ಸಿನಿಮಾಗಳು ರಿಲೀಸ್ ಆದ ಮೇಲೆ ಹವಾಕ್ರಿಯೇಟ್ ಮಾಡೋದು ಹಳೆ ಸ್ಟೈಲ್. ಈಗಿನ ಸಿನಿಮಾಗಳು ರಿಲೀಸ್ ಗೂ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿವೆ. ಅದರಲ್ಲೂ ಕೆಜಿಎಫ್- 2 (KGF Chapter 2) ಸಿನಿಮಾವಂತೂ ಒಂದೊಂದೆ ಸಖತ್ ಸುದ್ದಿಗಳನ್ನು ಹಂಚಿಕೊಳ್ಳೋ ಮೂಲಕವೇ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸುತ್ತಿದೆ. ಇತ್ತೀಚಿಗಷ್ಟೇ ಅಭಿಮಾನಿಗಳಿಗೆ ಸಿನಿಮಾ ಬಗ್ಗೆ ಆಯ್ಕೆ ಸ್ವಾತಂತ್ರ್ಯ ನೀಡಿದ್ದ ಸಿನಿಮಾ ತಂಡ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದೆ.
ಬಿಡುಗಡೆಗೆ ಸಿದ್ಧವಾಗಿ ಸಖತ್ ಕುತೂಹಲ ಮೂಡಿಸುತ್ತಿರುವ ಕೆಜಿಎಫ್-2 ಚಿತ್ರತಂಡ ಮಹಿಳಾ ದಿನಾಚರಣೆಗಾಗಿ ವಿಶೇಷ ಪೋಸ್ಟರ್ ವೊಂದನ್ನು ರಿಲೀಸ್ ಮಾಡಿದೆ. ಈ ಪೋಸ್ಟರ್ ಕೆಜಿಎಫ್-2 ಸಿನಿಮಾಗಾಗಿ ಕೆಲಸ ಮಾಡಿದ ಬಹುತೇಕ ಮಹಿಳಾ ನಟಿಯರನ್ನು ಒಳಗೊಂಡಿದೆ. ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನೀರಿಕ್ಷಿತ ಕೆಜಿಎಫ್-2 ಸಿನಿಮಾದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್, ಕನ್ನಡದ ಹಿರಿಯ ನಟಿ ಮಾಳವಿಕಾ ಅವಿನಾಶ್, ಶ್ರೀನಿಧಿ ಶೆಟ್ಟಿ, ಈಶ್ವರಿರಾವ್, ರಚನಾ ಜೋಯಿಸ್, ರೂಪಾ ರಾಯಪ್ಪ ಸೇರಿದಂತೆ ಹಲವು ಮಹಿಳಾ ಘಟಾನುಘಟಿ ನಟಿಯರು ನಟಿಸಿದ್ದಾರೆ.
ಈ ಎಲ್ಲ ಕಲಾವಿದೆಯರ ಪೋಟೋವನ್ನೊಳಗೊಂಡ ಪೋಸ್ಟರ್ ನ್ನು ಚಿತ್ರತಂಡ ರಿಲೀಸ್ ಮಾಡಿದೆ. ಈ ಪೋಸ್ಟರ್ ಗೆ ಲಕ್ಷಾಂತರ ಲೈಕ್ಸ್ ಹರಿದು ಬಂದಿದೆ. ಕೆಜಿಎಫ್ ಮೊದಲ ಸಿನಿಮಾದಲ್ಲೂ ಮಹಿಳಾ ನಟಿಯರು ಮಿಂಚಿದ್ದರು. ಶ್ರೀನಿಧಿ ಶೆಟ್ಟಿ ಹಾಗೂ ರಾಕಿಂಗ್ ಸ್ಟಾರ್ ಯಶ್ ತಾಯಿ ಪಾತ್ರ ಮಾಡಿದ ನಟಿಮಣಿ ಸಖತ್ ಪ್ರಸಿದ್ಧಿ ಗಳಿಸಿದ್ದರು. ಕೇವಲ ರವೀನಾ ಟಂಡನ್,ಮಾಳವಿಕಾ ಮಾತ್ರವಲ್ಲದೇ ಕನ್ನಡದ ಸುಧಾರಾಣಿ ಹಾಗೂ ಶೃತಿ ಕೂಡ ಕೆಜಿಎಫ್-2 ದಲ್ಲಿ ಪ್ರಮುಖ ಪಾತ್ರವಹಿಸಿದ್ದು, ರವೀನಾ ಟಂಡನ್ ಹಾಗೂ ಈಶ್ವರಿರಾವ್ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ.
ಸದ್ಯ ಸ್ಯಾಂಡಲ್ ವುಡ್ ಸೇರಿದಂತೆ ವಿಶ್ವದಾದ್ಯಂತ ಕೆಜಿಎಫ್-2 ( KGF Chapter 2 ) ಜ್ವರ ಜೋರಾಗಿದ್ದು ಸಿನಿಮಾ ರಿಲೀಸ್ ದಿನ ಸಮೀಪಿಸುತ್ತಿದ್ದಂತೆ ಪ್ರಚಾರವೂ ಜೋರಾಗಿದೆ. ಮಾರ್ಚ್ 27 ರಂದು ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದ್ದು ಹಲವು ದಾಖಲೆ ಬರೆಯೋ ವಿಶ್ವಾಸ ಮೂಡಿಸಿದೆ. ಇತ್ತೀಚಿಗಷ್ಟೇ ಸಿನಿಮಾ ತಂಡ ಕೆಜಿಎಫ್-2 ಕುರಿತು ಆಯ್ಕೆಯನ್ನು ಅಭಿಮಾನಿಗಳಿಗೆ ನೀಡಿ ಸುದ್ದಿಯಾಗಿತ್ತು. ನಿಮಗೆ ಟ್ರೇಲರ್, ಸಾಂಗ್, ಫರ್ಸ್ಟ್ ಲುಕ್ ಯಾವುದು ಬೇಕು ಆಯ್ಕೆ ಮಾಡಿ ಓಟು ಹಾಕಿ ಎಂದು ಮನವಿ ಮಾಡಿತ್ತು. ಇದರಲ್ಲಿ ಶೇಕಡಾ ೮೦ ರಷ್ಟು ಅಭಿಮಾನಿಗಳು ಟ್ರೇಲರ್ ಆಯ್ಕೆ ಮಾಡಿದ್ದರು. ಹೀಗಾಗಿ ಮಾರ್ಚ್ 27 ರಂದು ಟ್ರೇಲರ್ ತೆರೆಗೆ ಬರಲಿದೆ.
You give birth. You nourish. You sacrifice.
— Hombale Films (@hombalefilms) March 8, 2022
You love. You care.
You are Fierce and You are Powerful.
You are the creator. You are the universe.
Saluting them all.#KGFChapter2 @TandonRaveena @SrinidhiShetty7 @MalavikaBJP #EswariRao @jois_archie @RoopaRayappa #HappyWomensDay pic.twitter.com/fIUP20clED
ಇದನ್ನೂ ಓದಿ : Google KGF : ಗೂಗಲ್ ತೋರಿಸ್ತಿದೆ ಕೆಜಿಎಫ್ ಸೆಟ್ ದಾರಿ : ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್
ಇದನ್ನೂ ಓದಿ : KGF Chapter 2 Yash : ಸಿಹಿಸುದ್ದಿ ಕೊಟ್ಟ ಹೊಂಬಾಳೆ ಫಿಲ್ಮ್ಸ್ : ಮಾರ್ಚ್ 27 ಕ್ಕೆ ಕೆಜಿಎಫ್-2 ಟ್ರೇಲರ್ ರಿಲೀಸ್
(KGF Chapter 2 The KGF Given a Big Surprise for Women)