ಸೋಮವಾರ, ಏಪ್ರಿಲ್ 28, 2025
HomeCinemaKGF 3 : ತೆರೆಗೆ ಬರುತ್ತಾ ಕೆಜಿಎಫ್-3 : ಮುಂದುವರಿಯುತ್ತೆ ರಾಕಿಬಾಯ್‌ ಅಬ್ಬರ

KGF 3 : ತೆರೆಗೆ ಬರುತ್ತಾ ಕೆಜಿಎಫ್-3 : ಮುಂದುವರಿಯುತ್ತೆ ರಾಕಿಬಾಯ್‌ ಅಬ್ಬರ

- Advertisement -

ಬರೋಬ್ಬರಿ ಮೂರು ವರ್ಷದ ನೀರಿಕ್ಷೆ ಬಳಿಕ ತೆರೆಗೆ ಬಂದ ಕೆಜಿಎಫ್ -2 (KGF Chapter 2) ಸಿನಿಮಾ ನೀರಿಕ್ಷೆ ಮೀರಿ ಯಶಸ್ಸು ಗಳಿಸಿದೆ. ಮಾತ್ರವಲ್ಲ ಏಳು ದಿನಗಳಲ್ಲೇ 700 ಕೋಟಿ ಲಾಭ ಗಳಿಸಿ ಮುನ್ನುಗ್ಗುತ್ತಿದೆ. ಹೀಗಿರುವಾಗಲೇ ಥಿಯೇಟರ್ ನಿಂದ ಹೊರಕ್ಕೆ ಬರ್ತಿರೋ ಪ್ರತಿಯೊಬ್ಬ ಅಭಿಮಾನಿಯೂ ಕೆಜಿಎಫ್-3 ತೆರೆಗೆ ಬರುತ್ತಾ ಅನ್ನೋ ಕುತೂಹಲದಲ್ಲಿ ಇದ್ದಾರೆ. ಆದರೆ ಈ ಕುತೂಹಲಕ್ಕೆ ಅಧಿಕೃತ ಉತ್ತರ ಸಿಗದೇ ಇದ್ದರೂ ಬಹುತೇಕ ಕೆಜಿಎಫ್-3 (KGF 3) ಸಿನಿಮಾ‌ ಬರೋದು ಫಿಕ್ಸ್ ಎನ್ನಲಾಗ್ತಿದೆ.

ಸದ್ಯ ದೇಶದಲ್ಲಿ ಕೆಜಿಎಫ್ ನದ್ದೇ ಚರ್ಚೆ. ಒಂದು ಕಡೆ ಕೆಜಿಎಫ್ ಗಳಿಕೆಯ ಸಂಗತಿ ಸದ್ದು ಮಾಡಿದರೇ ಇನ್ನೊಂದು ಕಡೆ ಕೆಜಿಎಫ್ ಮೂರನೇ ಭಾಗ ಬರುತ್ತೆ ಎನ್ನಲಾಗುತ್ತಿದೆ. ಇನ್ನು  ಕೆಜಿಎಫ್ 3 ಬರುತ್ತಾ, ಇಲ್ವಾ ಅನ್ನೋದರ ಬಗ್ಗೆ ನೀಲ್ ಆಗಲಿ ಯಶ್ ಆಗಲಿ ಇದು ವರೆಗೂ ಎಲ್ಲೂ ಮಾತನಾಡಿಲ್ಲ. ಅದ್ರೆ ಕೆಜಿಎಫ್ 2 ನಲ್ಲಿ ಕೆಜಿಫ್ ಚಾಪ್ಟರ್ 3 ಕ್ಲೂ ಹಾಗೂ ಚಿತ್ರದ ದೊಡ್ಡ ಮಟ್ಟ ಯಶಸ್ಸು ನೋಡಿದ ಗಾಂಧಿನಗರ ಸಿನಿಪಂಡಿತರು ಚಾಪ್ಟರ್ 3  ಬಂದ್ರು ಬರಬಹುದು ಅಂತಿದ್ದಾರೆ. ಅಲ್ಲದೆ ನೀಲ್ ಮತ್ತೆ ಯಶ್ ಜೊತೆ ಸಿನಿಮಾ ಮಾಡ್ತಿನಿ ಅಂತ ಹೇಳಿರೋದು ಈ ವಿಚಾರಕ್ಕೆ ಬಲಬಂದಿದೆ.

KGF 3 continue, hints in KGF Chapter 2

ಅಲ್ಲದೇ ಸಂದರ್ಶನವೊಂದರಲ್ಲಿ ಮಾತನಾಡಿದ ಯಶ್ ತಮ್ಮ ಗೆಟಪ್ ಸದ್ಯ ಬದಲಾಯಿಸೋದಿಲ್ಲ ಎಂಬ ಮಾತನ್ನಾಡಿದ್ದಾರೆ. ನಾವು ಸದ್ಯ ಕತೆ ಬರೆಯುತ್ತಿದ್ದೇವೆ.‌ಸಿದ್ಧಪಡಿಸುವ ಕತೆ ಏನನ್ನು ಕೇಳುತ್ತದೇಯೋ ಹಾಗೇ ಪಾತ್ರದ ಬೇಡಿಕೆಗೆ ಅಗತ್ಯ ಗೆಟಪ್ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಇದೆಲ್ಲವೂ ಕೆಜಿಎಫ್ 3 ಸಿನಿಮಾ ತೆರೆಗೆ ಬಂದು ಮತ್ತಷ್ಟು ದಾಖಲೆಯನ್ನು ಬರೆಯುತ್ತೆ ಅನ್ನೋ ಮಾತಿಗೆ ಪುಷ್ಠಿ ತಂದಿದೆ. ಸದ್ಯ ಪ್ರಶಾಂತ್ ನೀಲ್  ಸಲಾರ್ ಅಂಗಳದಲ್ಲಿದ್ದು ಸಲಾರ್ ನಂತ್ರ ಒಂದೆರಡು ತೆಲುಗು ಸಿನಿಮಾಗಳು ನೀಲ್ ಮುಂದಿವೆ.

KGF 3 continue, hints in KGF Chapter 2
ಸಾಂಕೇತಿಕ ಚಿತ್ರ

ಈ ಸಿನಿಮಾಗಳು ಮುಗಿದ ನಂತರ ಪ್ರಶಾಂತ್ ನೀಲ್ ಮತ್ತೆ ಕೆಜಿಎಫ್ ಚಾಪ್ಟರ್ 3 ಚಿತ್ರಕ್ಕೆ ಕೈ ಹಾಕುವ ಸಾಧ್ಯತೆ ಇದೆ ಎಂಬ ಮಾತು ಗಾಂಧಿನಗರ ದಲ್ಲಿ ಕೇಳಿ ಬರ್ತಿದೆ. ಒಂದೊಮ್ಮೆ ಕೆಜಿಎಫ್- 3 ತೆರೆಗೆ ಬಂದಲ್ಲಿ ಅದರಲ್ಲಿ ಮತ್ತೆ ಯಾರೆಲ್ಲ ಕಾಣಿಸಿಕೊಳ್ಳಬಹುದು ? ಅಧೀರಾನ ಹವಾ ಆ ಸಿನಿಮಾದಲ್ಲೂ ಇರುತ್ತಾ ? ಯಶ್ ಮತ್ತೆ ತಮ್ಮ ಆರ್ಭಟವನ್ನು ಮುಂದುವರಿಸುತ್ತಾರಾ ಎಂಬೆಲ್ಲ ಪ್ರಶ್ನೆಗಳು ಈಗ ಪ್ರೇಕ್ಷಕರ ಮನದಲ್ಲಿ ಮೂಡಿದ್ದು, ಇದಕ್ಕೆಲ್ಲ ಯಶ್ ಹಾಗೂ ಟೀಂ ಉತ್ತರಿಸಬೇಕಿದೆ.

ಇದನ್ನೂ ಓದಿ : ಹಿಂದಿಯಲ್ಲಿ RRR ದಾಖಲೆ ಉಡೀಸ್‌ ಮಾಡಿದ KGF 2

ಇದನ್ನೂ ಓದಿ : ಅಭಿಮಾನಿಗಳಿಗೆ ರಾಕಿಂಗ್ ಸ್ಟಾರ್ ಕೃತಜ್ಞತೆ : ಪುಟ್ಟ ಕತೆ ಜೊತೆ ಥ್ಯಾಂಕ್ಸ್ ಎಂದ ಯಶ್

KGF 3 continue, hints in KGF Chapter 2

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular