ವಿಶ್ವಾದ್ಯಂತ ‘ಕೆಜಿಎಫ್ ಚಾಪ್ಟರ್ 2’ ಹವಾ ಜೋರಾಗಿದೆ. ಭಾರತದ ಚಿತ್ರ ಇತಿಹಾಸಕ್ಕೆ ಹೊಸ ಹೆಸರು ಸ್ಥಾನಮಾನ ತಂದುಕೊಟ್ಟ ಈ ಸಿನಿಮಾ ನೋಡಲು ಅಭಿಮಾನಿ ಗಳು, ಚಿತ್ರರಂಗದ ಗಣ್ಯರು ಸೇರಿದಂತೆ ಎಲ್ಲ ರಂಗದವರೂ ಕಾತುರರಾಗಿದ್ದಾರೆ. ಹೀಗಾಗಿ ಕೆಜಿಎಫ್ ಮೂರು ದಿನದಲ್ಲೇ 400 ಕೋಟಿ ಕ್ಲಬ್ ಸೇರಿದೆ. ಇತ್ತೀಚೆಗಷ್ಟೇ ಭಾರತದ ಸಿನಿ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬರೆದ ಹೊಂಬಾಳೆ ಫಿಲ್ಮ್ಷ ಮತ್ತು ಕ್ರೀಡಾಲೋಕದಲ್ಲಿ ಕಪ್ ನಮ್ಮದೇ ಎಂಬ ಟ್ರೋಲ್ ಮೂಲಕವೇ ಗುರುತಿಸಿ ಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಹೊಸ ಒಪ್ಪಂದ ಮಾಡಿಕೊಂಡಿವೆ. ಕ್ರೀಡೆ ಹಾಗೂ ಮನರಂಜನೆಯಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಲು ಜತೆಯಾಗಿ ಸಾಗುವುದಾಗಿ ಎರಡೂ ಸಂಸ್ಥೆಗಳು ಘೋಷಿಸಿವೆ.

ಈ ಘೋಷಣೆಯ ಬೆನ್ನಲ್ಲೇ ಈಗ ಐಪಿಎಲ್ ಬಯೋಬಬಲ್ ಒಳಗಡೆಯೇ ಆರ್ಸಿಬಿ ಆಟಗಾರರು ‘ಕೆಜಿಎಫ್ ಚಾಪ್ಟರ್ 2’ ವೀಕ್ಷಿಸಿದ್ದಾರೆ. ಏಪ್ರಿಲ್ ೧೭ ರ ರವಿವಾರದಂದು ಆರ್ ಸಿಬಿ ತಂಡ ಈ ಸಿನಿಮಾ ನೋಡಿದೆ. ಈ ಬಗ್ಗೆ ಈಗಾಗಲೇ ಆರ್ಸಿಬಿ ಈ ಬಗ್ಗೆ ಟ್ವೀಟ್ ಹಂಚಿಕೊಂಡಿದ್ದು, ಶೋ ಆರಂಭಗೊಂಡಿದೆ ಎಂದು ಬರೆದುಕೊಂಡಿದೆ. ‘ಆರ್ಸಿಬಿ ಬಯೋಬಬಲ್ನಲ್ಲಿ ಕೆಜಿಎಫ್ ಚಾಪ್ಟರ್ 2 ವಿಶೇಷ ಪ್ರದರ್ಶನ. ಬ್ಲಾಕ್ಬಸ್ಟರ್ ಚಿತ್ರವನ್ನು ವೀಕ್ಷಿಸಲು ಎಲ್ಲಾ ಸಿದ್ಧತೆ ಪೂರ್ಣಗೊಂಡಿದೆ’ ಎಂದು ಆರ್ಸಿಬಿ ಟ್ವೀಟ್ ಮಾಡಿದೆ. ನಟ, ನಿರೂಪಕ ದಾನಿಶ್ ಸೇಠ್ ಚಿತ್ರ ಪ್ರದರ್ಶನದ ಫೋಟೋ ಹಂಚಿಕೊಂಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.
ಕೆಜಿಎಫ್ ನಂತಹ ಯಶಸ್ವಿ ಸಿನಿಮಾ ನೀಡಿದ ಹೊಂಬಾಳೆ ಫಿಲ್ಮ್ಸ್ ಇತ್ತೀಚಿಗಷ್ಟೇ ಆರ್ಸಿಬಿ ಜೊತೆ ಕೈಜೋಡಿಸಿದೆ. ಈ ಬಗ್ಗೆ ಮಾತನಾಡಿದ್ದ ನಿರ್ಮಾಪಕ ವಿಜಯ್ ಕಿರಂಗದೂರು, ಕ್ರೀಡೆ ಮತ್ತು ಚಲನಚಿತ್ರ ಮನರಂಜನಾ ವಲಯದಲ್ಲಿ ಅಭಿಮಾನಿಗಳಿಗೆ ಮ್ಯಾಜಿಕ್ ಮೂಮೆಂಟ್‌ಗಳನ್ನು ಸೃಷ್ಟಿಸಲು ನಾವು ಒಟ್ಟಾಗಿ ಪ್ರಯತ್ನಿಸುತ್ತೇವೆ ಎಂದಿದ್ದರು.

ಬಳಿಕ ಆರ್ಸಿಬಿ ಹಾಗೂ ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಾ ಸದ್ದು ಮಾಡಿದ್ದವು. ಈಗ ಎಲ್ಲರೂ ಒಂದಾಗಿ ಕೆಜಿಎಫ್ ಸಿನಿಮಾ ನೋಡಿದ್ದಾರೆ. ಚಿತ್ರದ ರಿಲೀಸ್ ಸಂದರ್ಭದಲ್ಲಿ ಆರ್ಸಿಬಿ ಆಟಗಾರರನ್ನು ಒಳಗೊಂಡ ‘ಕೆಜಿಎಫ್’ ಪ್ರೋಮೋ ಒಂದನ್ನು ರಿಲೀಸ್ ಮಾಡಲಾಗಿತ್ತು. ಅದು ವೈರಲ್ ಆಗಿತ್ತು.
KGF Chapter 2 Special Premiere at the RCB Bio Bubble tonight & we’re all set for the blockbuster! Here’s a sneak peek. More to follow…@hombalefilms @TheNameIsYash @VKiragandur @prashanth_neel @ChaluveG @duttsanjay @TandonRaveena #RCB #ನಮ್ಮRCB #RCBxHombale #KGF2 #KGFChapter2 pic.twitter.com/uQAha67NaW
— Royal Challengers Bangalore (@RCBTweets) April 17, 2022
ಆರ್ಸಿಬಿ ತಂಡ ಚಿತ್ರ ವೀಕ್ಷಣೆ ನಡೆಸುತ್ತಿದ್ದು, ಈ ಬಗ್ಗೆ ಕೆಜಿಎಫ್-2 ತಂಡ ಪೋಸ್ಟರ್ ಗಳನ್ನು ಕೂಡ ರಿಲೀಸ್ ಮಾಡಿದೆ. ಇನ್ನೊಂದೆಡೆ ಬೆಂಗಳೂರು ಮೂಲದ ಈ ಎರಡು ದೈತ್ಯ ಸಿನಿಮಾ ಹಾಗೂ ಕ್ರೀಡಾ ಶಕ್ತಿಗಳ ಸಂಗಮವನ್ನು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಸಖತ್ತಾಗಿರೋ ಪೋಸ್ಟ್ ಹಾಗೂ ಟ್ರೋಲ್ ಗಳ ಮೂಲಕ ಸಂಭ್ರಮಿಸುತ್ತಿದ್ದಾರೆ.
ಇದನ್ನೂ ಓದಿ : ಛವಿ ಮಿತ್ತಲ್ ಗೆ ಕ್ಯಾನ್ಸರ್ : ರೋಗ ಗೆದ್ದೋ ಬರೋದಾಗಿ ಭಾವನಾತ್ಮಕ ಪೋಸ್ಟ್
ಇದನ್ನೂ ಓದಿ : ರಾಕಿಂಗ್ ಸ್ಟಾರ್ ಯಶ್ ಬಿಗ್ ಬೀ ಗೆ ಹೋಲಿಸಿದ ನಟಿ ಕಂಗನಾ : ಪೋಸ್ಟ್ ವೈರಲ್
KGF-2 Movie Team Watching RCB Match