಾಡಿರುವ ನಡುವೆಯೇ ರಾಕಿಭಾಯ್ ತಮ್ಮ ಪತ್ನಿ ರಾಧಿಕಾ ಪಂಡಿತ್ ಜೊತೆಯಲ್ಲಿ ವೆಕೇಷನ್ ಮೂಡ್ನಲ್ಲಿದ್ದಾರೆ. ಪತಿ – ಪತ್ನಿಯಿಬ್ಬರೂ ಹೊಸ ಹೊಸ ಜಾಗದಲ್ಲಿ ನಿಂತು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಆದರೆ ತಾವು ಯಾವ ಸ್ಥಳದಲ್ಲಿ ವೆಕೇಷನ್ ಎಂಜಾಯ್ ಮಾಡ್ತಿದ್ದೇವೆ ಎಂಬ ಗುಟ್ಟನ್ನು ಬಿಟ್ಟು ಕೊಡದೇ ಅಭಿಮಾನಿಗಳಿಗೇ ಈ ಸ್ಥಳವನ್ನು ಗೆಸ್ ಮಾಡಿ ಎಂದು ಹೇಳುವ ಮೂಲಕ ತಲೆಗೆ ಹುಳ ಬಿಟ್ಟಿದ್ದಾರೆ. ನಟ ಯಶ್ರ 19ನೇ ಸಿನಿಮಾ ಯಾವುದಿರಬಹುದು ಎಂಬ ಕುತೂಹಲ ಕೇವಲ ಯಶ್ ಫ್ಯಾನ್ಸ್ಗೆ ಮಾತ್ರವಲ್ಲದೇ ಇಡೀ ಸ್ಯಾಂಡಲ್ವುಡ್ಗೇ ಇದೆ. ಆದರೆ ಈ ಬಗ್ಗೆ ಯಾವುದೇ ಸುಳಿವನ್ನು ಯಶ್ ಆಗಲಿ ಅಥವಾ ಯಶ್ ಆಪ್ತ ಮೂಲಗಳಾಗಲಿ ಬಿಟ್ಟು ಕೊಟ್ಟಿಲ್ಲ.
ಇದನ್ನು ಓದಿ: CBSE class 12 Results declared : CBSE 12 ನೇ ತರಗತಿ ಫಲಿತಾಂಶ 2022 ಪ್ರಕಟ : ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ : ಕೋಟದಲ್ಲಿ ಮೀನುಗಾರಿಕಾ ದೋಣಿ ದುರಂತ : ಓರ್ವ ಸಮುದ್ರಪಾಲು
kgf-2 completes 100 days