ಸದ್ಯ ಕನ್ನಡ ಚಿತ್ರರಂಗವೂ ಸೇರಿದಂತೆ ವಿಶ್ವದಾದ್ಯಂತ ಸಿನಿಪ್ರೇಮಿಗಳನ್ನು ತುದಿಗಾಲಿನಲ್ಲಿ ಕೂರುವಂತೆ ಮಾಡಿರೋ ಸಿನಿಮಾ ಕೆಜಿಎಫ್-2 ಬಿಡುಗಡೆಗೆ ದಿನಗಣನೆ ಆರಂಭ ಆಗಿರುವಂತೆಯೇ ಸಿನಿಮಾ ತಂಡ ಒಂದೊಂದೆ ಅಪ್ಡೇಟ್ ಹಂಚಿ ಕೊಳ್ಳುತ್ತಿದ್ದು, ಈಗ ಸಿನಿಮಾದ ಲಿರೀಕಲ್ ವೀಡಿಯೋ ಸಾಂಗ್ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಸಿನಿಮಾದ ತೂಫಾನ್ ಹಾಡು ಮಾರ್ಚ್ 21 ರ ಬೆಳಗ್ಗೆ 11ಗಂಟೆ 7 ನಿಮಿಷಕ್ಕೆ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದೆ. ಸ್ವತಃ ಸಿನಿಮಾದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ ಈ ಬಗ್ಗೆ ಟ್ವೀಟ್ ಮಾಡಿದೆ.

ಕೆಜಿಎಫ್ ಎಂಟು ಭಾಷೆಗಳಲ್ಲಿ ಭಾರತ ಸೇರಿದಂತೆ ವಿಶ್ವದಾದ್ಯಂತ ತೆರೆ ಕಾಣಲಿದ್ದು, ಏಪ್ರಿಲ್ 14ರಂದು ಸಿನಿಮಾ ನೋಡೋಕೆ ಯಶ್ ಅಭಿಮಾನಿಗಳು ಕಾತುರರಾಗಿ ಕಾದಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಸಿನಿಮಾ ತಂಡ ಪ್ರೇಕ್ಷಕರಿಗೆ ಸಿನಿಮಾದ ಅಪ್ಡೇಟ್ ಮಾಹಿತಿಯನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ನೀಡಿತ್ತು. ಸಿನಿಮಾದ ಟ್ರೇಲರ್, ವಿಡಿಯೋ ಸಾಂಗ್ ಸೇರಿದಂತೆ ಯಾವುದನ್ನು ರಿಲೀಸ್ ಮಾಡಬೇಕೆಂಬುದನ್ನು ನೀವೆ ಆಯ್ಕೆ ಮಾಡಿ ಎಂದಹ ಓಟಿಂಗ್ ಅವಕಾಶ ನೀಡಿತ್ತು. ಈ ವೇಳೆ ಅಭಿಮಾನಿಗಳು ಟ್ರೇಲರ್ ರಿಲೀಸ್ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದರು.

ಹೀಗಾಗಿ ಸಿನಿಮಾ ತಂಡ ಇದೇ ಬರುವ ಮಾರ್ಚ್ 21 ರಂದು ಸಿನಿಮಾದ ಟ್ರೇಲರ್ ರಿಲೀಸ್ ಮಾಡೋದಾಗಿ ಘೋಷಿಸಿದೆ. ಅದಾದ ಬಳಿಕ ಈಗ ಸಿನಿಮಾ ತಂಡ ತೂಫಾನ್ ಎಂಬ ಸಾಂಗ್ ರಿಲೀಸ್ ಮಾಡಲು ಮುಹೂರ್ತ ಫಿಕ್ಸ್ ಮಾಡಿದೆ. ಕೆಜಿಎಫ್ ಸಿನಿಮಾದಲ್ಲಿ ರವಿ ಬಸ್ರೂರು ಸಂಗೀತ ಎಲ್ಲರ ಮನಗೆದ್ದಿತ್ತು. ಹೀಗಾಗಿ ಕೆಜಿಎಫ್-೨ ದಲ್ಲಿ ಯಾವ ರೀತಿಯ ಸಾಂಗ್ ಗಳು ಸಿದ್ಧಗೊಂಡಿರಬಹುದೆಂಬ ಕಾತುರ ಎಲ್ಲರನ್ನು ಕಾಡುತ್ತಿದೆ.
Get Ready! #Toofan is coming 🔥
— Hombale Films (@hombalefilms) March 18, 2022
‘Toofan’ Lyrical Video will be out on March 21st at 11:07 AM.#KGFChapter2 #KGF2onApr14@Thenameisyash @prashanth_neel @VKiragandur@hombalefilms @HombaleGroup @duttsanjay @TandonRaveena @SrinidhiShetty7 @bhuvangowda84 @RaviBasrur @LahariMusic pic.twitter.com/tlkvs4ZPAq
ತೂಫಾನ್ ಜೊತೆ ಕೆಜಿಎಫ್ (KGF Chapter 2 ) ಫ್ರಿ ರಿಲೀಸ್ ಇವೆಂಟ್
ತೂಫಾನ್ ಸಿನಿಮಾದ ಲೀರಿಕಲ್ ವಿಡಿಯೋ ಹಾಗೂ ಟ್ರೇಲರ್ ಎರಡೂ ಒಂದು ವಾರದ ಅಂತರದಲ್ಲಿ ರಿಲೀಸ್ ಆಗ್ತಿರೋದು ಕೆಜಿಎಫ್-2 ಸಿನಿಮಾಕ್ಕಾಗಿ ಕಾಯ್ತಿರೋ ಅಭಿಮಾನಿಗಳಿಗೆ ಡಬ್ಬಲ್ ಧಮಾಕಾ ನೀಡಿದೆ. ಈಗಾಗಲೇ ನಟ ಯಶ್ ಹಾಗೂ ಚಿತ್ರತಂಡ ಅದ್ದೂರಿ ಫ್ರಿ ರಿಲೀಸ್ ಇವೆಂಟ್ ಹಾಗೂ ಪ್ರಮೋಶನ್ ಗಾಗಿ ಸಿದ್ಧತೆ ನಡೆಸಿದೆ. ಅಲ್ಲದೇ ವಿದೇಶದಲ್ಲೂ ಅದ್ದೂರಿ ಯಾಗಿ ಸಿನಿಮಾ ತೆರೆಗೆ ತರೋ ಪ್ರಯತ್ನ ನಡೆದಿದೆ. ಈ ಸಿನಿಮಾದಲ್ಲಿ ಕಲಾವಿದರ ದಂಡೇ ಇದ್ದು, ರವೀನಾ ಟಂಡನ್, ಸಂಜಯ್ ದತ್, ಈಶ್ವರಿ ಕುಮಾರಿ ಸೇರಿದಂತೆ ಹಲವರು ಮಿಂಚಿದ್ದಾರೆ.
ಇದನ್ನೂ ಓದಿ : KGF Chapter 2 : ಮಹಿಳೆಯರಿಗೆ ಬಿಗ್ ಸಪ್ರೈಸ್ ಕೊಟ್ಟ ಕೆಜಿಎಫ್
ಇದನ್ನೂ ಓದಿ : ಶಾಲೆಯಲ್ಲಿ ಪಾಠವಾಗಲಿದೆ ಅಪ್ಪು ಬದುಕು: ಪಠ್ಯಕ್ರಮಕ್ಕೆ ಸೇರ್ಪಡೆಗೊಳಿಸಲು ಅಭಿಮಾನಿಗಳ ಒತ್ತಡ
(KGF Chapter 2 Toofan songs will be released on March 21st)