Koffee With Karan 7 : ಬಾಲಿವುಡ್ನ ಖ್ಯಾತ ನಿರ್ದೇಶಕ ಕರಣ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ ಎಂಬ ಕಾರ್ಯಕ್ರಮ ಸಾಕಷ್ಟು ಕಾರಣಗಳಿಂದ ಸುದ್ದಿಯಲ್ಲಿ ಇರುತ್ತದೆ. ಇಲ್ಲಿ ಸೆಲೆಬ್ರಿಟಿಗಳಿಗೆ ಕೇಳಲಾಗುವ ಬೋಲ್ಡ್ ಪ್ರಶ್ನೆಗಳಿಗೆ ಈ ಕಾರ್ಯಕ್ರಮ ಸದಾ ಸುದ್ದಿಯಲ್ಲಿ ಇರುತ್ತದೆ. ಇದೀಗ ಕಾಫಿ ವಿತ್ ಕರಣ್ ಕಾರ್ಯಕ್ರಮದ 7ನೇ ಸೀಸನ್ ಆರಂಭಗೊಳ್ಳಲಿದ್ದು ಈ ಸರಣಿಯ ಮೊದಲ ಅತಿಥಿಯಾಗಿ ಆಲಿಯಾ ಭಟ್ ಹಾಗೂ ರಣವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಕರಣ್ ಜೊತೆಯಲ್ಲಿ ಕಾಫಿ ಸವಿಯುತ್ತಾ ಈ ಇಬ್ಬರು ಸೆಲೆಬ್ರಿಟಿಗಳು ಅನೇಕ ವಿವಾದಾತ್ಮಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಎಂದಿನಂತೆ ಕರಣ್ ಜೋಹರ್ ತನ್ನ ಬೋಲ್ಡ್ ಪ್ರಶ್ನೆಗಳನ್ನು ಇವರಿಬ್ಬರ ನಡುವೆ ಇಟ್ಟಿದ್ದು ಇದಕ್ಕೆ ಆಲಿಯಾ ಕೂಡ ಬೋಲ್ಡ್ ಉತ್ತರವನ್ನೇ ನೀಡಿದ್ದಾರೆ.
ಕೆಲವು ತಿಂಗಳುಗಳ ಹಿಂದೆಯಷ್ಟೇ ಬಾಲಿವುಡ್ ನಟ ರಣಬೀರ್ ಕಪೂರ್ ಜೊತೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ನಟಿ ಆಲಿಯಾ ಭಟ್ ತಮ್ಮ ಪ್ರೆಗ್ನೆನ್ಸಿ ವಿಚಾರವನ್ನೂ ಬಹಿರಂಗಪಡಿಸಿದ್ದಾರೆ. ಕರಣ್ ಜೋಹರ್ ತಮ್ಮ ಕಾರ್ಯಕ್ರಮದಲ್ಲಿ ಮದುವೆಯಾದ ಬಳಿಕ ನಿಮಗೆ ನಿಮಗೆ ತಿಳಿದು ಬಂದ ಬಹುದೊಡ್ಡ ತಪ್ಪು ತಿಳುವಳಿಕೆ ಯಾವುದು ಎಂದು ಕೇಳಿದ್ದಕ್ಕೆ ಆಲಿಯಾ ಭಟ್ ಫಸ್ಟ್ ನೈಟ್ ಎಂದು ಉತ್ತರ ನೀಡಿದ್ದಾರೆ.
ಮದುವೆ ಆದಮೇಲೆ ಆ ದಿನವೇ ಫಸ್ಟ್ ನೈಟ್ ಆಗುತ್ತದೆ ಎಂಬುದು ಬಹುದೊಡ್ಡ ತಪ್ಪು ಕಲ್ಪನೆ. ಮದುವೆಯ ದಿನ ರಾತ್ರಿ ನಿಮಗೆ ತುಂಬಾನೇ ಸುಸ್ತಾಗಿರುತ್ತದೆ ಎಂದು ಆಲಿಯಾ ಭಟ್ ಹೇಳಿದ್ದಾರೆ. ಆಲಿಯಾರ ಈ ಉತ್ತರಕ್ಕೆ ರಣವೀರ್ ಸಿಂಗ್ ಹಾಗೂ ಕರಣ್ ಜೋಹರ್ ಗೊಳ್ಳೆಂದು ನಕ್ಕಿದ್ದಾರೆ. ರಣವೀರ್ ಸಿಂಗ್ ಹಾಗೂ ಆಲಿಯಾ ಭಟ್ ನಟನೆಯ ಗಲ್ಲಿಬಾಯ್ ಸಿನಿಮಾ ಈ ಹಿಂದೆ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.ಇದೀಗ ಇದೇ ಜೋಡಿ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಎಂಬ ಸಿನಿಮಾದ ಮೂಲಕ ಮತ್ತೆ ತೆರೆ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳಲಿದೆ. ಈ ಸಿನಿಮಾಗೆ ಕರಣ್ ಜೋಹರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಈ ನಡುವೆ ಕಾಫಿ ವಿತ್ ಕರಣ್ ಕಾರ್ಯಕ್ರಮದ ಮೊದಲ ಟ್ರೇಲರ್ನ್ನು ಇತ್ತೀಚಿಗೆ ಅನಾವರಣಗೊಳಿಸಲಾಗಿದೆ. ಈ ಪ್ರೋಮೋದಲ್ಲಿ ಅಕ್ಷಯ್ ಕುಮಾರ್, ಅನಿಲ್ ಕಪೂರ್, ರಣವೀರ್ ಸಿಂಗ್, ಆಲಿಯಾ ಭಟ್, ವರುಣ್ ಧವನ್, ಜಾನ್ವಿ ಕಪೂರ್, ಸಾರಾ ಅಲಿ ಖಾನ್, ವಿಜಯ್ ದೇವರಕೊಂಡ, ಸಮಂತಾ ರೂತ್ ಪ್ರಭು, ಶಾಹಿದ್ ಕಪೂರ್ ಮತ್ತು ಕಿಯಾರಾ ಅಡ್ವಾಣಿ ಸೇರಿದಂತೆ ಅನೇಕ ತಾರೆಯರು ಹಾಟ್ ಸೀಟ್ನಲ್ಲಿ ಕುಳಿತ ದೃಶ್ಯಗಳನ್ನು ಪ್ರಸಾರ ಮಾಡಲಾಗಿದೆ.
ಇದನ್ನು ಓದಿ : Karnataka Cricket : ಕೋಚ್‌ಗಳನ್ನು ಬದಲಿಸಲಿದ್ದರೆ ಕರ್ನಾಟಕ ರಣಜಿ ತಂಡಕ್ಕೆ ಉಳಿಗಾಲವಿಲ್ಲ !
ಇದನ್ನೂ ಓದಿ : Ola driver kills passenger : ಒಟಿಪಿ ವಿಚಾರಕ್ಕೆ ಜಗಳ : ಕೋಪಗೊಂಡ ಓಲಾ ಚಾಲಕನಿಂದ ಪ್ರಯಾಣಿಕನ ಕೊಲೆ
Koffee With Karan 7 Ep 1: First guest Alia Bhatt talks about ‘suhaag raat’, Ranveer Singh can’t stop laughing