ಭಾನುವಾರ, ಏಪ್ರಿಲ್ 27, 2025
HomeCinemaವಿನಯ್ ರಾಜ್ ಕುಮಾರ್ ಪೆಪೆಗೆ ಸಾಥ್‌ ಕೊಟ್ಟ ಕಿಚ್ಚ ಸುದೀಪ್

ವಿನಯ್ ರಾಜ್ ಕುಮಾರ್ ಪೆಪೆಗೆ ಸಾಥ್‌ ಕೊಟ್ಟ ಕಿಚ್ಚ ಸುದೀಪ್

Pepe Kannada Movie : ದೊಡ್ಮನೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಪೆಪೆ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ವಿನಯ್ ರಾಜ್ ಕುಮಾರ್ ಮೊದಲ ಬಾರಿಗೆ ಸಖತ್ ಮಾಸ್ ಆಗಿ ರಗಡ್ ಅವತಾರವೆತ್ತಿರುವುದನ್ನು ನೋಡಿ ಪ್ರೇಕ್ಷಕರು ಸಖತ್ ಎಕ್ಸೈಟ್ ಆಗಿದ್ದಾರೆ.

- Advertisement -

Pepe Kannada Movie : ದೊಡ್ಮನೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಪೆಪೆ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ವಿನಯ್ ರಾಜ್ ಕುಮಾರ್ ಮೊದಲ ಬಾರಿಗೆ ಸಖತ್ ಮಾಸ್ ಆಗಿ ರಗಡ್ ಅವತಾರವೆತ್ತಿರುವುದನ್ನು ನೋಡಿ ಪ್ರೇಕ್ಷಕರು ಸಖತ್ ಎಕ್ಸೈಟ್ ಆಗಿದ್ದಾರೆ. ಪೋಸ್ಟರ್, ಟೀಸರ್ ಮೂಲಕ ಸದ್ದು ಮಾಡಿದ್ದ ಪೆಪೆ ಈಗ ಟ್ರೇಲರ್ ಮೂಲಕ ಕುತೂಹಲವನ್ನು ಮತ್ತಷ್ಟು ಗರಿಗೆದರುವಂತೆ ಮಾಡಿದೆ. ಬೆಂಗಳೂರಿನ ಮಾಲ್ ಆಫ್ ಏಷ್ಯಾದಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ದೊಡ್ಮನೆ ಕುಡಿ ಚಿತ್ರಕ್ಕೆ ಬೆಂಬಲ ನೀಡಿದರು.

Pepe Kannada Movie Vinay Rajkumar
Image Credit to Origina Source

ಕಿಚ್ಚ ಸುದೀಪ್ ಮಾತನಾಡಿ , ವಿನಯ್ ನನಗೆ ಬಂದು ಟ್ರೇಲರ್ ತೋರಿಸಿದಾಗ ಗೊತ್ತೋ ಗೊತ್ತಿಲ್ಲದೆಯೋ ನನ್ನ‌ ಮನೆಯಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟಿದ್ದೇನೆ. ಎಷ್ಟೋ ಬಾರಿ ಟ್ರೇಲರ್ ಲಾಂಚ್ ಮಾಡಿಕೊಟ್ಟಿದ್ದೇವೆ. ಆದರೆ ಟ್ರೇಲರ್ ಲಾಂಚ್ ಮಾಡುವಾಗ ನಾನು ಸುದೀಪ್ ಎನ್ನುವುದಕ್ಕಿಂತ ಹೆಚ್ಚಾಗಿ ಪ್ರೇಕ್ಷಕನಾಗಿ ನನಗೆ ಆ ಟ್ರೇಲರ್ ಇಷ್ಟವಾಯ್ತು ಎಂದರೆ ಅದಕ್ಕಿಂತ ಖುಷಿ ಬೇರೆ ಇಲ್ಲ. ನಾನು ಒಬ್ಬ ಆಡಿಯನ್ಸ್. ನನಗೂ ಸಿನಿಮಾ ನೋಡಬೇಕು ಎಂಬ ಆಸೆ ಇರುತ್ತದೆ. ನಾವು ಮಾಡಿರುವ ಸಿನಿಮಾಗಳನ್ನು‌ ಎಂಜಾಯ್ ಮಾಡಲು ಆಗುವುದಿಲ್ಲ. ಪೆಪೆ ಟ್ರೇಲರ್ ನೋಡಿ ಬಹಳಷ್ಟು ಹೆಮ್ಮೆಯಾಗುತ್ತಿದೆ.

ಇದನ್ನೂ ಓದಿ : Ragini Dwivedi : ವೈಟ್ ಸ್ಕರ್ಟ್ ನಲ್ಲಿ ಹಾಟ್ ನಟಿ ರಾಗಿಣಿ : ತುಪ್ಪದ ಬೆಡಗಿ ನೋಡಿ ಫ್ಯಾನ್ಸ್ ಸುಸ್ತಾಗೋದ್ರಪ್ಪ…!

ವಿನಯ್ ನೀವು ಫೈನಲ್ ಮನುಷ್ಯರಾಗಿದ್ದೀರ. ಚಾಕಲೇಟ್ ಹೀರೋ, ಪ್ರೀತಿ, ಲವ್ ಸ್ಟೋರಿ ಇಲ್ಲಿಂದ ಒಬ್ಬ ಗಂಡಸ್ಸಾಗಿ ಪರದೆಯ ಕಾಣಿಸಿಕೊಳ್ಳುತ್ತಾನೆ ಅಲ್ಲಿಂದ ಹೀರೋ ಆಗಿ ಜರ್ನಿ ಶುರುವಾಗುತ್ತದೆ.‌ ಅದ್ಭುತ ಟ್ರೇಲರ್, ಅದ್ಭುತ ಮ್ಯೂಸಿಕ್, ವಿನಯ್ ಅದ್ಭುತ ಕೆಲಸ ಮಾಡಿದ್ದೀರ. ನಿರ್ದೇಶಕ ಕಲಾವಿದರು ಪ್ರೀತಿಸಿದಾಗ‌ ಈ ರೀತಿ ಸಿನಿಮಾ ಮೂಡಿ ಬರಲು ಸಾಧ್ಯ ಎಂದರು.

ಚಿಕ್ಕಪ್ಪ ಚಿಕ್ಕಪ್ಪನೇ ದೊಡ್ಡಪ್ಪ ದೊಡ್ಡಪ್ಪನೇ. ನಾನು ಪೆಪೆ ಎಂದು ಮಾತು ಶುರು ಮಾಡಿದ ವಿನಯ್ ರಾಜ್‍ಕುಮಾರ್, ಸುದೀಪ್ ಸರ್ ಧನ್ಯವಾದ. ನಿಮ್ಮ ಸಲಹೆ, ಬಹಳಷ್ಟು ವಿಷಯ ಕೇಳಿ ಖುಷಿ, ಸಪೋರ್ಟ್ ಹಾಗೂ ಕಾನ್ಫಿಡೆನ್ಸ್ ಬಂತು. ಪೆಪೆ ಇದು ಎರಡು ವರ್ಷದ ಜರ್ನಿ. ಎಲ್ಲರು ಚಿತ್ರಕ್ಕೆ ಶ್ರಮ ಹಾಕಿದ್ದಾರೆ. ಕೂರ್ಗು, ಕಾಡು ಅಂದರೆ ಪ್ರಾಣ. ಇಲ್ಲಿ ಶೂಟಿಂಗ್ ಎಂದರು. ಚಿತ್ರ ಒಪ್ಪಿಕೊಳ್ಳಲು ಇದು ಮೊದಲ ಕಾರಣ. ಚಿತ್ರದ ಕಥೆ ಮತ್ತೊಂದು ಕಾರಣ. ಚಿತ್ರದಲ್ಲಿ ತುಂಬಾ ಸ್ಟ್ರಾಂಗ್ ಪಾತ್ರಗಳಿವೆ. ಸಿನಿಮಾ ನೋಡಿ ಹೊರ ಬರುವ ಪ್ರತಿಯೊಬ್ಬರು ಪಾತ್ರಗಳ ಬಗ್ಗೆ ಯೋಚನೆ ಮಾಡುತ್ತಾರೆ. ಆಗಸ್ಟ್ 30ರಂದು ಚಿತ್ರ ಬಿಡುಗಡೆಯಾಗಲಿದೆ ಎಂದರು.

Pepe Kannada Movie Vinay Rajkumar
Image Credit to Origina Source

ಪೆಪೆ ಚಿತ್ರದ ಟ್ರೇಲರ್ ನ್ನು ಬಹಳ ಸೊಗಸಾಗಿ ಕಟ್ ಮಾಡಲಾಗಿದೆ. 2 ನಿಮಿಷ 44 ಸೆಕೆಂಡ್ ಇರುವ ಟ್ರೇಲರ್ ನೋಡಿ ದೊಡ್ಮನೆ ಫ್ಯಾನ್ಸ್ ಬೆಂಕಿ, ವಿನಯ್ ಮಾಸ್ ಅವತಾರಕ್ಕೆ‌ ಚಪ್ಪಾಳೆ ತಟ್ಟುತ್ತಿದ್ದಾರೆ. ಕೌರ್ಯ, ರಕ್ತ, ಮಚ್ಚು ಟ್ರೇಲರ್‌ನಲ್ಲಿ ಝಳಪಿಸಿದೆ. ಕಾಜಲ್‌ ಕುಂದರ್‌ ನಾಯಕಿಯಾಗಿದ್ರೆ, ಮಯೂರ್‌ ಪಟೇಲ್‌, ನವೀನ್‌ ಡಿ. ಪಡೀಲ್‌, ಯಶ್‌ ಶೆಟ್ಟಿ, ಮೇದಿನಿ ಕೆಳಮನೆ, ಬಲ ರಾಜ್‌ವಾಡಿ, ಅರುಣಾ ಬಾಲರಾಜ್‌ ಸೇರಿ ಹಲವು ಕಲಾವಿದರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ : ಹಳ್ಳಿಹುಡುಗಿಯಾಗಿ ದಿಲ್ ಪಸಂದ ಬೆಡಗಿ: ಮೇಘಾ ಶೆಟ್ಟಿ ಹೊಸ ಅವತಾರ ಕ್ಕೆ ಮನಸೋತ ಅಭಿಮಾನಿಗಳು

ಯುವ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ನಿರ್ದೇಶನದಲ್ಲಿ, ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ ಪೆಪೆ ಸಿನಿಮಾದ ಮೂಲಕ ಪಕ್ಕಾ ಮಾಸ್ ಅವತಾರದಲ್ಲಿ ಅಖಾಡಕ್ಕೆ ಇಳಿದಿದ್ದಾರೆ. ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಈ ಸಿನಿಮಾವನ್ನು ನಿರ್ಮಿಸಿದ್ದು, ಇದೇ ಆಗಸ್ಟ್ 30ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದು, ಕ್ಯಾಮೆರಾ ಕೆಲಸ ಮಾಡಿರುವುದು ಅಭಿಷೇಕ್ ಕಾಸರಗೋಡು, ಆಕ್ಷನ್ ದೃಶ್ಯಗಳನ್ನು ನಿರ್ದೇಶನ ಮಾಡಿರುವುದು ರವಿವರ್ಮ, ಚೇತನ್ ಡಿಸೋಝಾ, ಡಿಫರೆಂಟ್ ಡ್ಯಾನಿ ಮತ್ತು ನರಸಿಂಹ.

Kiccha Sudeep supported Vinay Rajkumar Pepe Kannada Movie

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular