ಸ್ಯಾಂಡಲ್‌ವುಡ್‌ನಲ್ಲಿ ದಾಖಲೆ ಮಾಡಿದ ಸಿನಿಮಾ ಕೆಜಿಎಫ್. ಈ ಸಿನಿಮಾದಲ್ಲಿ ತಾತನ ಪಾತ್ರ ಮಾಡಿದ ಕನ್ನಡದ ಹಿರಿಯ ನಟ ಕೃಷ್ಣ ಜಿ ರಾವ್ (Krishna G Rao Health Update) ಆರೋಗ್ಯ ಹದಗೆಟ್ಟಿದೆ. ‘ಕೆಜಿಎಫ್ 1’ ಮತ್ತು ‘ಕೆಜಿಎಫ್ 2’ ಸಿನಿಮಾಗಳಲ್ಲಿ ಅಂಧ ವೃದ್ಧನ ಪಾತ್ರದಲ್ಲಿ ನಟಿಸಿ ಫೇಮಸ್ ಆಗಿರುವ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು, ಈಗ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.
ಈ ಸಿನಿಮಾಗಳ ಯಶಸ್ಸಿನ ನಂತರ ಅವರಿಗೆ ಹಲವು ಅವಕಾಶಗಳು ಬರತೊಡಗಿದವು. ಇದೀಗ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಜಿಎಫ್ ನಟ ಕೃಷ್ಣ ಜಿ ರಾವ್ ಅವರು ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಮತ್ತು ಆಪ್ತರು ಪ್ರಾರ್ಥಿಸುತ್ತಿದ್ದಾರೆ.
ಕೆಜಿಎಫ್ ಸರಣಿ ಸಿನಿಮಾವನ್ನು ಪ್ರಶಾಂತ್ ನೀಲ್ ರಚಿಸಿ ನಿರ್ದೇಶಿಸಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶಿಸಿರುವ ಈ ಸಿನಿಮಾವು ಕೋಲಾರ ಚಿನ್ನದ ಗಣಿ ಆಧಾರಿತ ಕಥಾಹಂದರವನ್ನು ಒಳಗೊಂಡಿದೆ. ಯಶ್ ನಟಿಸಿದ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ ಭಾರತೀಯ ಕನ್ನಡ ಭಾಷೆಯ ಸಾಹಸ ಸಿನಿಮಾವಾಗಿದೆ. 1970 ರ ದಶಕದ ಕೊನೆಯಲ್ಲಿ ಮತ್ತು 1980 ರ ದಶಕದ ಆರಂಭದಲ್ಲಿ ಬಡತನದಲ್ಲಿ ಜನಿಸಿದ ಮುಂಬೈ ಮೂಲದ ಭೂಗತಲೋಕದ ಹಂತಕ ರಾಜಾ ಕೃಷ್ಣಪ್ಪ ಬೈರ್ಯ ಪಾತ್ರಧಾರಿ ರಾಕಿ (ಯಶ್), ಕೋಲಾರ ಚಿನ್ನದ ಗಣಿಯಲ್ಲಿ ಅಧಿಕಾರಕ್ಕೆ ಏರಲು ಮತ್ತು ಕುಖ್ಯಾತ ಉದ್ಯಮಿಯಾಗಿ ನಂತರದ ದಂಗೆಯನ್ನು ಈ ಸಿನಿಮಾದಲ್ಲಿ ಕಾಣಬಹುದಾಗಿದೆ.
ಇದನ್ನೂ ಓದಿ : Khasagi Putagalu : ಪ್ರೇಕ್ಷಕರ ಮನಗೆದ್ದ “ಖಾಸಗಿ ಪುಟಗಳು” ಮೆಚ್ಚುಗೆ ಸೂಚಿಸಿದ ಸ್ಯಾಂಡಲ್‌ವುಡ್ ಸೆಲೆಬ್ರೆಟಿಗಳು
ಇದನ್ನೂ ಓದಿ : Vijay Devarakonda: ‘ಲೈಗರ್’ ಚಿತ್ರತಂಡಕ್ಕೆ ಸೋಲಿನ ನಡುವೆಯೇ ಇಡಿ ಶಾಕ್; ವಿಚಾರಣೆಗೆ ಹಾಜರಾದ ವಿಜಯ ದೇವರಕೊಂಡ
ಇದನ್ನೂ ಓದಿ : Rishab Shetty Photoshoot: ‘ಹ್ಯಾಷ್ ಟ್ಯಾಗ್’ ಮ್ಯಾಗಜಿನ್ ಮುಖಪುಟದಲ್ಲಿ ರಿಷಬ್ ಶೆಟ್ಟಿ; ಫೋಟೋಶೂಟ್ ನಲ್ಲಿ ಮಿಂಚಿದ್ದು ಹೀಗೆ..
ಈ ಸಿನಿಮಾದ ಮೊದಲ ಭಾಗವನ್ನು ಡಿಸೆಂಬರ್ 21, 2018 ರಂದು ಮತ್ತು ಎರಡನೇ ಭಾಗವನ್ನು ಏಪ್ರಿಲ್ 14, 2022 ರಂದು ಬಿಡುಗಡೆ ಮಾಡಲಾಗಿದೆ. ಈ ಸಿನಿಮಾ ಮೊದಲ ಭಾಗವೇ ದೇಶ ವಿದೇಶಗಳಲ್ಲಿ ಪ್ರಶಂಸೆ ಪಡೆದು ಸಿನಿ ಪ್ರೇಕ್ಷಕರ ಮನರಂಜಿಸಿರುತ್ತದೆ. ಸಿನಿಮಾದ ಎರಡನೇ ಭಾಗ ಕೂಡ ಸಿನಿಪ್ರೇಕ್ಷಕರ ನಿರೀಕ್ಷೆಗೂ ಮಿರಿ ದಾಖಲೆಯನ್ನು ಸೃಷ್ಟಿಸಿದೆ.
Krishna G Rao Health Update : KGF senior actor’s health condition critical : Hospitalized