KGF 2  : ವಿಶ್ವದಾದ್ಯಂತ 900 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸಿದ ಕೆಜಿಎಫ್​ -2

KGF 2  : ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಾಪ್ಟರ್​ 2 ಸಿನಿಮಾವು ವಿಶ್ವಾದ್ಯಂತ ಧೂಳೆಬ್ಬಿಸುತ್ತಿದೆ. ಈ ಮೆಗಾ ಆ್ಯಕ್ಷನ್​ ಎಂಟರ್​​ಟೈನರ್​ ಸಿನಿಮಾವು ಈಗಾಗಲೇ 900 ಕೋಟಿ ರೂಪಾಯಿಗಳನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಅಂದಹಾಗೆ ಕೆಜಿಎಫ್​ 2 ಸಿನಿಮಾವು ಸಿನಿಮಾ ಮಂದಿರಗಳಲ್ಲಿ ಪ್ರದರ್ಶನ ಕಂಡ ಕೇವಲ 12 ದಿನಗಳಲ್ಲೇ ಈ ಸಾಧನೆಯನ್ನು ಮಾಡಿದೆ. ಮೊದಲ ವಾರದಲ್ಲಿ ಪ್ರಪಂಚದಾದ್ಯಂತ 730.31 ಕೋಟಿ ರೂಪಾಯಿಗಳನ್ನು ಸಂಪಾದಿಸಿದ್ದ ಪ್ರಶಾಂತ್​ ನೀಲ್​ ನಿರ್ದೇಶನದ ಈ ಸಿನಿಮಾವು ಇದೀಗ ತನ್ನ ಒಟ್ಟಾರೆ ಗಳಿಕೆಯನ್ನು 907.30 ಕೋಟಿ ರೂಪಾಯಿ ಮಾಡಿಕೊಂಡಿದೆ.

ಈ ಮೂಲಕ ಕೆಜಿಎಫ್​ ಚಾಪ್ಟರ್​ 2 ಸಿನಿಮಾವು ಎರಡನೇ ವಾರದಲ್ಲಿಯೂ ಬಾಕ್ಸಾಫೀಸಿನಲ್ಲಿ ತನ್ನ ಹಿಡಿತವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ ಎಂಬುದನ್ನು ನಾವಿಲ್ಲಿ ಗಮನಿಸಬಹುದಾಗಿದೆ. ಅಜಯ್​ ದೇವಗನ್​ರ ರನ್​ ವೇ, ಟೈಗರ್​ ಶ್ರಾಫ್​ರ ಹೀರೋಪಂತಿ 2 ಹಾಗೂ ಶಾಹೀದ್​ ಕಪೂರ್​ ನಟನೆಯ ಜೆರ್ಸಿ ಸಿನಿಮಾಗಳು ಕೆಜಿಎಫ್​ 2 ಅಬ್ಬರದ ಎದುರು ಮಕಾಡೆ ಮಲಗಿವೆ.

ಕಳೆದ 12 ದಿನಗಳಲ್ಲಿ ಕೆಜಿಎಫ್​ 2 ಸಿನಿಮಾದ ಬಾಕ್ಸಾಫೀಸು ಕಲೆಕ್ಷನ್​ ಬಗ್ಗೆ ಇಲ್ಲಿದೆ ಮಾಹಿತಿ :
ಮೊದಲ ವಾರ: 720.31 ಕೋಟಿ ರೂ
(ಎರಡನೆ ವಾರ )ದಿನ 1 : 30.18 ಕೋಟಿ ರೂ
ದಿನ 2: 26.09 ಕೋಟಿ ರೂ
ದಿನ 3: 42.15 ಕೋಟಿ ರೂ
ದಿನ 4: 64.83 ಕೋಟಿ ರೂ
ದಿನ 5: 23.74 ಕೋಟಿ ರೂ
ಒಟ್ಟು: 907.30 ಕೋಟಿ ರೂ


ಹಿಂದಿ ಆವೃತ್ತಿಯಲ್ಲಿ ಸಿನಿಮಾದ ಪ್ರದರ್ಶನ ಕೂಡ ಗಮನಾರ್ಹವಾಗಿದೆ. ಸೋಮವಾರ ಬಾಕ್ಸಾಫಿಸಿನಲ್ಲಿ ಕೆಜಿಎಫ್​ 2 ಸಿನಿಮಾವು ಒಟ್ಟು 322.75 ಕೋಟಿ ರೂಪಾಯಿಗಳನ್ನು ಸಂಪಾದಿಸಿದೆ. ಬಾಕ್ಸಾಫೀಸ್​ ಇಂಡಿಯಾದಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕೆಜಿಎಫ್​ 2 ಎರಡನೇ ವಾರದ ಬಾಕ್ಸಾಫೀಸ್​ ಕಲೆಕ್ಷನ್​ ಆರ್​ಆರ್​ಆರ್​​ ಸಿನಿಮಾದ ಕಲೆಕ್ಷನ್​ಗೆ ಸಮೀಪದಲ್ಲಿದೆ.

ಇದನ್ನು ಓದಿ : IPL 2022 : 0, 0, 9 ವಿರಾಟ್‌ ಕೊಹ್ಲಿಗೆ ಕೈ ಹಿಡಿಯದ ಅದೃಷ್ಟ : ಆರಂಭಿಕನಾಗಿ ಎಡವಿದ ಮಾಜಿ ನಾಯಕ

ಇದನ್ನೂ ಓದಿ : Ram Gopal Verma : ಬಾಲಿವುಡ್ ಗೆ ಆಗಲೇ ಹಬ್ಬಿದೆ, ಸೌತ್ ಇಂಡಿಯನ್ ಅನ್ನೋ ಕೊರೋನಾ: ರಾಮ್ ಗೋಪಾಲ್ ವರ್ಮಾ

KGF 2 Crosses Rs 900 Crore at Worldwide Box Office, Biggest Triumph For Yash Starrer in 12 Days – Check Detailed Collection Report

Comments are closed.