ಮಂಗಳವಾರ, ಜೂನ್ 17, 2025
HomeCinemaKiccha 46 Teaser : ಸ್ಯಾಂಡಲ್‌ವುಡ್‌ ನಟ ಸುದೀಪ್‌ ಅಭಿನಯದ ಕಿಚ್ಚ 46 ಟೀಸರ್‌ ರಿಲೀಸ್‌

Kiccha 46 Teaser : ಸ್ಯಾಂಡಲ್‌ವುಡ್‌ ನಟ ಸುದೀಪ್‌ ಅಭಿನಯದ ಕಿಚ್ಚ 46 ಟೀಸರ್‌ ರಿಲೀಸ್‌

- Advertisement -

ನಟ ಸುದೀಪ್‌ ಅಭಿನಯದ ವಿಕ್ರಾಂತ್‌ ರೋಣ ಸಿನಿಮಾದ ನಂತರ ಪ್ರಮುಖ ಪಾತ್ರ ಯಾವ ಸಿನಿಮಾವು ತೆರೆ ಕಾಣಲಿಲ್ಲ. ಹೀಗಾಗಿ ತಮ್ಮ ಮೆಚ್ಚಿನ ನಟನ ಸಿನಿಮಾಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಒಂದು ವರ್ಷ ಸಮೀಪಿಸುತ್ತಿರುವಾಗ ನಟ ಸುದೀಪ್‌ ಅಭಿನಯದ ಮುಂದಿನ ಸಿನಿಮಾ ಕಿಚ್ಚ 46 ಟೀಸರ್‌ (Kiccha 46 Teaser) ಬಿಡುಗಡೆಯಾಗಿದೆ. ಸದ್ಯ ಬಿಡುಗಡೆಯಾಗಿರುವ ಹೊಸ ಸಿನಿಮಾದ ಟೀಸರ್‌ನಲ್ಲಿ ಕಿಚ್ಚ ಸುದೀಪ್‌ ಹೊಸ ಅವತಾರ ನೋಡಿದ ಅಭಿಮಾನಿಗಳಿಗೆ ಕೂತುಹಲ ಕೆರಳಿಸಿದೆ.

ನಟ ಸುದೀಪ್‌ ಅಭಿನಯದ ಈ ಸಿನಿಮಾವನ್ನು ತಮಿಳು ನಿರ್ಮಾಪಕ ಕಲೈಪುಲಿ ಎಸ್‌ ತನು ಅವರು ನಿರ್ಮಾಣ ಹೊಣೆಯನ್ನು ಹೊತ್ತಿದ್ದಾರೆ. ಹಾಗೆಯೇ ಹೊಸ ಪ್ರತಿಭೆ ವಿಜಯ್‌ ಕಾರ್ತಿಕೇಯ ಈ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಲಿದ್ದಾರೆ. ಸದ್ಯ ಸಿನಿರಂಗದಲ್ಲಿ ಪ್ಯಾನ್‌ ಇಂಡಿಯಾ ಟ್ರೆಂಡ್‌ನಲ್ಲಿ ಹೆಚ್ಚಾಗಿದ್ದು, ಈ ಸಿನಿಮಾ ಕೂಡ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಐದು ಭಾಷೆಗಳಲ್ಲಿ ತೆರೆ ಕಾಣಲಿದೆ.

ಕಳೆದ ಒಂದು ವರ್ಷದಿಂದ ನಟ ಸುದೀಪ್‌ ಸಿನಿರಂಗದಿಂದ ಕೊಂಚ ಬ್ರೇಕ್‌ ತೆಗೆದುಕೊಂಡಿದ್ದಾರೆ. ನಟನೆಯನ್ನು ಬದಿಕ್ಕಿಟ್ಟು ಕೆಸಿಸಿ, ಸಿಸಿಎಲ್‌ ಕ್ರಿಕೆಟ್‌ ಟೂರ್ನಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ತದನಂತರದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯ ಸಲುವಾಗಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಇತ್ತ ಅಭಿಮಾನಿಗಳು ನಟನ ಮುಂದಿನ ಸಿನಿಮಾದ ಬಗ್ಗೆ ಕಾಯುತ್ತಿದ್ದರು. ಅದರಂತೆ ಇದೀಗ ಹೊಸ ಸಿನಿಮಾದ ಟೀಸರ್‌ ಬಿಡುಗಡೆ ಮಾಡುವ ಮೂಲಕ ಸಿನಿಪ್ರೇಕ್ಷಕರಿಗೆ ಸಿಹಿ ಸುದ್ಧಿ ನೀಡಿದ್ದಾರೆ.

ಇದನ್ನೂ ಓದಿ : Jo Lindner died‌ : ಪೊಗರು ಸಿನಿಮಾ ಖ್ಯಾತಿಯ ಬಾಡಿ ಬಿಲ್ಡರ್‌ ಜೋ ಲಿಂಡ್ನರ್‌ ಸಾವು

ಇದನ್ನೂ ಓದಿ : Harshika poonacha Bhuvan marriage : ಖ್ಯಾತ ನಟಿ ಹರ್ಷಿಕಾ ಪೂಣಚ್ಚ ಭುವನ್‌ ಮದುವೆ ಡೇಟ್‌ ಫಿಕ್ಸ್‌

ಕಿಚ್ಚ ಸುದೀಪ್‌ ಅಭಿನಯದ ಈ ಸಿನಿಮಾದಲ್ಲಿ ಯಾರೆಲ್ಲಾ ಅಭಿನಯಿಸಲಿದ್ದಾರೆ ಎಂದು ಇನ್ನಷ್ಟೇ ತಿಳಿಯಬೇಕಿದೆ. ಕಾಂತಾರ ಹಿಟ್‌ ಸಿನಿಮಾಗಳಿಗೆ ಸಂಗೀತ ನಿರ್ದೇಶನ ನೀಡಿರುವ ಅಜನೀಶ್‌ ಲೋಕನಾಥ್‌ ಈ ಸಿನಿಮಾಕ್ಕೂ ಸಂಗೀತ ನೀಡಲಿದ್ದಾರೆ. ಶೇಖತ್‌ ಚಂದ್ರ ಛಾಯಾಗ್ರಹಣ ಹಾಗೂ ಗಣೇಶ್‌ ಬಾಬು ಸಂಕಲನ ಈ ಸಿನಿಮಾಕ್ಕಿದೆ.

Kiccha 46 Teaser: Sandalwood actor Sudeep starrer Kiccha 46 teaser released.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular