ಬಿಡುಗಡೆಗೂ ಮುನ್ನವೇ ಸಖತ್ ಸುದ್ದಿ ಮಾಡ್ತಿರೋ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್-2 (KGF Chapter 2 )ಮತ್ತೊಮ್ಮೆ ಹಾಡಿನಮೂಲಕ ಸದ್ದು ಮಾಡಿದೆ. ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿರುವ ಕೆಜಿಎಫ್-2 ಬಿಡುಗಡೆ ಮಾಡಿದ ಮೊದಲ ಹಾಡಿನಲ್ಲೇ ಹೊಸ ದಾಖಲೆ ಬರೆದಿದೆ.ಕಳೆದ ಎರಡು ವರ್ಷಗಳಿಂದ ಅಭಿಮಾನಿಗಳು ಕಾತುರತೆಯಿಂದ ಕಾಯ್ತಿದ್ದ ಕೆಜಿಎಫ್ -2 ಸಿನಿಮಾ ಇನ್ನೇನು ಬಿಡುಗಡೆಗೆ ದಿನಗಣನೆ ನಡೆಸಿದೆ. ಮಾರ್ಚ್ 27 ಕ್ಕೆ ಸಿನಿಮಾದ ಟ್ರೇಲರ್ ತೆರೆಗೆ ಬರಲಿದೆ. ಇದರ ಬೆನ್ನಲ್ಲೇ ಮಾರ್ಚ್ 21 ರಂದು ಅಂದ್ರೇ ಸೋಮವಾರದಂದು ಕೆಜಿಎಫ್ -2 ಚಿತ್ರತಂಡ ತೂಫಾನ್ ಹಾಡು ರಿಲೀಸ್ ಮಾಡಿದೆ.

ರಿಲೀಸ್ ಮಾಡಿರೋ ತೂಫಾನ್ ಲಿರಿಕಲ್ ಸಾಂಗ್ ಅಕ್ಷರಷಃ ತೂಫಾನ್ ಸೃಷ್ಟಿಸಿದ್ದು, ಬಿರುಗಾಳಿಯ ವೇಗದಲ್ಲಿ ಜನ ಮನಗೆದ್ದಿದೆ. ರಿಲೀಸ್ ಆದ 10 ಗಂಟೆಗಳಲ್ಲಿ ತೂಫಾನ್ ಹಾಡಿನ ವೀಕ್ಷಣೆ ಯೂ ಟ್ಯೂಬ್ ನಲ್ಲಿ ಒಂದ ಕೋಟಿಯ ಸಮೀಪದಲ್ಲಿದೆ. ಇದು ‘ಕೆಜಿಎಫ್ 2’ ಚಿತ್ರದ ಮೇಲೆ ಅಭಿಮಾನಿಗಳಿಗಿರೋ ಕ್ರೇಜ್ ಎಷ್ಟು ಎಂಬುದಕ್ಕೆ ಹಿಡಿದ ಕನ್ನಡಿ ಆಗಿದೆ. ಕೇವಲ ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗಿನಲ್ಲೂ ಈ ಹಾಡು ಸದ್ದು ಮಾಡುತ್ತಿದೆ. ಸದ್ಯ, ಚಿತ್ರದ ಟ್ರೇಲರ್ಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.

ಸಿನಿಮಾಗೂ ಮೊದಲು ಟ್ರೇಲರ್ ಮಾತ್ರ ರಿಲೀಸ್ ಮಾಡೋದಾಗಿ ಹೇಳಿದ್ದ ಕೆಜಿಎಫ್-2 ಚಿತ್ರತಂಡ ಸಡನ್ ತನ್ನ ನಿರ್ಧಾರ ಬದಲಿಸಿಕೊಂಡು ತೂಫಾನ್ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಮಾಡಿತ್ತು. ಈ ಹಾಡು ರಿಲೀಸ್ ಆದ 10 ಗಂಟೆಯಲ್ಲಿ ಐದು ಭಾಷೆಗಳಿಂದ ಬರೋಬ್ಬರಿ 9.3 ಮಿಲಿಯನ್ ಅಂದರೆ 93 ಲಕ್ಷ ಬಾರಿ ವೀಕ್ಷಣೆ ಕಂಡಿದೆ. ಈ ಹಾಡನ್ನು ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಈ ಹಾಡನ್ನು ಕೇವಲ ಹೀರೋನನ್ನು ವೈಭವಿಕರಿಸುವಂತೆ ಸಾಹಿತ್ಯ ಬರೆಯಲಾಗಿದ್ದು ರಾಕ್ ರಾಕ್ ರಾಕಿ ಎಂದು ಅಬ್ಬರಿಸಲಾಗಿದೆ. ರವಿ ಬಸ್ರೂರ್ ಈ ಹಾಡನ್ನುಸ್ವತಃ ಬರೆದು ಸಂಗೀತ ನಿರ್ದೇಶಿಸಿದ್ದಾರೆ. ತೆಲುಗು, ತಮಿಳಿನಲ್ಲೂ ಸಿನಿಮಾದ ಹಾಡು ಸದ್ದು ಮಾಡುತ್ತಿದೆ. ತೆಲುಗಿನಲ್ಲಿ 21 ಲಕ್ಷ, ತಮಿಳಿನಲ್ಲಿ 7 ಲಕ್ಷ, ಮಲಯಾಳಂನಲ್ಲಿ 3 ಲಕ್ಷ ಹಾಗೂ ಹಿಂದಿಯಲ್ಲಿ 30 ಲಕ್ಷ ಬಾರಿ ಈ ಹಾಡು ವೀಕ್ಷಣೆ ಕಂಡಿದೆ. ಈ ಮೂಲಕ ಈ ಹಾಡು ಐದು ಭಾಷೆಗಳಿಂದ 93 ಲಕ್ಷ ಬಾರಿ ವೀಕ್ಷಣೆ ಕಂಡಂತಾಗಿದೆ. ಇನ್ನೂ ನಾಲ್ಕೈದು ದಿನದಲ್ಲೇ ಈ ಹಾಡು ಇನ್ನಷ್ಟು ದಾಖಲೆ ಬರೆಯೋ ಸಾದ್ಯತೆ ಇದ್ದು ಹಾಡು ನೋಡಿದ ಅಭಿಮಾನಿಗಳು ಸಿನಿಮಾ ರಿಲೀಸ್ ಗೆ ತುದಿಗಾಲಲ್ಲಿ ಕೂತು ಕಾಯ್ತಿದ್ದಾರೆ.
ಇದನ್ನೂ ಓದಿ : ನಾನೇ ನೀನಗೀಗಾ ಎಂದ್ರು ನಟಿ ಅನಿತಾ ಭಟ್ : ಗಮನ ಸೆಳೆದಿದೆ ಇಂದಿರಾ ಹಾಡು
ಇದನ್ನೂ ಓದಿ : Toofan Song : ಇದು ರಾಖಿ ಬಾಯ್ ಯಶ್ ತೂಫಾನ್ : ರಿಲೀಸ್ ಆಯ್ತು ಕೆಜಿಎಫ್-2 ಹಾಡು
KGF Chapter 2 Toofan Song new Record