ಪ್ರೀತಿ ಅಂದ್ರೇ ಏನು? ಇದು ಇಂದು ನಿನ್ನೆಯಲ್ಲ ಶತ ಶತಮಾನಗಳಿಂದ ಉತ್ತರ ಕಂಡುಕೊಳ್ಳುವ ಪ್ರಯತ್ನ ದಲ್ಲೇ ಇರೋ ಪ್ರಶ್ನೆ. ಆದರೆ ಈ ಸೀರಿಯಸ್ ಪ್ರಶ್ನೆಗೆ ಅರ್ಥಪೂರ್ಣ ಉತ್ತರವೊಂದನ್ನು ನಟ, ಬಾದಶಾ, ಹೆಬ್ಬುಲಿ ಕಿಚ್ಚ ಸುದೀಪ್ ಮುದ್ದಿನ ಮಗಳು ಸಾನ್ವಿ (Kiccha Sudeep’s daughter) ಕಂಡುಕೊಂಡಿದ್ದಾರಂತೆ. ನನ್ನ 19 ನೇ ವಯಸ್ಸಿನಲ್ಲಿ ನಾನು ಪ್ರೀತಿಯ ಅರ್ಥ ಕಂಡುಕೊಂಡೆ ಏನ್ನುವ ಮೂಲಕ ಸಾನ್ವಿ ಹಲವರು ಹುಬ್ಬೇರಿಸುವಂತೆ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಕೇವಲ ನಟ-ನಟಿಯರು ಮಾತ್ರವಲ್ಲ ಅವರ ಮಕ್ಕಳು ಸಖತ್ ಆಕ್ಟೀವ್ ಆಗಿದ್ದಾರೆ. ಅದರಲ್ಲೂ ನಟ ಸುದೀಪ್ ಪುತ್ರಿ ಸಖತ್ ಆಕ್ಟಿವ್ ಆಗಿದ್ದು ತಮ್ಮ ಇಷ್ಟ- ಕಷ್ಟಗಳ ಬಗ್ಗೆ ಅಭಿಮಾನಿಗಳಿಗೆ ಅಪ್ಡೇಟ್ ನೀಡ್ತಲೇ ಇರ್ತಾರೆ. ಸಿಂಗರ್ ಆಗಿರೋ ಸಾನ್ವಿ ಸುದೀಪ್ (Saanvi Sudeep) ಇತ್ತೀಚಿಗೆ ತಮ್ಮ ಪಾಶ್ಚಾತ್ಯ ಸಂಗೀತದ ಕಾರ್ಯಕ್ರಮಕ್ಕಾಗಿ ಗ್ರ್ಯಾಂಡ್ ಪೋಟೋಶೂಟ್ ಕೂಡ ಮಾಡಿಸಿದ್ದರು. ಸಖತ್ ಟ್ರೆಂಡಿ ಪೋಟೋಶೂಟ್ ಯಾವ ನಟ-ನಟಿಯರಿಗೂ ಕಮ್ಮಿಯಿಲ್ಲದಷ್ಟು ಸೋಷಿಯಲ್ ಮೀಡಿಯಾ ಅಟೆನ್ಸನ್ ಪಡೆದುಕೊಂಡಿದ್ದು ಸುಳ್ಳಲ್ಲ.

ಸಾನ್ವಿ ಸುದೀಪ್, ಸುದೀಪ್ ಮಗಳು ಅನ್ನೋದಕ್ಕಿಂತ ಸುದೀಪ್ ಅವರ ಮೊದಲ ಅಭಿಮಾನಿ ಎಂದು ಕರೆದುಕೊಳ್ಳಲು ಇಷ್ಟಪಡುತ್ತಾರಂತೆ. ಈ ವಿಚಾರವನ್ನು ಸಾಕಷ್ಟು ಭಾರಿ ಸಾನ್ವಿ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ಗಳಲ್ಲಿ ಹೇಳಿಕೊಂಡಿದ್ದಾರೆ. ಸುದೀಪ್ ಅವರ ಅಭಿಮಾನಿ ಮಾತ್ರವಲ್ಲ ಮೊದಲ ಕ್ರಿಟಿಕ್ ಕೂಡ ಅವರೇ. ಸುದೀಪ್ ಸಿನಿಮಾ,ನಟನೆ,ಡ್ಯಾನ್ಸ್ ಹೀಗೆ ಎಲ್ಲ ವಿಚಾರದಲ್ಲೂ ಮೊದಲಕಮೆಂಟ್ ಕೂಡ ಅವರದ್ದೇ ಇರುತ್ತಂತೆ. ಇಂತಿಪ್ಪ ಸುದೀಪ್ (Kiccha Sudeep) ಮುದ್ದಿನಮಗಳು ಸಾನ್ವಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಬಲ್ಲ ಪೋಸ್ಟ್ ವೊಂದನ್ನು ಹಾಕಿದ್ದಾರೆ.

ನನ್ನ 19 ನೇ ವಯಸ್ಸಿನಲ್ಲಿ ನಾನು ಪ್ರೀತಿಯ ನಿಜವಾದ ಅರ್ಥವನ್ನು ಕಂಡುಕೊಂಡೆ ಎಂದಿದ್ದಾರೆ. ಸಾನ್ವಿ ಈ ಪೋಸ್ಟ್ ಗೆ ಹೆಬ್ಬುಲಿಯ ಮಗಳು ಪ್ರೀತಿ ಪ್ರೇಮದ ಚಕ್ಕರ್ ಗೆ ಬಿದ್ಲಾ ಅನ್ನೋ ಅನುಮಾನ ವ್ಯಕ್ತವಾಗಿದ್ದರೇ, ಇನ್ನಷ್ಟು ಜನರು ಯಾರು ನಿಮಗೆ ಪ್ರೀತಿಯ ನಿಜವಾದ ಅರ್ಥವನ್ನು ತಿಳಿಸಿಕೊಟ್ಟವರು ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ : ಒಂದೇ ಒಂದು ಡೈಲಾಗ್ ಗೆ ಮನಸೋತ ಮೇಘನಾ: ತತ್ಸಮ ತದ್ಬವದ ಹಿಂದಿದ್ಯಾ ಚಿರು ಕಹಾನಿ
ಇನ್ನು ಕೆಲವರು ಆಹಾ …..ನೀವು ಪ್ರೀತಿಯಲ್ಲಿ ಬಿದ್ದಿದ್ದೀರಾ? ನಿಮ್ಮ ಅಪ್ಪನಿಗೆ ಗೊತ್ತಾದರೇ ಕತೆ ಏನು ಎಂದು ಕಮೆಂಟ್ ಮಾಡಿದ್ದಾರೆ. ಆದರೆ ಸಾನ್ವಿ ಸುದೀಪ್ ಪೋಸ್ಟ್ ನ ಅಸಲಿ ಮ್ಯಾಟರ್ ಬೇರೆ. ತಂದೆಯನ್ನು ಅಪಾರವಾಗಿ ಪ್ರೀತಿಸೋ ಸಾನ್ವಿ ಸುದೀಪ್ ಜಗತ್ತಿನಲ್ಲಿ ಎಲ್ಲ ಪ್ರೀತಿಗಿಂತ ಅಪ್ಯಾಯಮಾನವಾದ್ದದ್ದು ಹಾಗೂ ಮುಖ್ಯವಾದದ್ದು ತಂದೆಯ ಪ್ರೀತಿ ಎಂಬರ್ಥದಲ್ಲಿ ಪೋಸ್ಟ್ ಹಾಕಿದ್ದಾರೆ.

At Age Of 19, finally I understood love is not something texting someone at 2am, it was my dad putting my photo as profile pic.
ಇದನ್ನೂ ಓದಿ : ವಯಸ್ಸಿನ ಜೊತೆ ಅಂದವೂ ಏರ್ತಿದೆ…! ಇದು ಮಲೈಕಾ ಅರೋರಾ ಎಂಬ ಮಾದಕ ಸುಂದರಿ ಕತೆ
ಪ್ರೀತಿ ಎಂದರೇ ತಡರಾತ್ರಿ ಎರಡು ಗಂಟೆಯವರೆಗೆ ಯಾರಿಗೀ ಮೆಸೆಜ್ ಮಾಡೋದಲ್ಲ.ನನ್ನ ತಂದೆಯ ಹಾಗೇ ಮಗಳ ಪೋಟೋವನ್ನು ಪ್ರೊಫೈಲ್ ಪೋಟೋ ಹಾಕೋದು ಎಂಬರ್ಥದಲ್ಲಿ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ. ಮೊಬೈಲ್ ಸೇರಿದಂತೆ ಹಲವು ಕಡೆಗಳಲ್ಲಿ ಕಿಚ್ಚ ಸುದೀಪ್ ಮಗಳು ಸಾನ್ವಿ ಚಿಕ್ಕವಳಿರುವಾಗ ಅವಳೊಂದಿಗೆ ತೆಗೆಸಿಕೊಂಡ ಪೋಟೋವನ್ನೇ ಪ್ರೊಫೈಲ್ ಪಿಕ್ ರೂಪದಲ್ಲಿ ಹಾಕಿಕೊಂಡಿದ್ದಾರೆ. ಇದೇ ವಿಚಾರಕ್ಕೆ ಸಾನ್ವಿ ಸುದೀಪ್ ಈ ರೀತಿ ಪೋಸ್ಟ್ ಹಾಕಿದ್ದಾರೆ. ಸಾನ್ವಿ ಈ ಪೋಸ್ಟ್ ಗೆ ಸ್ವತಃ ಪ್ರಿಯಾ ಸುದೀಪ್ ಸೇರಿದಂತೆಎಲ್ಲರೂ ಲೈಕ್‌ಕಮೆಂಟ್ ಮಾಡಿದ್ದಾರೆ.
Know the true meaning of love : Sanvi Sudeep’s post goes viral