ಸೋಮವಾರ, ಏಪ್ರಿಲ್ 28, 2025
HomeCinemaYash : ಅಭಿಮಾನಿಗಳಿಗೆ ರಾಕಿಂಗ್ ಸ್ಟಾರ್ ಕೃತಜ್ಞತೆ : ಪುಟ್ಟ ಕತೆ ಜೊತೆ ಥ್ಯಾಂಕ್ಸ್ ಎಂದ...

Yash : ಅಭಿಮಾನಿಗಳಿಗೆ ರಾಕಿಂಗ್ ಸ್ಟಾರ್ ಕೃತಜ್ಞತೆ : ಪುಟ್ಟ ಕತೆ ಜೊತೆ ಥ್ಯಾಂಕ್ಸ್ ಎಂದ ಯಶ್

- Advertisement -

ಕೆಜಿಎಫ್-2 ಸಿನಿಮಾ ತೆರೆಕಂಡು ಒಂದು ವಾರ ಕಳೆದಿದೆ. ಒಂದೇ ವಾರದಲ್ಲಿ ಕೆಜಿಎಫ್-2 (KGF Chapter 2)ಹಲವು ದಾಖಲೆ ಬರೆದಿದ್ದು, ಬಾಲಿವುಡ್ ನಲ್ಲಂತೂ ಎಲ್ಲ ದಾಖಲೆಯನ್ನು ಮುರಿದು ಎಲ್ಲರ ಮನಗೆದ್ದಿದೆ. ಈ ಮಧ್ಯೆ ಈಗಾಗಲೇ 500 ಕೋಟಿ ಕ್ಲಬ್ ಸೇರಿರೋ ಸಿನಿಮಾದ ಯಶಸ್ಸಿಗೆ ಫುಲ್ ಖುಷಿಯಾಗಿರೋ ನಟ ಯಶ್ (Yash) ತಮ್ಮ ಅಭಿಮಾನಿಗಳಿಗೆ ಒಂದು ಪುಟ್ಟ ಕತೆ ಮೂಲಕ ತಮ್ಮ ಧನ್ಯವಾದ ಹಾಗೂ ಗೌರವ ಸಲ್ಲಿಸಿದ್ದಾರೆ.

ಬರ ಬಿದ್ದ ಊರಿನ ಜನರು ಮಳೆಗಾಗಿ ಪ್ರಾರ್ಥಿಸಲು ಒಂದು ಬಯಲಿನಲ್ಲಿ ಸೇರುತ್ತಾರೆ. ಅಲ್ಲಿ ಮಳೆಗಾಗಿ ಪ್ರಾರ್ಥಿಸಲು ಬಂದ ಜನರ ಪೈಕಿ ಒಂದು ಬಾಲಕ ಛತ್ರಿಯೊಂದಿಗೆ ಬಂದಿರು ತ್ತಾನೆ. ಇದು ಆ ಬಾಲಕನ ಶೃದ್ಧೆ ಹಾಗೂ ಪ್ರಾರ್ಥನೆ ಮೇಲಿರುವ ನಂಬಿಕೆ. ಇಲ್ಲಿ ಆ ಪುಟ್ಟ ಬಾಲಕ ನಾನು ಎಂದಿರುವ ಯಶ್, ನಾನಿಟ್ಟ ನಂಬಿಕೆ ನಿಜವಾಗಿದೆ. ನನ್ನ ತಪಸ್ಸು ಫಲಿಸಿದೆ. ಧನ್ಯವಾದ ಅನ್ನೋದು ಚಿಕ್ಕ ಶಬ್ಧವಾಗುತ್ತದೆ. ಆದರೆ ನಿಮ್ಮೆಲ್ಲರ ಪ್ರೀತಿಗೆ, ಸಿನಿಮಾಗೆ ನೀವುಕೊಟ್ಟ ಯಶಸ್ಸಿಗೆ ನಾನು ನನ್ನ ಹೃದಯಾಂತರಾಳದಿಂದ ಧನ್ಯವಾದ ಹೇಳುತ್ತೇನೆ ಎಂದು ಯಶ್ ಹೇಳಿಕೊಂಡಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರೋ ಯಶ್ ತಮ್ಮ ಕೋಟ್ಯಾಂತರ ಅಭಿಮಾನಿಗಳಿಗೆ ಇಂಗ್ಲೀಷ್ ನಲ್ಲಿ ಧನ್ಯವಾದ ಹೇಳಿದ್ದಾರೆ. ಇನ್ನೂ ಕೆಜಿಎಫ್-2 ವಿಶ್ವದಾದ್ಯಂತ ಯಶಸ್ವಿ ಪಯಣ ಮುಂದುವರೆಸಿದ್ದು ಏಳು ದಿನಗಳಲ್ಲಿ ಭರ್ಜರಿ 700 ಕೋಟಿ ಹಣ ಗಳಿಸಿ ತನ್ನ ದಂಡಯಾತ್ರೆ ಮುಂದುವರೆಸಿದೆ. ಯಶ್ ತಮ್ಮ ಧನ್ಯವಾದದಲ್ಲಿ ಕೆಜಿಎಫ್-2 ಚಿತ್ರತಂಡದ ಅನುಭವವನ್ನು ಹಂಚಿಕೊಂಡಿದ್ದು, ನನ್ನ ಚಿತ್ರತಂಡದ ಪರವಾಗಿಯೂ ನಿಮಗೆ ಧನ್ಯವಾದ ಹೇಳುತ್ತೇನೆ.

ಈ ಸಿನಿಮಾದ ಮೂಲಕ ಒಂದು ಸಿನಿಮ್ಯಾಟಿಕ್ ಅನುಭವವನ್ನು ನಮ್ಮ ಪ್ರೇಕ್ಷಕರಿಗೆ ನೀಡಬೇಕೆಂಬುದು ನಮ್ಮ ಅನುಭವವಾಗಿತ್ತು. ಅಂತೆಯೇ ಸಿನಿಮಾ ನೀಡಿದ್ದೇವೆ. ಅದನ್ನು ನೀವೆಲ್ಲರೂ ಎಂಜಾಯ್ ಮಾಡಿದ್ದೀರಿ. ಪ್ರೀತಿ ಆಶೀರ್ವಾದದ ಮಳೆ ಸುರಿಸಿದ್ದಿರಿ. ಅದಕ್ಕಾಗಿ ಧನ್ಯವಾದ ಎಂದಿದ್ದಾರೆ. ಅಲ್ಲದೇ ಕೊನೆಯಲ್ಲಿ ನಾನು ಮೊದಲೇ ಹೇಳಿದ್ದೆನಲ್ಲ ನಿಮ್ಮ ಹೃದಯ ನನ್ನ ಏರಿಯಾ ಎಂದು ಅಭಿಮಾನಿಗಳ ಮನಗೆಲ್ಲುವ ಡೈಲಾಗ್ ಹೊಡೆದಿದ್ದಾರೆ. ಸದ್ಯ ಸಿನಿಮಾದ ಯಶಸ್ಸಿನ ಬಳಿಕ ವಿದೇಶದ ಕಡಲತೀರದಲ್ಲಿ ಕುಟುಂಬದ ಜೊತೆ ಫ್ಯಾಮಿಲಿ ಟೈಂ ಎಂಜಾಯ್ ಮಾಡ್ತಿರೋ ಯಶ್ ಅಲ್ಲಿಂದಲೇ ಈ ವಿಡಿಯೋ ಮಾಡಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ : ಅಮುಲ್​​ ಕಾರ್ಟೂನ್​​ ರೂಪದಲ್ಲಿ ಮೂಡಿಬಂತು ರಾಕಿ ಭಾಯ್​ ಚಿತ್ರ

ಇದನ್ನೂ ಓದಿ : ಹಿಂದಿಯಲ್ಲಿ RRR ದಾಖಲೆ ಉಡೀಸ್‌ ಮಾಡಿದ KGF 2

KGF Chapter 2 Grand Succuss Yash Thanks to fans

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular