ಬೆಂಗಳೂರು : ಕಿರಿಕ್ ಪಾರ್ಟಿ..ಸ್ಯಾಂಡಲ್ ವುಡ್ ಬ್ಯಾಕ್ಸಾಫೀಸ್ ಕೊಳ್ಳೆ ಹೊಡೆದ ಸಿನಿಮಾ. ಆದ್ರೀಗ ಕಿರಿಕ್ ಪಾರ್ಟಿ ಸಿನಿಮಾದ ಹಾಡೋಂದರ ಮ್ಯೂಸಿಕ್ ವಿಚಾರವಾಗಿ ಸಿನಿಮಾದ ನಟ ರಕ್ಷಿತ್ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ವಿರುದ್ದ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.

ಕಿರಿಕ್ ಪಾರ್ಟಿ ಸಿನಿಮಾದ ಮಧ್ಯ ರಾತ್ರಿಲಿ….ಹೈವೆ ರಸ್ತೇಲಿ..ಹಾಡಿನ ಸಂಗೀತವನ್ನು ಲಹರಿ ಸಂಸ್ಥೆ ಹೊಂದಿರುವ ಕಾಪಿರೈಟ್ ಹೊಂದಿರುವ ಮ್ಯೂಜಿಕ್ ಬಳಸಲಾಗಿದೆ ಎಂದು ಲಹರಿ ಸಂಸ್ಥೆ ಬೆಂಗಳೂರಿನ 9ನೇ ಎಸಿಎಂಎಂ ನ್ಯಾಯಾಲಯದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ರಕ್ಷಿತ್ ಶೆಟ್ಟಿ ಒಡೆತನದ ಪರಮ್ವಹ ಸ್ಟುಡಿಯೋಸ್ ವಿರುದ್ದ ಮೊಕದ್ದಮೆ ದಾಖಲಿಸಿತ್ತು.

ಆದರೆ ನ್ಯಾಯಾಲಯದ ವಿಚಾರಣೆಯ ವೇಳೆಯಲ್ಲಿ ನಟ ರಕ್ಷಿತ್ ಶೆಟ್ಟಿ ಗೈರು ಹಾಜರಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.