- ವಂದನಾ
ಭಾರತೀಯ ಚಿತ್ರರಂಗದಲ್ಲಿಯೇ ಹೊಸ ಇತಿಹಾಸವನ್ನು ಸೃಷ್ಟಿಸಿದ ಸಿನಿಮಾ ಕೆಜಿಎಫ್. ಮೊದಲ ಚಿತ್ರದ ಯಶಸ್ಸಿನ ಬೆನ್ನಲ್ಲೇ ಕೆಜಿಎಫ್-2 ತೆರೆಗೆ ಬರಲು ಸಿದ್ದವಾಗುತ್ತಿದೆ. ಸಿನಿಮಾದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಸ್ಟಾರ್ ನಟ, ನಟಿಯರು ಅಭಿನಯಿ ಸುತ್ತಿದ್ದಾರೆ. ಅದ್ರಲ್ಲೂ ಕೆಜಿಎಫ್ -2 ಚಿತ್ರದಲ್ಲಿ ಆವೊಂದು ಪಾತ್ರ ಇದೀಗ ವಿವಾದದ ಜೊತೆ ಜೊತೆಗೆ ಕುತೂಹಲವನ್ನೂ ಹುಟ್ಟುಹಾಕಿದೆ.

ಕೊರೋನಾ ಲಾಕ್ ಡೌನ್ ನಿಂದ ಚಿತ್ರರಂಗದ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿತ್ತು. ಇದೀಗ ಮತ್ತೆ ಚಿತ್ರತಂಡಗಳು ತಮ್ಮ ಕಾರ್ಯಗಳನ್ನು ಆರಂಭಿಸಿದೆ. ಅದರಂತೆ ಬಹು ನಿರೀಕ್ಷಿತ ಕೆ ಜಿ ಎಫ್ 2 ತಂಡ ಕೂಡಾ ಇದೀಗ ಚಿತ್ರೀಕರಣ ದಲ್ಲಿ ಬ್ಯುಸಿಯಾಗಿದೆ.

ಈಗಾಗಲೇ ಸಂಜಯ್ ದತ್ತ , ರವೀನಾ ಟಂಡನ್ ನಂತಹ ಬಾಲಿವುಡ್ ನಟರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ . ಆದ್ರೆ ಇದೀಗ ಮತ್ತೊಬ್ಬ ಖಾತ ನಟ ಕೂಡಾ ಈ ತಾರಾ ತಂಡಕ್ಕೆ ಸೇರಿಕೊಂಡಿದ್ದಾರೆ ಅನ್ನೋದು ರಿವೀಲ್ ಆಗಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ ಜಿ ಎಫ್ 1 ನಲ್ಲಿ ಅನಂತ್ ನಾಗ್ ಮಾಳವಿಕ ಸೇರಿದಂತೆ ಹಿರಿಯ ಕಲಾವಿದರ ತಾರಾಗಣವೇ ಇತ್ತು. ದೇಶಾದ್ಯಂತ ಇದು ಸೂಪರ್ ಹಿಟ್ ಕೂಡಾ ಆಗಿತ್ತು. ಇದರ ಮುಂದುವರಿದ ಭಾಗ ಕೆಜಿಎಫ್ 2 ನಲ್ಲಿ ಮತ್ತಷ್ಟು ಖ್ಯಾತ ನಟರು ಕಾಣಿಸಿಕೊಳ್ಳುತ್ತಾರೆ ಎಂಬ ಮಾತು ಚಿತ್ರರಂಗದಲ್ಲಿ ಕೇಳಿ ಬರ್ತಿದೆ.

ಈಗಾಗಲೇ ಸಂಜಯ್ ದತ್ತ , ರವೀನಾ ಟಂಡನ್ ಚಿತ್ರದಲ್ಲಿ ಇರೋದನ್ನು ಚಿತ್ರ ತಂಡವೇ ಸ್ಪಷ್ಟ ಪಡಿಸಿದೆ. ಇದರ ಜೊತೆಯಲ್ಲೆ ದಕ್ಷಿಣ ಭಾರತದ ನಟರೊಬ್ಬರು ಈ ತಂಡಕ್ಕೆ ಎಂಟ್ರಿಯಾಗಿದ್ದಾರೆ. ಅದನ್ನು ಖುದ್ದು ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಿವೀಲ್ ಮಾಡಿದ್ದಾರೆ ಅವರು ಬೇರೆ ಯಾರೂ ಅಲ್ಲ ಪ್ರಕಾಶ್ ರೈ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬ್ಯಾಕ್ ಟು ವರ್ಕ್ ಅಂತ ಪೋಟೋ ಶೇರ್ ಮಾಡಿದ್ದಾರೆ. ಇದೀಗ ಇದು ವೈರಲ್ ಆಗಿದೆ.

ಚಿತ್ರೀಕರಣದ ಸಂದರ್ಭದ ಫೋಟೋ ಇದಾಗಿದ್ದು ಇದರಲ್ಲಿ ಮಾಳವಿಕ, ನಿರ್ದೇಶಕ ಪ್ರಶಾಂತ್ ನೀಲ್ ಕೂಡಾ ಇದ್ದಾರೆ. ಮತ್ತೊಂದೆಡೆ ಈ ಫೋಟೋಗಳು ಹಲವು ಅನುಮಾನಕ್ಕೆ ಕೂಡಾ ಕಾರಣವಾಗಿದೆ.

ಇದರಲ್ಲಿ ಪ್ರಕಾಶ್ ರಾಜ್ ಲುಕ್ ಕೆಜಿಎಫ್ 1 ಅನಂತ್ ನಾಗ್ ಅವರ ಲುಕ್ ನ್ನು ಹೋಲುತ್ತಿದೆ. ಹೀಗಾಗಿ ಕೆಜಿಎಫ್ 2 ನಲ್ಲಿ ಅನಂತ್ ನಾಗ್ ಬದಲಾಗಿ ಪ್ರಕಾಶ್ ರಾಜ್ ಕಾಣಿಸಿಕೊಳ್ತಾರಾ ಎನ್ನೋ ಸಂದೇಹ ಅಭಿಮಾನಿಗಳಲ್ಲಿ ಮೂಡಿದೆ.

ಆದ್ರೆ ಚಿತ್ರತಂಡ ಮಾತ್ರ ಇದನ್ನು ನಿರಾಕರಿಸಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ನಿರ್ದೇಶಕ ಪ್ರಶಾಂತ್ ನೀಲ್ ಯಾವುದೇ ಕಾರಣಕ್ಕೂ ಪಾತ್ರಗಳು ಬದಲಾಗಿಲ್ಲ.

ಅನಂತ್ ನಾಗ್ ಪಾತ್ರ ಬೇರೆ ಪ್ರಕಾಶ್ ರಾಜ್ ಪಾತ್ರ ಬೇರೆ. ಇದೊಂದು ಹೊಸ ಪಾತ್ರ ಅಂತ ಹೇಳಿದ್ದಾರೆ. ಒಟ್ಟಾರೆ ಚಿತ್ರದಲ್ಲಿ ದಿನದಿಂದ ದಿನಕ್ಕೆ ಹೊಸ ನಟರ ಮುಖ ಕಾಣ್ತಿರೋದು ಚಿತ್ರದ ಬಗ್ಗೆ ಜನರಿಗೆ ಮತ್ತಷ್ಟು ಕುತೂಹಲ ಹುಟ್ಟಿಸುವಂತೆ ಮಾಡಿದೆ.