ಸ್ಯಾಂಡಲ್ ವುಡ್ ನ ರಾಕಿಂಗ್ ಜೋಡಿ ಕೆಜಿಎಫ್ ಸ್ಟಾರ್ (KGF star) ನಟ ಯಶ್ ಮತ್ತು ರಾಧಿಕಾ (Yash Radhika Pandit) ಪಾಲಿಗೆ ಡಿಸೆಂಬರ್ 9 ಸ್ಪೆಶಲ್ ಡೇ. ಹಲವು ವರ್ಷಗಳ ಕಾಲ ಗುಟ್ಟಾಗಿ ಪ್ರೀತಿಸಿದ್ದ ಈ ಜೋಡಿ ಅದ್ದೂರಿ ನಿಶ್ಚಿತಾರ್ಥ ಹಾಗೂ ಗ್ರ್ಯಾಂಡ್ ವೆಡ್ಡಿಂಗ್ ಮೂಲಕ ಹೊಸಬದುಕಿಗೆ ಕಾಲಿಟ್ಟಿದ್ದು ಇದೇ ದಿನ.
2016 ರ ಡಿಸೆಂಬರ್ 9 ರಂದು ಅದ್ದೂರಿ ವಿವಾಹದ ಮೂಲಕ ಹೊಸ ಬದುಕಿಗೆ ಕಾಲಿಟ್ಟ ಯಶ್ ಮತ್ತು ರಾಧಿಕಾ ಇವತ್ತು ಇಬ್ಬರು ಮಕ್ಕಳೊಂದಿಗೆ ಹ್ಯಾಪಿ ಫ್ಯಾಮಿಲಿಯಾಗಿ ಲೈಫ್ ಲೀಡ್ ಮಾಡ್ತಿದ್ದಾರೆ. ಕಿರುತೆರೆಯ ನಂದಗೋಕುಲ ಸೀರಿಯಲ್ ಮೂಲಕ ಒಟ್ಟಿಗೆ ಕೆರಿಯರ್ ಆರಂಭಿಸಿದ ಯಶ್ ಮತ್ತು ರಾಧಿಕಾ ಮೊದಲು ಒಳ್ಳೆಯ ಸ್ನೇಹಿತರಾಗಿದ್ದರು. ಬಳಿಕ ಸ್ನೇಹ ಪ್ರೀತಿಗೆ ತಿರುಗಿತ್ತು. ಗುಟ್ಟಾಗಿ ಪ್ರೀತಿ ಕಾಪಾಡಿಕೊಂಡು ಬಂದ ಈ ಜೋಡಿ ಹಲವು ಯಶಸ್ವಿ ಸಿನಿಮಾ ನೀಡಿದೆ.

ರಾಮಾಚಾರಿ ಸಿನಿಮಾದ ಬಳಿಕ ಯಶ್ ಮತ್ತು ರಾಧಿಕಾ ಒಟ್ಟಿಗೆ ಬದುಕಿದ್ರೇ ಚೆನ್ನಾಗಿರುತ್ತೆ ಅಂತ ಫ್ಯಾನ್ಸ್ ಮಾತಾಡಿಕೊಳ್ಳುವಷ್ಟರ ಮಟ್ಟಿಗೆ ಈ ಜೋಡಿ ಮೋಡಿ ಮಾಡಿತ್ತು. ಐದನೇ ವರ್ಷದಲ್ಲಿ ವೆಡ್ಡಿಂಗ್ ಆನ್ಯಿವರ್ಸರಿ ಸಂಭ್ರಮದಲ್ಲಿರೋ ಯಶ್ ಮತ್ತು ರಾಧಿಕಾ ಸ್ಪೆಶಲ್ ಆಗಿ ಸೆಲಿಬ್ರೇಟ್ ಮಾಡ್ತಿದ್ದು ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಸ್ಪೆಶಲ್ ಸಂದೇಶವನ್ನು ಹಂಚಿಕೊಂಡಿದ್ದಾರೆ.

ನಿಮ್ಮನ್ನು ಉತ್ತಮಗೊಳಿಸುವ ಪ್ರೀತಿಯಲ್ಲಿ ಮತ್ತು ಜೀವನದಲ್ಲಿ ನಿಮ್ಮನ್ನು ಪ್ರೇರೇಪಿಸುವ ಮತ್ತು ಪ್ರೋತ್ಸಾಹಿಸುವ ನೀವು ನಿರ್ಲಕ್ಷಿಸುವ ಕನಸುಗಳು ಮತ್ತು ಗುರಿಗಳೆಡೆಗೆ ನಿಮ್ಮನ್ನು ತಳ್ಳಿದವರು ನಿಸ್ವಾರ್ಥವಾಗಿ ತಮ್ಮ ಸಮಯವನ್ನು ನಮಗಾಗಿ ತ್ಯಾಗ ಮಾಡುವವರು ನೀವು ಧೈರ್ಯವಾಗಿ ಸುಸಜ್ಜಿತ ವ್ಯಕ್ತಿಯಾಗಲು ಸಹಾಯ ಮಾಡುವವರು ಯಾರಾದರೂ ಇದ್ದರೇ ಅದು ಪವಿತ್ರವಾದದ್ದು. ನೀವು ಅಂತಹ ಪ್ರೀತಿಯನ್ನು ಉಳಿಸಿಕೊಳ್ಳಿ ಎಂದು ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸದ್ಯ ಯಶ್ ಕೆಜಿಎಫ್ 2 ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದು, 2022 ರ ಏಪ್ರಿಲ್ 14 ರಂದು ಕೆಜಿಎಫ್ ವಿಶ್ವದಾದ್ಯಂತ ರಿಲೀಸ್ ಅಗಲಿದೆ. ಇನ್ನು ರಾಧಿಕಾ ಪಂಡಿತ್ ಸದ್ಯ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಮದುವೆಯಾದ ಬಳಿಕ ಆದಿಲಕ್ಷ್ಮೀಪುರಾಣ ಸಿನಿಮಾದಲ್ಲಿ ನಟಿಸಿದ್ದ ರಾಧಿಕಾ ಸದ್ಯ ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿದ್ದಾರೆ.
ಆದರೆ ಸಿನಿಪ್ರಿಯರು ಮಾತ್ರ ಮತ್ತೊಮ್ಮೆ ರಾಮಾಚಾರಿ ಯಂತೆ ಮೋಡಿ ಮಾಡುವ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ನೋಡೋಕೆ ಕಾಯ್ತಿದ್ದಾರೆ.
ಇದನ್ನೂ ಓದಿ : ರಾಕಿಬಾಯ್ ಹಿರಿಮೆಗೆ ಮತ್ತೊಂದು ಗರಿ : ಯಶ್ ಈಗ ಮೋಸ್ಟ್ ಡಿಸೈರೇಬಲ್ ಮೆನ್
ಇದನ್ನೂ ಓದಿ : ಕೆಜಿಎಫ್-2 ಹಾಗೂ ಯಶ್ ಅಭಿಮಾನಿಗಳಿಗೆ ಸಿಹಿಸುದ್ದಿ…! ಮತ್ತೊಂದು ದಾಖಲೆ ಬರೆದ ಸಿನಿಮಾ…!!
( KGF star Yash and Radhika Pandit celebrate 5th wedding anniversary. Radhika shares loved up pic )