ನಟ ಯಶ್ ನಾಯಕನಟನಾಗಿ ಅಭಿನಯಿಸಿರುವ ಕೆಜಿಎಫ್ ಚಾಪ್ಟ್-2 (KGF 2 in Greece) ಹವಾ ಸಿಕ್ಕಾಪಟ್ಟೆ ಜೋರಾಗುತ್ತಿದೆ. ಟ್ರೇಲರ್ ಬಿಡುಗಡೆಯಾಗಿ 24 ಗಂಟೆಯಲ್ಲಿ 10 ಮಿಲಿಯನ್ ವ್ಯೂ ಆಗಿದೆ. ನಿನ್ನೆಯಷ್ಟೇ ಮುಂಬಯಿಯಲ್ಲಿ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಇದು ಕೇವಲ ಇಡೀ ದೇಶದಲ್ಲಿ ಮಾತ್ರ ಸೆನ್ ಸೇಷನ್ ಮೂಡಿಸಿಲ್ಲ. ವಿದೇಶದಲ್ಲೂ ಹವಾ ಎಬ್ಬಿಸಿದೆ ಅನ್ನೋದು ಹೊಸ ಸುದ್ದಿ.
ಹೌದು, ಕೆಜಿಎಫ್ ಚಾಪ್ಟರ್-2 (KGF 2 ) ಪ್ರಪಂಚದಾದ್ಯಂತ ಬಿಡುಗಡೆಗೊಳ್ಳಲು ಸಜ್ಜಾಗಿದೆ. ವಿದೇಶದಲ್ಲೂ ಈ ಚಿತ್ರ ಪ್ರದರ್ಶನಗೊಳ್ಳಲಿದೆ. ಮುಖ್ಯವಾಗಿ, ಮೊದಲು ಬಾರಿ ದಕ್ಷಿಣಭಾರತ ಚಿತ್ರವೊಂದು ಗ್ರೀಸ್ ನಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಇದೇ ಮೊದಲು ಎನ್ನುವ ಹೆಗ್ಗಳಿಕೆಗೂ ಕೆಜಿಎಫ್-2 ಸಿನಿಮಾ ಭಾಜನವಾಗಿದೆ.

ಈ ಮಾಹಿತಿಯನ್ನು ಇಟಲಿಯ ಭಾರತೀಯ ಸಿನಿಮಾ ವಿತರಕರು ಖಚಿತಪಡಿಸಿದ್ದಾರೆ. ಈಗಾಗಲೇ, ಅಮೇರಿಕಾದಲ್ಲಿ ಕೇವಲ 12 ಗಂಟೆಗಳಲ್ಲಿ ಕೆಜಿಎಫ್ ಚಾಪ್ಟರ್ 2ನ 5 ಸಾವಿರ ಟಿಕೆಟ್ ಗಳು ಬಿಕರಿಯಾಗಿವೆ. ಕೆಜಿಎಫ್ ಚಾಪ್ಟರ್ 1 ಗಿಂತ, ಕೆಜಿಎಫ್ -2 (KGF 2 ) ಹವಾ ಜೋರಾಗಿದೆ. ತಾರಾಗಣದಲ್ಲೂ ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಸಂಜಯ್ ದತ್, ಪ್ರಕಾಶ್ ರಾಜ್ ಮುಂತಾದ ಘಟಾನುಘಟಿಗಳು ಇದ್ದಾರೆ. ಕೆಜಿಎಫ್ -2 ಕನ್ನಡ ಸೇರಿದಂತೆ, ಏಕಕಾಲದಲ್ಲಿ ತಮಿಳು ತೆಲುಗು, ಮಲಯಾಳಂ, ಹಿಂದಿಯಲ್ಲೂ ಬಿಡುಗಡೆಗೊಳ್ಳಲಿದೆ.

ಇದನ್ನೂ ಓದಿ : Mask : ಮಾಸ್ಕ್ ಬೇಕೇ ? ಬೇಡವೇ ? : ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ ಬಿಸಿ ಬಿಸಿ ಚರ್ಚೆ !
ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಪ್ರಕಾರ, ಕೆಜಿಎಫ್ 1 ಸಿನಿಮಾ ಮಾಡುವಾಗಲೇ ಚಾಪ್ಟರ್ 2 ಕಥೆಯನ್ನು ವಿಸ್ತರಣೆಗೆ ಚಿಂತನೆ ನಡೆಸಿದ್ದರಂತೆ. ಅದದೇ ಕತೆಯ ವಿಸ್ತರಣೆಯನ್ನು ಚಾಪ್ಟರ್ 2ನಲ್ಲಿ ಮಾಡಿದೆ. ಚಾಪ್ಟರ್ 1 ನೋಡಿದವರಿಗೆ, ಚಾಪ್ಟರ್ 2 ಮತ್ತಷ್ಟು ಇಷ್ಟವಾಗುವ ರೀತಿ ಸಿನಿಮಾ ಮಾಡಿದ್ದಾರಂತೆ. ಹಾಗಂತ, ಚಾಪ್ಟರ್ 1 ನೋಡದೇ ಇರುವವರೂ ಕೂಡ , ಚಾಪ್ಟರ್ 2 ಅನ್ನು ನೋಡಬಹುದು. ಇಲ್ಲಿ ಯಾವುದೇ ಗೊಂದಲ ಇರುವುದಿಲ್ಲ ಎಂದು ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ.

ಏನೇ ಹೇಳಿ, ಆರ್ ಆರ್ ಆರ್ ನಂತೆಯೇ ಕೆಜಿಎಫ್ -2 ಹವಾ ಜೋರಾಗುತ್ತಿದೆ. ಮೇಕಿಂಗ್ ನಲ್ಲಿ ಆರ್ ಆರ್ ಆರ್ ಸಿನಿಮಾದ ಗುಣಮಟ್ಟದಷ್ಟೇ ಇದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹಾಗೆ ನೋಡಿದರೆ, ರಾಧೇಶ್ಯಾಮ್ ಇದೇ ರೀತಿ ಹವಾ ಸೃಷ್ಟಿ ಮಾಡಿತಾದರೂ, ನಿರೀಕ್ಷೆಯನ್ನು ಉಳಿಸಿಕೊಳ್ಳಲಿಲ್ಲ. ಆದರೆ, ಕೆಜಿಎಫ್-2 ಗೂ ಕೂಡ ಅಂತದೇ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಚಿತ್ರತಂಡ ಹೇಳುವ ಪ್ರಕಾರ, ಸಿನಿಮಾ ಬಹಳ ಅಚ್ಚುಕಟ್ಟಾಗಿ ಮೂಡಿ ಬಂದಿದೆಯಂತೆ. ಈ ಮಧ್ಯೆ, ತಮಿಳಿನ ವಿಜಯ್ ಅಭಿನಯದ ಬೀಸ್ಟ್ ಸಿನಿಮಾ ಏಕೋ ಕೆಜಿಎಫ್ ಮುಂದೆ ಮಂಕಾಗಿದೆ. ಕೇರಳ, ತಮಿಳುನಾಡನ್ನು ಹೊರತುಪಡಿಸಿ ಮಿಕ್ಕೆಡೆ ಬೀಸ್ಟ್ ಸದ್ದು ಮಾಡುತ್ತಿಲ್ಲ.
Experience #KGFChapter2 in @IMAX from April 14th worldwide.#KGF2onApr14@Thenameisyash @prashanth_neel @VKiragandur @hombalefilms @duttsanjay @TandonRaveena @SrinidhiShetty7 @bhuvangowda84 @RaviBasrur @VaaraahiCC @excelmovies @AAFilmsIndia @PrithvirajProd @DreamWarriorpic pic.twitter.com/mgPavB6Oa8
— Prashanth Neel (@prashanth_neel) April 6, 2022
ಇದನ್ನೂ ಓದಿ : Shahrukh Khan : ತಮಿಳು ನಿರ್ದೇಶಕರ ಸಿನಿಮಾದಲ್ಲಿ ನಟಿಸುವ ಸುಳಿವು ಕೊಟ್ಟ ಶಾರುಖ್ ಖಾನ್
( KGF 2 in Greece Kgf is the first south Indian film going tobe release in Greece)