ಸೋಮವಾರ, ಏಪ್ರಿಲ್ 28, 2025
HomeCinemaKGF Chapter 2 OTT : ಕೆಜಿಎಫ್ ಚಾಪ್ಟರ್ 2 ಮತ್ತೊಂದು ದಾಖಲೆ : OTT...

KGF Chapter 2 OTT : ಕೆಜಿಎಫ್ ಚಾಪ್ಟರ್ 2 ಮತ್ತೊಂದು ದಾಖಲೆ : OTT ಹಕ್ಕು ದಾಖಲೆಯ ಮೊತ್ತಕ್ಕೆ ಸೇಲ್‌

- Advertisement -

ಭಾರತೀಯ ಚಿತ್ರರಂಗದಲ್ಲಿಯೇ ಹೊಸ ಇತಿಹಾಸವನ್ನು ಸೃಷ್ಟಿಸಿರುವ ಕೆಜಿಎಫ್ ಚಾಪ್ಟರ್ 2 (KGF Chapter 2) ಮತ್ತೊಂದು ದೊಡ್ಡ ದಾಖಲೆ ಬರೆದಿದೆ. ಇಂದಿಗೂ ಬಹುತೇಕ ಕಡೆಗಳಲ್ಲಿ ಹೌಸ್‌ಪುಲ್‌ ಪ್ರದರ್ಶನವನ್ನು ಕಾಣುತ್ತಿರುವ ಕೆಜಿಎಫ್‌ ಸಿನಿಮಾ ಇದೀಗ OTT ಹಕ್ಕನ್ನು ದಾಖಲೆಯ ಮೊತ್ತಕ್ಕೆ ಮಾರಾಟ ಮಾಡಿದೆ. ಇದು ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಹೊಸ ದಾಖಲೆಯಾಗಿದೆ.

ಎಪ್ರಿಲ್‌ 14 ರಂದು ತೆರೆ ಕಂಡ ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಕೆಜಿಎಫ್‌ ಸಿನಿಮಾ ಭಾರತೀಯ ಬಾಕ್ಸ್‌ ಆಫೀಸ್‌ ಮಾತ್ರವಲ್ಲದೇ ವಿದೇಶಗಳಲ್ಲಿ ಅಸಾಧಾರಣ ಪ್ರದರ್ಶನವನ್ನು ನೀಡಿದೆ. ಪ್ರಶಾಂತ್‌ ನೀಲ್‌ ನಿರ್ದೇಶನದಲ್ಲಿ ಸಂಜಯ್‌ ದತ್‌, ರವೀನಾ ಟಂಡನ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕೆಜಿಎಫ್‌ ಸಿನಿಮಾ ಎಲ್ಲಾ ದಾಖಲೆಗಳನ್ನೂ ಧೂಳಿಪಟ ಮಾಡಿದೆ.

ಕೆಲವೊಂದು ವರದಿಯ ಪ್ರಕಾರ ಕೆಜಿಎಫ್ 2 ರ OTT ಹಕ್ಕುಗಳು ಈಗಾಗಲೇ ಮಾರಾಟವಾಗಿವೆ. ಅಲ್ಲದೇ ಬರೋಬ್ಬರಿ 320 ಕೋಟಿ ರೂಪಾಯಿಗೆ ಓಟಿಟಿ ದೈತ್ಯ ಕಂಪೆನಿ ಖರೀದಿಸಿದೆ. ಇದು ಭಾರತದಲ್ಲಿನ ಓಟಿಟಿ ಇತಿಹಾಸದಲ್ಲಿಯೇ ದೊಡ್ಡ ಡೀಲ್‌ ಆಗಿದೆ ಎಂದು ಹೇಳಲಾಗುತ್ತಿದೆ.

ಕೆಜಿಎಫ್‌ ಸಿನಿಮಾವನ್ನು ಸಿನಿ ರಸಿಕರು ಮೆಚ್ಚಿಕೊಂಡಿದ್ದಾರೆ. ಸಿನಿಮಾ ವೀಕ್ಷಣೆ ಮಾಡಿರುವ ಪ್ರತಿಯೊಬ್ಬ ಪ್ರೇಕ್ಷಕ ಕೂಡ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಹೀಗಾಗಿ ಆನ್‌ಲೈನ್‌ನಲ್ಲಿಯೂ ಗಣನೀಯ ಆದಾಯವನ್ನು ತರುವ ನಿರೀಕ್ಷೆಯನ್ನು ಹೊಂದಲಾಗಿದೆ. ಅಮೆಜಾನ್‌ ಪ್ರೈಂ ವಿಡಿಯೋ ಓಟಿಟಿ ಕಂಪೆನಿ ಕೆಜಿಎಫ್‌ ಸಿನಿಮಾ ಖರೀದಿಸಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಖಚಿತತೆ ಇಲ್ಲ.

ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ. ಕೆಜಿಎಫ್‌ ಸಿನಿಮಾ ಈಗಾಗಲೇ ಚಿತ್ರಮಂದಿರಗಳಲ್ಲಿ ಹೌಸ್‌ಪುಲ್‌ ಪ್ರದರ್ಶನವನ್ನು ಕಾಣುತ್ತಿದೆ. ಹೀಗಾಗಿ ಓಟಿಟಿ ಫ್ಲ್ಯಾಟ್‌ ಫಾರ್ಮ್‌ನಲ್ಲಿ ಅಷ್ಟು ಬೇಗ ಕಾಣಿಸಿಕೊಳ್ಳುವುದು ಅನುಮಾನ. ಆದರೂ ಕೂಡ ಕೆಜಿಎಫ್‌ ಎಲ್ಲಾ ರೀತಿಯಲ್ಲಿಯೂ ದಾಖಲೆಯ ಮೇಲೆ ದಾಖಲೆಯನ್ನು ಬರೆಯುತ್ತಿದೆ.

ಇದನ್ನೂ ಓದಿ :  ಯಶ್ ಮುಂದಿನ ಸಿನಿಮಾ ಯಾವುದು: ಕೊನೆಗೂ ಸಿಕ್ತು ಪ್ರಶ್ನೆಗೆ ಉತ್ತರ

ಇದನ್ನೂ ಓದಿ : ಬರ್ತಡೇಯಂದು ಹೊಸ ಸಿನಿಮಾ ಘೋಷಿಸಿದ ಸಾಯಿ ಪಲ್ಲವಿ: ಕನ್ನಡದಲ್ಲಿ ಡಬ್ಬಿಂಗ್​ ಮಾಡಿದ ನಟಿ

KGF Chapter 2 made another big record, sold OTT Rights for huge amount

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular