ಸೋಮವಾರ, ಏಪ್ರಿಲ್ 28, 2025
HomeCinemaPadaraya Movie : ಪಾದರಾಯ ಸಿನಿಮಾದಲ್ಲಿ ಕಿಚ್ಚ ಸುದೀಪ್ : ತೆರೆಗೆ ಬರಲಿದೆ ನೈಜ ಘಟನೆಯ...

Padaraya Movie : ಪಾದರಾಯ ಸಿನಿಮಾದಲ್ಲಿ ಕಿಚ್ಚ ಸುದೀಪ್ : ತೆರೆಗೆ ಬರಲಿದೆ ನೈಜ ಘಟನೆಯ ಸಿನಿಮಾ

- Advertisement -

ನಟ ಕಿಚ್ಚ ಸುದೀಪ್‌ ಅಭಿನಯದ “ವಿಕ್ರಾಂತ್‌ ರೋಣ” ಸಿನಿಮಾವನ್ನು ಜಾಕ್‌ ಮಂಜು ನಿರ್ಮಾಣ ಮಾಡಿದ್ದು, ಇದೀಗ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. (Padaraya Movie) ಇದೊಂದು ಪ್ಯಾನ್‌ ಇಂಡಿಯಾ ಸಿನಿಮಾವಾಗಿದ್ದು, ಸುದೀಪ್‌ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ನಟ – ನಿರ್ದೇಶಕರಾಗಿ ನಾಗಶೇಖರ್‌ ಈ ಸಿನಿಮಾದಲ್ಲಿ ನಟಿಸಲಿದ್ದು, ಚಕ್ರವರ್ತಿ ಚಂದ್ರಚೂಡ ಈ ಸಿನಿಮಾದ ನಿರ್ದೇಶನ ಮಾಡಲಿದ್ದಾರೆ.

ಸಿನಿಮಾಕ್ಕೆ “ಪಾದರಾಯ” ಎನ್ನುವ ಟೈಟಲ್‌ನ್ನು ಇಟ್ಟಿದ್ದು, ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ತೆರೆ ಕಾಣಲಿದೆ. ಈ ಸಿನಿಮಾಕ್ಕೆ ಕಾಂತಾರ ಖ್ಯಾತಿಯ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆಯನ್ನು ಮಾಡಲಿದ್ದಾರೆ. ಈ ಸಿನಿಮಾದ ಛಾಯಗ್ರಹಣವನ್ನು ಸತ್ಯ ಹೆಗಡೆ ಮಾಡಲಿದ್ದಾರೆ. ಪಾದಾರಾಯ ಸಿನಿಮಾಕ್ಕೆ ತಮಿಳಿನ ಖ್ಯಾತ ಸಂಕನನಕಾರ ಆಂಟೊನಿ ಸಂಕಲನ ಮಾಡುತ್ತಿದ್ದು ಮುಂತಾದ ಖ್ಯಾತನಾಮರು ಕಾರ್ಯ ನಿರ್ವಹಿಸುತ್ತಿರುವುದು ಸಿನಿಮಾದ ಮತ್ತೊಂದು ವಿಶೇಷವಾಗಿದೆ.

ಈ ಸಿನಿಮಾಕ್ಕೆ ಚಕ್ರವರ್ತಿ ಚಂದ್ರಚೂಡ್‌ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಖ್ಯಾತ ನಿರ್ದೇಶಕ ಹಾಗೂ ನಟ ನಾಗಶೇಖರ್‌ ನಾಯಕ ನಟನಾಗಿ ನಟಿಸುವುದರ ಜೊತೆಗೆ ನಿರ್ಮಾಣ ಹೊಣೆಯನ್ನು ಹೊತ್ತಿದ್ದಾರೆ. ದೇಶವ್ಯಾಪಿ ಸುದ್ದಿ ಮಾಡಿದ ನೈಜ ಘಟನೆಯೊಂದಎ ಆಧಾರಿತ ಈ ಸಿನಿಮಾ ಹಲವು ಜೀವಂತ ಘಟ್ಟಗಳಿಂದ ಕೂಡಿದ್ದು, ಹಾಗಾಗಿ ಹನುಮ ಜಯಂತಿಯಂದು ಶೀರ್ಷಿಕೆ ಬಿಡುಗಡೆ ಮಾಡಿದ್ದಾರೆ. ಈ ಸಿನಿಮಾದ ಚಿತ್ರೀಕರಣವನ್ನು ಜನವರಿಯಿಂದ ಪ್ರಾರಂಭಿಸಲಿದ್ದಾರೆ.

ಇದನ್ನೂ ಓದಿ : Directed by Natesh Hegde: “ಕಾಂತಾರ” ಮತ್ತು “ಆರ್‌ಆರ್‌ಆರ್‌” ಸಿನಿಮಾ ಬಗ್ಗೆ ಅಭಿಪ್ರಾಯ ಹಂಚಿಕೊಂಡ ನಿರ್ದೇಶಕ ನಟೇಶ್‌ ಹೆಗ್ಡೆ

ಇದನ್ನೂ ಓದಿ : S.K Bhagavan: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಭಗವಾನ್ ಆರೋಗ್ಯ ಸ್ಥಿತಿ ಗಂಭೀರ: ಐಸಿಯುನಲ್ಲಿ ಚಿಕಿತ್ಸೆ

ಇದನ್ನೂ ಓದಿ : Mandeep Roy: ಕನ್ನಡದ ಹಿರಿಯ ನಟ ಮನ್ ದೀಪ್ ರಾಯ್ ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

2016ರ ಸಮಯದಲ್ಲಿ ನಡೆದ ಒಂದು ನೈಜ ಘಟನೆಯನ್ನು ಸಿನಿಮಾಕ್ಕಾಗಿ ಆಯ್ಕೆ ಮಾಡಿಕೊಂಡಿರುವುದು ಈ ಸಿನಿಮಾದ ವಿಶೇಷವಾಗಿದೆ. ಅಂಜನಾದ್ರಿಯ ಸುತ್ತಾಮುತ್ತಾ ತುಂಬಾ ಬ್ಯಾಕ್‌ ವಾಟರ್‌ನಲ್ಲಿ ಕಥಡ ನಡೆಯುಲಿದೆ. ಪಾದರಾಯ ಕಥೆಗೂ ಮತ್ತು ಆಂಜನೇಯ ಪಾದಕ್ಕೂ ನಂಟಿರುತ್ತದೆ. ಜೊತೆಗೆ ಅಯೋಧ್ಯೆಯಿಂದ ಬೆಂಗಳೂರಿನವರೆಗೂ ಕಥೆ ಸಾಗಿ ಬರಲಿದೆ ಎನ್ನುವುದು ಕುತೂಹಲದ ಅಂಶಗಳಾಗಿದೆ.

Kiccha Sudeep in Padaraya Movie: A movie based on real events will be released

RELATED ARTICLES

Most Popular