ಸ್ಯಾಂಡಲ್ ವುಡ್ ನಿಂದ ಆರಂಭಿಸಿ ಬಾಲಿವುಡ್ ತನಕ ಸದ್ದು ಮಾಡಿದ ಸಿನಿಮಾ ಕೆಜಿಎಫ್ ಮತ್ತು ಕೆಜಿಎಫ್-2. ಈ ಸಿನಿಮಾದ ಬಳಿಕ ಯಶ್ ನೇಮ್ ಮತ್ತು ಫೇಮ್ ಎರಡೂ ಬದಲಾಯಿತು. ಹೀಗಾಗಿ ಈಗ ಯಶ್ ಎಲ್ಲರ ಸೆಂಟರ್ ಆಫ್ ಅಟ್ರಾಕ್ಷನ್. ಯಶ್ ಯಾರ ಜೊತೆ ಮುಂದಿನ ಸಿನಿಮಾ ಮಾಡ್ತಾರೆ? ನೆಕ್ಸ್ಟ್ ಸಿನಿಮಾ ಕನ್ನಡದಲ್ಲಾ ? ಹಿಂದಿಯಲ್ಲಾ ಹೀಗೆ ನೊರೆಂಟು ಸುದ್ದಿ ರೂಮರ್ ಜೀವ ತಳೆಯುತ್ತಿದೆ. ಈ ಮಧ್ಯೆ ಯಶ್ ಮುಂದಿನ ಸಿನಿಮಾ ನರ್ತನ್ ಜೊತೆ ಅನ್ನೋದು ಬಹುತೇಕ ಖಚಿತವಾಗಿದೆ. ಇದರ ಮಧ್ಯೆ ಹೊಸ ಸಿನಿಮಾಗಾಗಿ (KGF Yash New Getup ) ಯಶ್ ಬರೋಬ್ಬರಿ 15 ಕೆಜಿ ವೇಟ್ ಲಾಸ್ ಮಾಡಿಕೊಳ್ತಿದ್ದಾರಂತೆ.
ಹೌದು, ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಹಾಗೂ ಕೆಜಿಎಫ್-೨ ಸಿನಿಮಾದಲ್ಲಿ ರಾಕಿ ಬಾಯ್ ರೂಪದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಈ ಮಧ್ಯೆ ಯಶ್ ಕೆಜಿಎಫ್ ಸಿನಿಮಾದ ಬಳಿಕ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದೇ ದೊಡ್ಡ ಸವಾಲಾಗಿ ಅಭಿಮಾನಿಗಳನ್ನು ಕಾಡುತ್ತಿತ್ತು. ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಯಶ್ ತಮ್ಮ ಮುಂದಿನ ಸಿನಿಮಾಕ್ಕಾಗಿ ಸ್ಯಾಂಡಲ್ ವುಡ್ ನಲ್ಲೇ ಬಣ್ಣ ಹಚ್ಚೋದು ಖಚಿತವಾಗಿದೆ. ನರ್ತನ್ ನಿರ್ದೇಶನದಲ್ಲಿ ಯಶ್ ನಟಿಸುತ್ತಿದ್ದು ಈ ಸಿನಿಮಾಕ್ಕಾಗಿ ಯಶ್ ತಮ್ಮ ದೇಹವನ್ನು ಹುರಿಗೊಳಿಸುತ್ತಿದ್ದಾರಂತೆ.
ಮಾತ್ರವಲ್ಲ ನರ್ತನ್ ಸಿನಿಮಾಗಾಗಿ ಅಂದ್ರೇ ಆ ಸಿನಿಮಾದ ಪಾತ್ರಕ್ಕಾಗಿ ಯಶ್ ಬರೋಬ್ಬರಿ 15 ಕೆಜಿ ತೂಕ ಇಳಿಸುತ್ತಿದ್ದಾರಂತೆ . ವಿಐಪಿಗಳ ಫಿಟನೆಸ್ ಕೋಚ್ ಪಾನಿಪುರಿ ಕಿಟ್ಟಿ ಮಾರ್ಗದರ್ಶನದಲ್ಲಿ ಯಶ್ ದೇಹ ದಂಡಿಸುತ್ತಿದ್ದು, ಕೆಜಿಎಫ್ ಹಾಗೂ ಕೆಜಿಎಫ್-೨ ಸಿನಿಮಾದಲ್ಲಿ ಕಾಣಿಸಿಕೊಂಡಿರೋದಕ್ಕಿಂತ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಹೀಗಾಗಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಯಶ್ ಹೊಸ ರೂಪದಲ್ಲಿ ತೆರೆಗೆ ಬರಲು ಸಜ್ಜಾಗಿದ್ದಾರಂತೆ.
ಇದಕ್ಕೂ ಮುನ್ನ ಯಶ್ ಗೆ 100 ಕೋಟಿ ಆಫರ್ ನೀಡಿ ಟಾಲಿವುಡ್ ಸಿನಿಮಾದಿಂದ ಆಫರ್ ಬಂದಿದೆ ಎಂಬುದನ್ನು ಸೇರಿದಂತೆ ಹಲವು ಸುದ್ದಿಗಳು ಹರಿದಾಡಿದ್ದವು. ಆದರೆ ಯಶ್ ಅಥವಾ ಅವರ ತಂಡ ಇಂಥ ಯಾವುದೇ ಸುದ್ದಿಯನ್ನು ಖಚಿತಪಡಿಸಿರಲಿಲ್ಲ. ಈಗ ಈ ವೇಟ್ ಲಾಸ್ ಸುದ್ದಿಯನ್ನು ಯಶ್ ಮೂಲಗಳು ಖಚಿತಪಡಿಸುತ್ತಿಲ್ಲ. ಆದರೂ ಯಶ್ ಬೇರೆ ಗೆಟಪ್ ನಲ್ಲಿ ಕಾಣಿಸಿಕೊಳ್ಳಲು ಸರ್ಕಸ್ ನಡೆಸಿರೋದಂತು ಸತ್ಯ ಎನ್ನಲಾಗ್ತಿದೆ.
ಇದನ್ನೂ ಓದಿ : Kiccha Sudeep : ಬಡ ಮಕ್ಕಳ ಕಷ್ಟಕ್ಕೆ ಮಿಡಿದ ಕಿಚ್ಚ ಸುದೀಪ್ : ಸ್ಕೂಲ್ ಫೀಸ್ ಕಟ್ಟಿದ ಮಾಣಿಕ್ಯ
ಇದನ್ನೂ ಓದಿ : bigg boss kannada 9 : ಬಿಗ್ ಬಾಸ್ ಫ್ಯಾನ್ಸ್ಗೆ ಇಲ್ಲಿದೆ ಗುಡ್ ನ್ಯೂಸ್ : ನಿರ್ಮಾಣ ಹಂತದಲ್ಲಿದೆ ‘ದೊಡ್ಮನೆ’
KGF Yash New Getup for new Movie, lose 15 kg weight