ಕನ್ನಡ ಸಿನಿಪ್ರೇಮಿಗಳಿಗೆ ಒಂದಾದ ಮೇಲೊಂದರಂತೆ ಧಮಾಕಾ ಸಿಗುತ್ತಿದೆ. ವಿಕ್ರಾಂತ್ ರೋಣ್ ಸಿನಿಮಾಅಪ್ಡೇಟ್ ಮ್ಯಾಪ್ ರಿಲೀಸ್ ಮಾಡಿದ ಬೆನ್ನಲ್ಲೇ ಕೆಜಿಎಫ್-2 ಸಿನಿಮಾ ತಂಡ ಬಿಗ್ ಅಪ್ಡೇಟ್ ನೀಡಿದ್ದು ತಿಂಗಳಾಂತ್ಯಕ್ಕೆ ಸಿನಿಮಾದ ಕುತೂಹಲಕ್ಕೆ ಮತ್ತಷ್ಟು ಜೀವತುಂಬುವಂತಹ ಟ್ರೇಲರ್ ರಿಲೀಸ್ ಮಾಡೋದಾಗಿ ಘೋಷಿಸಿದೆ. ಸಿನಿತಂಡ ಸೋಷಿಯಲ್ ಮೀಡಿಯಾದ ಮೂಲಕ ಸುದ್ದಿನೀಡಿದ್ದು, ಮಾರ್ಚ್ 27 ರ ಸಂಜೆ 6.40 ಕ್ಕೆ ಸರಿಯಾಗಿ ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ಕೆಜಿಎಫ್-2 (KGF Chapter 2) ಚಿತ್ರತಂಡ ಸಿನಿಮಾದ ಟ್ರೇಲರ್ ರಿಲೀಸ್ ಮಾಡೋದಾಗಿ ಘೋಷಿಸಿದೆ.
2018 ರ ಡಿಸೆಂಬರ್ ನಲ್ಲಿ ಕೆಜಿಎಫ್ ಫರ್ಸ್ಟ್ ಪಾರ್ಟ್ ರಿಲೀಸ್ ಆದಾಗಿನಿಂದಲೂ ಕುತೂಹಲಮೂಡಿಸಿದ್ದ ಸಿನಿಮಾ ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ರಿಲೀಸ್ ಗೆ ಸಿದ್ಧವಾಗಿದೆ. ಇದೇ ಬರುವ ಏಪ್ರಿಲ್ 14 ರಂದು ಬಹುಭಾಷೆಗಳಲ್ಲಿ ಕೆಜಿಎಫ್-2 (KGF Chapter 2) ಸಿನಿಮಾ ತೆರೆಗೆ ಬರಲಿದೆ. ರಾಕಿಂಗ್ ಸ್ಟಾರ್ ಯಶ್ ಸಿನಿಕೆರಿಯರ್ ನ ಗೋಲ್ಡನ್ ಸಿನಿಮಾ ಕೆಜಿಎಫ್. ಮೇಕಿಂಗ್ ಸ್ಟೋರಿ ಸ್ಟಾರಿಂಗ್‌ಸಾಂಗ್ ಹೀಗೆ ನಾನಾ ಕಾರಣಕ್ಕೆ ಸುದ್ದಿಯಾದ ಸಿನಿಮಾದ ಹಿಂದಿನ ಶಕ್ತಿ ನಿರ್ದೇಶಕ ಪ್ರಶಾಂತ್ ನೀಲ್.
ಕೆಜಿಎಫ್-2 ಸಿನಿಮಾ ಶೂಟಿಂಗ್ ಆರಂಭವಾದಾಗಿನಿಂದಲೂ ಸಾಕಷ್ಟು ಕುತೂಹಲಕಾರಿ ಸಂಗತಿಗಳು ರಿವೀಲ್ ಆಗುತ್ತಲೇ ಇದ್ದವು. ಆದರೆ ಚಿತ್ರತಂಡ ಮಾತ್ರ ಯಾವುದೇ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. 2021 ರ ಯಶ್ ಬರ್ತಡೇ ವೇಳೆ ಸಣ್ಣ ಝಲಕ್ ಟೀಸರ್ ರಿಲೀಸ್ ಆಗಿರೋದನ್ನು ಬಿಟ್ಟರೇ ಮತ್ಯಾವ ವಿಡಿಯೋ ಸುದ್ದಿಗಳು ಕೆಜಿಎಫ್-2 ಸಿನಿಮಾ ತಂಡದಿಂದ ಹೊರಬಂದಿರಲಿಲ್ಲ. 2022 ರ ಯಶ್ ಬರ್ತಡೆಗೇ ಟ್ರೇಲರ್ ನೋಡಲು ಕಾದಿದ್ದ ಅಭಿಮಾನಗಳಿಗೂ ಚಿತ್ರತಂಡ ನಿರಾಸೆ ಮಾಡಿತ್ತು. ಇದೀಗ ಸಿನಿಮಾ ರಿಲೀಸ್ ಗೆ ದಿನಗಣನೆ ನಡೆದಿರುವಾಗ ಸ್ವತಃ ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾ ಟ್ರೇಲರ್ ರಿಲೀಸ್ ಸಂಗತಿಯನ್ನು ಹಂಚಿಕೊಂಡಿದ್ದಾರೆ.
ಈ ಅಪ್ಡೇಟ್ ಗೆ ಖುಷಿಯಾಗಿರೋ ಅಭಿಮಾನಿಗಳು ರಣಭೇಟೆಗಾರ ಬಂದ ಎಂದು ಕಮೆಂಟ್ ಮಾಡಿ ಎಂಜಾಯ್ ಮಾಡ್ತಿದ್ದಾರೆ. ಇತ್ತೀಚಿಗೆ ಸಿನಿಮಾ ಪ್ರಮೋಶನ್ ಗಾಗಿ ಪ್ಲ್ಯಾನ್ ಮಾಡಿದ್ದ ಚಿತ್ರತಂಡ ಹಾಗೂ ಹೊಂಬಾಳೆ ಫಿಲ್ಮ್ ಸಿನಿಮಾದ ಬಗ್ಗೆ ಯಾವ ಸಂಗತಿ ಮೊದಲು ನೋಡಲು ಬಯಸುತ್ತೀರಿ ಎಂದು ಅಭಿಮಾನಿಗಳಿಗೆ ಪ್ರಶ್ನೆ ಕೇಳಿತ್ತು ಮಾತ್ರವಲ್ಲ ಸಾಂಗ್, ಟ್ರೇಲರ್ ಎಂದು ಆಪ್ಸನ್ ಕೂಡ ನೀಡಿತ್ತು. ಇದಕ್ಕೆ ಅಂದಾಜು 85 ಕ್ಕೂ ಹೆಚ್ಚು ಅಭಿಮಾನಿಗಳು ಟ್ರೇಲರ್ ಎಂದು ಉತ್ತರಿಸಿದ್ದಾರಂತೆ. ಈ ಹಿನ್ನೆಲೆಯಲ್ಲಿ ಸಿನಿಮಾ ತಂಡ ಟ್ರೇಲರ್ ರಿಲೀಸ್ ಗೆ ಮುಹೂರ್ತ ನಿಗದಿಪಡಿಸಿದೆ. ಮಾರ್ಚ್ 27 ರ ಸಂಜೆ ಟ್ರೇಲರ್ ಅಭಿಮಾನಿಗಳಿಗೆ ರಸದೌತಣ ನೀಡಲಿದೆ.
ಇದನ್ನೂ ಓದಿ : Yash newest film : ಕೆಜಿಎಫ್ ಬೆನ್ನಲ್ಲೇ ಯಶ್ ಹೊಸ ಸಿನಿಮಾ, ಡೈರೆಕ್ಷನ್ ಮಾಡ್ತಾರಂತೆ ನರ್ತನ್
ಇದನ್ನೂ ಓದಿ : ಮದುವೆ ಸಂಭ್ರಮದಲ್ಲಿ ಮೌನಿರಾಯ್ : ಸೂರಜ್ ಕೈಹಿಡಿದ ಕೆಜಿಎಫ್ ಬೆಡಗಿ
( KGF Chapter 2 : Yash starrer trailer to drop on March 27 Hombale Films Confirms news )