KGF Chapter 2 Piracy Leak: ಕೆಜಿಎಫ್ ಸಿನಿಮಾದ ಬಳಿಕ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದ್ದ ಒಂದೇ ಒಂದು ಪ್ರಶ್ನೆ ಅಂದರೆ ಕೆಜಿಎಫ್ 2 ಸಿನಿಮಾ ನೋಡೋ ಭಾಗ್ಯ ಯಾವಾಗ ಸಿಗುತ್ತೆ ಅನ್ನೋದು. ಸಾಕಷ್ಟು ಅಡೆ ತಡೆಗಳನ್ನು ದಾಟಿ ಕೊನೆಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾ ಪ್ರೇಕ್ಷಕರ ಎದುರು ಬರುವಲ್ಲಿ ಯಶಸ್ವಿಯಾಗಿದೆ. ದೇಶ – ವಿದೇಶಗಳಲ್ಲಿ ಇಂದು ಸಿನಿಮಾ ತೆರೆಕಂಡಿದ್ದು ಬಾಕ್ಸಾಫೀಸಿನಲ್ಲಿ ಮೊದಲೇ ದಿನವೇ ಅನೇಕ ದಾಖಲೆಗಳನ್ನು ರಚಿಸುವಲ್ಲಿ ಕೆಜಿಎಫ್ 2 ಯಶಸ್ವಿಯಾಗಿದೆ. ಸಿನಿಮಾ ನೋಡಿ ಬಂದ ಅಭಿಮಾನಿಗಳು ಕೂಡ ಕೆಜಿಎಫ್ 2 ಸಿನಿಮಾ ನೋಡೋದು ಕಣ್ಣಿಗೆ ಹಬ್ಬ ಅಂತ ವರ್ಣನೆ ಮಾಡ್ತಿದ್ದಾರೆ.
ಆದರೆ ಈ ಎಲ್ಲ ಸಂಭ್ರಮಗಳ ನಡುವೆ ಕೆಜಿಎಫ್ 2 ಚಿತ್ರತಂಡಕ್ಕೆ ಹೊಸ ಸಂಕಷ್ಟವೊಂದು ಎದುರಾಗಿದೆ. ಸಿನಿಮಾ ಬಿಡುಗಡೆಯಾಗಿ ಇನ್ನೂ ಒಂದು ದಿನ ಕೂಡ ಪೂರ್ಣಗೊಂಡಿಲ್ಲ. ಅಷ್ಟರಲ್ಲಾಗಲೇ ಈ ಸಿನಿಮಾ ಪೈರಸಿ ಕಾಟಕ್ಕೆ ಗುರಿಯಾಗಿದೆ. ಟೊರೆಂಟ್ ಸೈಟ್ಗಳಲ್ಲಿ ಕೆಜಿಎಫ್ 2 ಹೆಚ್ಡಿ ಗುಣ ಮಟ್ಟದ ಸಿನಿಮಾ ಸ್ಟ್ರೀಮಿಂಗ್ ಆಗಿದೆ.
ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ 2ವೀಕ್ಷಿಸಿದವರಲ್ಲಿ ಯಾವುದೇ ಕಾರಣಕ್ಕೂ ಸಿನಿಮಾದ ವಿಡಿಯೋ ತುಣುಕು ಹಾಗೂ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಇದರ ಜೊತೆಯಲ್ಲಿ ಪೈರಸಿ ವಿರುದ್ಧ ನಾವೆಲ್ಲರೂ ಹೋರಾಡುವ ಸಮಯ ಬಂದಿದೆ ಎಂದೂ ಬರೆದುಕೊಂಡಿದ್ದಾರೆ.
ಕೆಜಿಎಫ್ 2 ಸಿನೆಮಾ ದೇಶದಲ್ಲಿ ಮಾತ್ರವಲ್ಲದೇ 75 ದೇಶಗಳಲ್ಲಿ ಭರ್ಜರಿ ಪ್ರದರ್ಶನ ಕಾಣೂತ್ತಿದೆ. ಅಮೆರಿಕಾ, ಯುರೋಪ್ ರಾಷ್ಟ್ರಗಳು, ಯುಎಇ, ಸ್ವಿಡ್ಜರ್ಲ್ಯಾಂಡ್, ಕುವೈತ್, ರಷ್ಯಾ, ಗ್ರೀಸ್ ಸೇರಿದಂತೆ ವಿವಿಧ ದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇಷ್ಟೊಂದು ದೇಶಗಳಲ್ಲಿ ಪ್ರದರ್ಶನ ಮೊದಲ ಸಿನಿಮಾ ಇದಾಗಿದೆ.
ಇದನ್ನು ಓದಿ : KGF Chapter 2 Release : ವಿಶ್ವದಾದ್ಯಂತ ರಾಕಿ ಬಾಯ್ ಆರ್ಭಟ : ಕೆಜಿಎಫ್ 2 ಸಿನಿಮಾ ನೋಡಿ ಫ್ಯಾನ್ಸ್ ಪುಲ್ ಫಿದಾ
ಇದನ್ನೂ ಓದಿ : KGF Prashant Neel: ಕೆಜಿಎಫ್ ಬಿಡುಗಡೆ ಸಮಯದಲ್ಲೇ ನಿರ್ದೇಶಕ ಪ್ರಶಾಂತ್ ನೀಲ್ ಗೆ ಭಯ ಏಕೆ ಗೊತ್ತೇ?
kgf chapter 2 piracy Leak in online platforms full hd video available in torrents