ಬೆಂಗಳೂರು:kichcha sudeep : ಕ್ರಾಂತಿ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮದ ವೇಳೆಯಲ್ಲಿ ಬಳ್ಳಾರಿಯ ಹೊಸಪೇಟೆಯಲ್ಲಿ ನಟ ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣ ಇದೀ ಸ್ಯಾಂಡಲ್ವುಡ್ನ್ನು ಆಘಾತಕ್ಕೆ ಒಳಪಡಿಸಿದೆ. ದರ್ಶನ್ ಅಭಿಮಾನಿಗಳು ಈ ಘಟನೆಯನ್ನು ಖಂಡಿಸುತ್ತಿರುವುದು ಮಾತ್ರವಲ್ಲದೇ ಚಂದನವನದ ಬಹುತೇಕ ಎಲ್ಲಾ ಸ್ಟಾರ್ ನಟರು ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ. ಈ ಸಾಲಿಗೆ ಇದೀಗ ಕಿಚ್ಚ ಸುದೀಪ ಕೂಡ ಸೇರಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಮತ್ತೆ ಸುದೀಪ್ ಹಾಗೂ ದರ್ಶನ್ರನ್ನು ಒಟ್ಟಾಗಿ ಕಾಣಬೇಕು ಎಂಬುದು ಬಹುಜನರ ಆಸೆ. ಆದರೆ ಅದ್ಯಾಕೋ ಗೊತ್ತಿಲ್ಲ. ಇವರಿಬ್ಬರ ನಡುವಿನ ಮುನಿಸು ಶಮನವಾಗೋವಂತೆ ಕಾಣುತ್ತಿರಲಿಲ್ಲ. ಆದರೆ ಇದೀಗ ಎಲ್ಲಾ ಸಿಟ್ಟು, ಕೋಪಗಳನ್ನು ಬದಿಗೊತ್ತಿ ದರ್ಶನ್ ಪರ ನಿಂತಿರುವ ನಟ ಕಿಚ್ಚ ಸುದೀಪ ಬಂಡಾಯವೇಳುವುದು ಎಲ್ಲದಕ್ಕೂ ಉತ್ತರವಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
Rebellion isn't always an Answer.
— Kichcha Sudeepa (@KicchaSudeep) December 20, 2022
❤️🙏🏼 pic.twitter.com/fbwANDdgP0
ಟ್ವಿಟರ್ನಲ್ಲಿ ದೀರ್ಘ ಟಿಪ್ಪಣಿಯನ್ನು ಹಂಚಿಕೊಂಡಿರುವ ನಟ ಸುದೀಪ, ಪ್ರೀತಿ ಹಾಗೂ ಗೌರವ. ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರ ಎಂಬುದು ಇದ್ದೇ ಇರುತ್ತದೆ. ಅಲ್ಲದೇ ಪ್ರತಿಯೊಂದಕ್ಕೂ ಪರಿಹಾರವನ್ನು ನೀವು ಅನೇಕ ವಿಧಾನಗಳಲ್ಲಿ ಕಂಡುಕೊಳ್ಳಬಹುದು. ಪ್ರತಿಯೊಬ್ಬರನ್ನೂ ನಾವು ಗೌರವ ಹಾಗೂ ಘನತೆಯಿಂದ ಕಾಣಬೇಕು. ನಾನು ನೋಡಿದ ಆ ವಿಡಿಯೋ ನಿಜಕ್ಕೂ ನನ್ನ ಮನಸ್ಸನ್ನು ಘಾಸಿಗೊಳಿಸಿದೆ. ಚಪ್ಪಲಿ ಎಸೆಯುವ ವೇಳೆಯಲ್ಲಿ ಚಿತ್ರದ ನಾಯಕಿ ಸೇರಿದಂತೆ ಅನೇಕರು ವೇದಿಕೆಯ ಮೇಲೆ ನಿಂತಿದ್ದರು. ಕಾರ್ಯಕ್ರಮಕ್ಕೆಂದು ತೆರಳಿ ಸಾರ್ವಜನಿಕ ವೇದಿಕೆಯಲ್ಲಿ ಒಬ್ಬರನ್ನು ಈ ರೀತಿ ಅವಮಾನ ಮಾಡುವುದನ್ನು ನೋಡಿದರೆ ನೋವುಂಟಾಗುತ್ತೆ ಎಂದು ಸುದೀಪ್ ಬರೆದುಕೊಂಡಿದ್ದಾರೆ .
ದರ್ಶನ್ ಹಾಗೂ ನನ್ನ ನಡುವೆ ಭಿನ್ನಾಭಿಪ್ರಾಯಗಳು ಇರುವುದು ನಿಜ. ಹಾಗೆಂದ ಮಾತ್ರಕ್ಕೆ ನನ್ನ ಮನಸ್ಸಿಗೆ ಘಾಸಿಯುಂಟು ಮಾಡಿದ ವಿಚಾರಗಳ ಬಗ್ಗೆ ಮಾತನಾಡುವುದನ್ನು ನಾನು ನಿಲ್ಲಿಸಲಾರೆ. ದರ್ಶನ್ಗೆ ಚಪ್ಪಲಿ ಎಸೆದಿದ್ದು ಸಹ್ಯವಲ್ಲ. ಈ ಘಟನೆಯಿಂದ ನಾನು ನೊಂದಿದ್ದೇನೆ ಎಂದು ನಟ ಸುದೀಪ ಬೇಸರ ಹೊರ ಹಾಕಿದ್ದಾರೆ.
ಇದನ್ನು ಓದಿ : News Next Special: IPL Players Auction; ಈ ಮೂವರು ಕನ್ನಡಿಗರ ಮೇಲೆ ಕೃಪೆ ತೋರುತ್ತಾ RCB ?
kichcha sudeep says the video throwing chappal on actor darshan is very disturbing