ಮಂಗಳವಾರ, ಜೂನ್ 17, 2025
HomeCinemaಕಿಚ್ಚನ ‘ಫ್ಯಾಂಟಮ್​’ಫಸ್ಟ್​ಲುಕ್​ಗೆ ಅಭಿಮಾನಿಗಳ ಕಾತರ

ಕಿಚ್ಚನ ‘ಫ್ಯಾಂಟಮ್​’ಫಸ್ಟ್​ಲುಕ್​ಗೆ ಅಭಿಮಾನಿಗಳ ಕಾತರ

- Advertisement -

ಸ್ಯಾಂಡಲ್ ವುಡ್ ನಲ್ಲಿ ಶೂಟಿಂಗ್ ಮತ್ತು ಸ್ನೀಕ್​ ಪಿಕ್​ಗಳ ಮೂಲಕವೇ ಸದ್ದು ಮಾಡುತ್ತಿರುವ ಫ್ಯಾಂಟಮ್​ ಚಿತ್ರತಂಡ ಇದೀಗ ಅಭಿಮಾನಿಗಳಿಗೆ ಮತ್ತೊಂದು ಉಡುಗೊರೆ ನೀಡಲು ಸಜ್ಜಾಗಿದೆ.

Alvas1

ಈಗಾಗಲೇ ಶೂಟಿಂಗ್​ ಸೆಟ್​ನಲ್ಲಿ ಕಳೆದ ನಾಲ್ಕು ತಿಂಗಳ ಬಳಿಕ ಕ್ಯಾಮರಾ ಎದುರಿಸಿದ ಅನುಭವ ಹೇಳಿಕೊಂಡು, ಅದರ ಸಣ್ಣ ದೃಶ್ಯಗಳನ್ನು ಹಂಚಿಕೊಂಡಿದ್ದರು ಸುದೀಪ್​. ಇದೀಗ ಅವರ ಮಾಸ್​ ಲುಕ್​ ಬಗ್ಗೆ ಚಿತ್ರತಂಡ ಪೋಸ್ಟರ್​ವೊಂದನ್ನು ರಿವೀಲ್​ ಮಾಡಲು ಸಜ್ಜಾಗಿದೆ.

Pantom 2

ಅನೂಪ್​ ಭಂಡಾರಿ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಫ್ಯಾಂಟಮ್​ ಚಿತ್ರದಲ್ಲಿ ಕಿಚ್ಚ ಸುದೀಪ್​ ವಿಕ್ರಾಂತ್​ ರೋಣ ಪಾತ್ರದಲ್ಲಿ ಮತ್ತೊಮ್ಮೆ ಖಡಕ್​ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಗೊತ್ತಿರುವ ವಿಚಾರ.

ಆದರೆ, ಅವರ ಪೂರ್ತಿ ಲುಕ್​ ಹೇಗಿದೆ ಎಂಬ ಬಗ್ಗೆ ಎಲ್ಲಿಯೂ ಬಹಿರಂಗವಾಗಿಲ್ಲ. ಇದೀಗ ಆ ಕುತೂಹಲಕ್ಕೆ ತೆರೆ ಬೀಳಲಿದ್ದು, ಸೋಮವಾರ ಬೆಳಗ್ಗೆ 10 ಗಂಟೆಗೆ ಫಸ್ಟ್ ಲುಕ್​ ರಿಲೀಸ್​ ಆಗಲಿದೆ.

ಈ ವಿಚಾರವನ್ನು ನಿರ್ದೇಶಕ ಅನೂಪ್​ ಭಂಡಾರಿ ಪುಟಾಣಿ ವಿಡಿಯೋ ಮೂಲಕ ತಿಳಿಸಿದ್ದಾರೆ. ಜಾಕ್​ ಮಂಜು ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸುತ್ತಿದ್ದಾರೆ.

Phantom Movie 7

ಸದ್ಯ ಹೈದರಾಬಾದ್​ನಲ್ಲಿ ಶೂಟಿಂಗ್​ ನಡೆಯುತ್ತಿದ್ದು, ಶೂಟಿಂಗ್​ನಲ್ಲಿ ಪಾಲ್ಗೊಂಡ ತಾಂತ್ರಿಕ ವರ್ಗ, ನಿರ್ಮಾಪಕರು, ಕಲಾ ವಿಭಾಗ ಸೇರಿ ಎಲ್ಲರೂ ಫ್ಯಾಂಟಮ್​ ಲುಕ್​ಗೆ ಕಾಯುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular