ಸ್ಯಾಂಡಲ್‌ವುಡ್ ಕಿಚ್ಚ ಸುದೀಪ್ ತಮ್ಮ ಸಿನಿ ಪಯಣದಲ್ಲೇ ಮೊಟ್ಟ ಮೊದಲ ಬಾರಿಗೆ ಸುದೀರ್ಘ ಬ್ರೇಕ್‌ನ್ನು (Kichcha Sudeep New Film Pomroshoot) ತೆಗೆದುಕೊಂಡಿದ್ದಾರೆ. ಹೌದು ಕಿಚ್ಚ ಸುದೀಪ್ ಕೊನೆಯದಾಗಿ ವಿಕ್ರಾಂತ್ ರೋಣ ಸಿನಿಮಾದಲ್ಲಿ ಅಭಿನಯಿಸಿದ ಬಳಿಕ ಯಾವ ಹೊಸ ಸಿನಿಮಾವನ್ನು ಘೋಷಿಸಿರಲಿಲ್ಲ. ಹೀಗಾಗಿ ತಮ್ಮ ವೃತ್ತಿ ಜೀವನದಲ್ಲಿ ದೊಡ್ಡ ಮಟ್ಟದ ವಿರಾಮವನ್ನು ತೆಗೆದುಕೊಂಡಿದ್ದಾರೆ. ಇದೀಗ ತಮ್ಮ ಹೊಸ ಸಿನಿಮಾದ ಬಗ್ಗೆ ಬಿಗ್ ಅಪ್‌ಡೇಟ್‌ನ್ನು ನೀಡಿದ್ದಾರೆ.
ನಟ ಕಿಚ್ಚ ಸುದೀಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ, “ನಾನು ಪ್ರಾರಂಭಿಸುತ್ತಿರುವ ಮೂರು ಚಿತ್ರಗಳಲ್ಲಿ ಒಂದರ ಪ್ರೋಮೋ ಶೂಟ್ ಮೇ 22 ರಂದು ನಡೆಯಲಿದೆ ಎಂದು ಘೋಷಿಸಲು ಸಂತೋಷವಾಗಿದೆ. ಜೂನ್ 1 ರಂದು ಲಾಂಚ್ ಆಗಲಿದೆ. ಒಂದು ಪ್ರಕಾರದ ಸ್ಕ್ರಿಪ್ಟ್ ನನ್ನನ್ನು ರೋಮಾಂಚನಗೊಳಿಸಿತು ಮತ್ತು ನಾನು ಎದುರು ನೋಡುತ್ತಿರುವ ಸಿನಿಮಾ” ಎಂದು ಬರೆದು ಹಂಚಿಕೊಂಡಿದ್ದಾರೆ.
Happy to announce that the promo shoot of one of the three films I'm starting Wil go on floor on the 22nd of May. June 1st will be the launch.
— Kichcha Sudeepa (@KicchaSudeep) April 29, 2023
🤗🤗❤️
A script n a genre that excited me and a film I'm looking forward to.
ಇತ್ತೀಚೆಗೆ ನಟ ಸುದೀಪ್ ರಾಜ್ಯ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಸಕ್ರಿಯರಾಗಿದ್ದರು. ಹೀಗಾಗಿ ಹೊಸ ಸಿನಿಮಾ ಬಗ್ಗೆ ಮಾಹಿತಿ ನೀಡಿರಲಿಲ್ಲ. ಇವರ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಸಿನಿಮಾಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ಕಿಚ್ಚ ಸುದೀಪ್ ಅವರೇ ಹೊಸ ಸಿನಿಮಾದ ಪ್ರೋಮೋಶೂಟ್‌ನಲ್ಲಿ ಬಾಗಿ ಆಗುವುದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ವರುಣನ ಆರ್ಭಟ : ಮಳೆ ನೀರಿನಲ್ಲಿ ಮುಳುಗಿದ ನಟ ಜಗ್ಗೇಶ್ ಅವರ ಐಷಾರಾಮಿ ಕಾರು
ಇದನ್ನೂ ಓದಿ : Kerala Story Box Office : ದಾಖಲೆಯ ಗಳಿಕೆ ಕಂಡ ದಿ ಕೇರಳ ಸ್ಟೋರಿ, ಆದಾ ಶರ್ಮಾ ಸಿನಿಮಾ 3 ನೇ ವಾರ ಭರ್ಜರಿ ಕಲೆಕ್ಸನ್ಸ್
ಇದನ್ನೂ ಓದಿ : ಜೂನಿಯರ್ ಎನ್ ಟಿಆರ್ ಹುಟ್ಟುಹಬ್ಬಕ್ಕೆ ನೀಲ್ ಸರ್ಪ್ರೈಸ್ : NTR31 ಸಿನಿಮಾದ ಶೂಟಿಂಗ್ ಯಾವಾಗ ಶುರು
ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಟ್ವೀಟ್ ಮಾಡಿದ ಸುದೀಪ್ ಮೇ ೨೨ರಂದು ಸಿನಿಮಾ ಶೂಟಿಂಗ್‌ನಲ್ಲಿ ಭಾಗಿ ಆಗುವುದಾಗಿ ಹೇಳಿದ್ದರು. ಅಂತೆಯೇ ನಟ ಸುದೀಪ್ ಭರ್ಜರಿಯಾಗಿ ಪೋಟೋಶೂಟ್ ಮಾಡಿಸುತ್ತಿದ್ದಾರೆ ಎನ್ನಲಾಗಿದೆ. ಮೂಲಗಳಿಂದ ಬಂದ ಮಾಹಿತಿ ಪ್ರಕಾರ, ಅನೂಪ್ ಭಂಡಾರಿ ನಿರ್ದೇಶನದ “ಬಿಲ್ಲ ರಂಗ ಭಾಷಾ” ಸಿನಿಮಾದ ಪ್ರೋಮೋಶೋಟ್ ಎನ್ನಲಾಗುತ್ತಿದೆ.
Kichcha Sudeep New Film Pomroshoot: Kichcha Sudeep gave a big update about the new movie.