ಮೂರು ವರ್ಷಗಳಿಂದ ಸಿನಿ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ ಸಿನಿಮಾ ಕೆಜಿಎಫ್-2. ಹಲವು ಸಂಘರ್ಷಗಳ ಬಳಿಕ ಈ ಸಿನಿಮಾ ಏಪ್ರಿಲ್ 14 ರಂದು ತೆರೆಗೆ ಬರಲು ಸಿದ್ಧವಾಗಿದೆ. ಈ ಮಧ್ಯೆ ಕೆಜಿಎಫ್-2 ಫ್ಯಾನ್ ಇಂಡಿಯಾ ಸಿನಿಮಾಗೆ ಟಕ್ಕರ್ ಕೊಡಲು ಬಾಲಿವುಡ್ ನ ಲಾಲ್ ಸಿಂಗ್ ಛಡ್ಡಾ ಸಿದ್ಧವಾಗಿತ್ತು. ಈ ಲಾಲ್ ಸಿಂಗ್ ಛಡ್ಡಾ ಬದಲು ಕೆಜಿಎಫ್-2 ಎದುರು ಜೆರ್ಸಿ ಸಿನಿಮಾ (KGF-2 vs Jersey) ನಿಂತಿದ್ದು, ಕೆಜಿಎಫ್-2 ನಮಗೆ ಯಾವುದೇ ರೀತಿಯಲ್ಲೂ ಸ್ಪರ್ಧಿಯಲ್ಲ ಎಂದು ಚಿತ್ರತಂಡ ಹೇಳಿದೆ.
ಶೂಟಿಂಗ್ ಆರಂಭವಾದಾಗಿನಿಂದಲೂ ಸುದ್ದಿಯಲ್ಲಿರೋ ಸಿನಿಮಾ ಕೆಜಿಎಫ್-2 . ಕೊರೋನಾ ಕಾರಣಕ್ಕೆ ತೆರೆಗೆ ಬರೋದಿಕ್ಕೆ ಹಿಂದೇಟು ಹಾಕಿದ ಸಿನಿಮಾ ಇನ್ನೇನು ತಿಂಗಳ ಬಳಿಕ ತೆರೆಗೆ ಬರಲು ಸಿದ್ಧವಾಗಿದೆ. ಏಪ್ರಿಲ್ 14 ರಂದು ಸಿನಿಮಾ ರಿಲೀಸ್ ಗೆ ಸಿದ್ಧತೆ ನಡೆದಿದೆ. ಈ ಮಧ್ಯೆ ಕೆಜಿಎಫ್-2 ಜೊತೆಗೇ ಅದೇ ದಿನ ಬಾಲಿವುಡ್ ಮಿಸ್ಟರ್ ಫರ್ಫೆಕ್ಟ್ ಅಮೀರ್ ಖಾನ್ ನಟನೆಯ ಲಾಲ್‌ಸಿಂಗ್ ಛಡ್ಡಾ ಕೂಡಾ ತೆರೆಗೆ ಬರಲು ಸಿದ್ಧವಾಗಿತ್ತು.
ಆದರೆ ಕೆಲ ದಿನಗಳ ಹಿಂದೆ ಅಮೀರ್ ಖಾನ್ ಸಿನಿಮಾ ಸಂಪೂರ್ಣವಾಗಿ ಸಿದ್ಧವಾಗಿಲ್ಲದೇ ಇರೋದರಿಂದ ಲಾಲ್ ಸಿಂಗ್ ಛಡ್ಡಾ ಅಗಸ್ಟ್ ನಲ್ಲಿ ನಿಮ್ಮನ್ನು ರಂಜಿಸಲಿದೆ ಎಂದು ಪ್ರೇಕ್ಷಕರಿಗೆ ಭರವಸೆ ನೀಡಿದ್ದಾರೆ. ಹೀಗಾಗಿ ಕೆಜಿಎಫ್-2 ಗೆ ಇದ್ದ ಒಂದೇ ಒಂದು ಅಡ್ಡಿಯೂ ದೂರಾಯಿತು ಎಂದು ಚಿತ್ರತಂಡ ಸಂಭ್ರಮದಲ್ಲಿ ಇರುವಾಗಲೇ ಲಾಲ್ ಸಿಂಗ್ ಛಡ್ಡಾ ಜಾಗಕ್ಕೆ ಬಾಲಿವುಡ್ ನ ಇನ್ನೊಂದು ಸಿನಿಮಾ ಜೆರ್ಸಿ ಬಂದು ಕೂತಿದೆ.
ಚಿತ್ರದ ನಿರ್ಮಾಪಕ ಅಮನ್ ಗಿಲ್ ಏಪ್ರಿಲ್ 14 ರಂದು ಜೆರ್ಸಿ ತೆರೆಗೆ ಬರ್ತಿರೋದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಮಾತ್ರವಲ್ಲ ಇದು ಕೆಜಿಎಫ್-2 ಗೆ ಯಾವುದೇ ರೀತಿಯಲ್ಲೂ ಸ್ಪರ್ಧಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಎರಡೂ ವಿಭಿನ್ನ ಕಥಾನಕವನ್ನು ಹೊಂದಿದ ಸಿನಿಮಾ. ಜೊತೆಗೆ ಏಪ್ರಿಕ್ 14 ಲಾಂಗ್ ವೆಕೇಶನ್ ಬಂದಿರೋದರಿಂದ ಫ್ಯಾಮಿಲಿ ಆಡಿಯನ್ಸ್ ಗಮನದಲ್ಲಿಟ್ಟುಕೊಂಡು ನಾವು ಈ ಸಿನಿಮಾ ರಿಲೀಸ್ ಪ್ಲ್ಯಾನ್ ಮಾಡಿದ್ದೇವೆ ಎಂದಿದ್ದಾರೆ.
ಏಪ್ರಿಲ್ 14 ಗುರುವಾರದಿಂದ ಭಾನುವಾರದ ವರೆಗೆ ಒಟ್ಟಿಗೆ ನಾಲ್ಕು ರಜಾದಿನಗಳಿವೆ. ಹೀಗಾಗಿ ಆ ದಿನಾಂಕವನ್ನು ಕೆಜಿಎಫ್-2 ನಂತಹ ಬಿಗ್ ಬಜೆಟ್ ಸಿನಿಮಾಗೆ ಆಯ್ಕೆ ಮಾಡಲಾಗಿತ್ತು. ಈಗ ಅದೇ ದಿನ ಬಾಲಿವುಡ್ ಸಿನಿಮಾ ಜೆರ್ಸಿ ಕೂಡ ತೆರೆಗೆ ಬರಲಿದೆ. ಗೌತಮ ತಿನ್ನನೂರಿ ನಿರ್ದೇಶನದ ಈ ಸಿನಿಮಾದಲ್ಲಿ ಶಾಹಿದ್ ಕಪೂರ್ ನಾಯಕರಾಗಿದ್ದು, ಮೃಣಾಲ್ ಕಪೂರ್ ಹಾಗೂ ಪಂಕಜ ಕಪೂರ್ ಕೂಡ ನಟಿಸಿದ್ದಾರೆ.
ಇದನ್ನೂ ಓದಿ : ದಿಶಾ ಪಟಾನಿ ವೇಟ್ ಲೀಫ್ಟಿಂಗ್ ವಿಡಿಯೋಗೆ ನೆಟ್ಟಿಗರು ಫಿದಾ!
ಇದನ್ನೂ ಓದಿ : ಸನ್ನಿ ಲಿಯೋನ್ ಪಾನ್ ಕಾರ್ಡ್ ಗೂ ಕನ್ನ: 2 ಸಾವಿರ ರೂಪಾಯಿ ಸಾಲ ಪಡೆದ ಭೂಪ, ದುಃಖ ತೋಡಿಕೊಂಡ ನೀಲಿತಾರೆ
( KGF-2 vs Jersey : Bollywood trouble for KGF-2 : Jersey Cinema to open on April 14)