ಕೆಜಿಎಫ್-2 ಚಿತ್ರ ರಿಲೀಸ್ ಗೆ ಡೇಟ್ ಫಿಕ್ಸ್ ಆಗಿದೆ. ಜೊತೆಗೆ ಚಿತ್ರದ ಪ್ರಮೋಶನ್ ಗೆ ಸಾಕಷ್ಟು ಚಟುವಟಿಕೆಗಳು ನಡೆಯುತ್ತಿದೆ. ಇದರ ಮಧ್ಯೆ ಕೆಜಿಎಫ್-2 ಚಿತ್ರತಂಡದ ಎಲ್ಲರೂ ಒಂದೆಡೆ ಸೇರಿ ಕಾಲ ಕಳೆದಿದ್ದಾರೆ.

ಕೆಜಿಎಫ್-2 ಚಿತ್ರ ತಂಡದ ಎಲ್ಲರನ್ನು ಒಂದೆಡೆ ಸೇರಿಸಿರುವ ಪ್ರಶಾಂತ್ ನೀಲ್ ಜಾಲಿಟೈಂ ಕಳೆದಿದ್ದು ಪೋಟೋವನ್ನು ಪ್ರಶಾಂತ್ ನೀಲ್ ಹಂಚಿಕೊಂಡಿದ್ದಾರೆ.

ಅಷ್ಟೇ ಅಲ್ಲ ಪೋಟೋದ ಜೊತೆಗೆ ಟ್ವೀಟ್ ಮಾಡಿರೋ ಪ್ರಶಾಂತ್ ನೀಲ್, ಈ ತಂಡದ ಜೊತೆ ಜರ್ನಿ ಶುರುವಾಗಿದೆ. ಕೊನೆಯಾಗೋದಿಲ್ಲ ಎಂದು ಬರೆದುಕೊಂಡಿದ್ದಾರೆ.

ಈ ಗೆಟ್ ಟೂ ಗೆದರ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್, ನಿರ್ದೇಶಕ ಪ್ರಶಾಂತ್ ನೀಲ್ ದಂಪತಿ,ನಿರ್ಮಾಪಕ ವಿಜಯ್ ಕಿರಂಗದೂರು ದಂಪತಿ ಸೇರಿದಂತೆ ಕೆಜಿಎಫ್-2 ಸಿನಿಮಾದ ಬಹುತೇಕ ರು ಪಾಲ್ಗೊಂಡಿದ್ದಾರೆ.

ಕೆಜಿಎಫ್-2 ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಇತ್ತೀಚಿಗಷ್ಟೇ ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಡಬ್ಬಿಂಗ್ ಪೋಟೋ ಹಂಚಿಕೊಂಡಿದ್ದರು.
ಪ್ರಶಾಂತ್ ನೀಲ್ ಕೂಡ ಕೆಜಿಎಫ್-2 ಬಳಿಕ ಸಲಾರ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು. ಫ್ರೀ ಟೈಂ ನಲ್ಲಿ ಕೆಜಿಎಫ್-2 ಟೀಂ ಜೊತೆ ಸಮಯ ಕಳೆದಿದ್ದಾರೆ.