ಬಾಲಿವುಡ್, ಹಾಲಿವುಡ್, ಸ್ಯಾಂಡಲ್ ವುಡ್ ಹೀಗೆ ಎಲ್ಲಾ ಚಿತ್ರರಂಗದ ನಟಿ ಮಣಿಯರು ಒಮ್ಮೊಮ್ಮೆ ತಮ್ಮ ಬಣ್ಣದ ಲೋಕದ ಗತ್ತಿನೊಳಗೆ ಹುದುಗಿದ ಕರಾಳ ನೋವುಗಳನ್ನು ಬಿಚ್ಚಿಡುತ್ತಾರೆ. ಇತ್ತೀಚಿಗೆ ಧಾಕಡ್ ಬೆಡಗಿ ಕಂಗನಾ ತಾನು ಚಿಕ್ಕವಯಸ್ಸಿನಲ್ಲಿಯೇ ದೌರ್ಜನ್ಯಕ್ಕೆ ಒಳಗಾಗಿದ್ದೇ ಎಂದಿದ್ದರು. ಈ ಖ್ಯಾತ ಬಾಲಿವುಡ್ ನಟಿ ಕುಬ್ರಾ ಸೇಠ್ (Kubra Sait) ತಮ್ಮನ್ನು ಕುಟುಂಬದ ಸ್ನೇಹಿತರೊಬ್ಬರು ಹೇಗೆ ದುರ್ಬಳಕೆ ಮಾಡಿಕೊಂಡಿದ್ದರು ಎಂಬ ಸಂಗತಿಯನ್ನು ಬಿಚ್ಚಿಟ್ಟಿದ್ದು ಈ ದುರ್ಘಟನೆಗೆ ರಾಜ್ಯ ರಾಜಧಾನಿ ಬೆಂಗಳೂರು ಸಾಕ್ಷಿಯಾಗಿತ್ತು ಎಂಬುದು ಆತಂಕದ ಸಂಗತಿ.

ಹೌದು ನಟಿ ಕುಬ್ರಾ ಸೇಠ್ (Kubra Sait) ನಟನೆಯ ಜೊತೆಗೆ ಬರಹವನ್ನು ತಮ್ಮದಾಗಿಸಿಕೊಂಡಿದ್ದಾರೆ. ಸದ್ಯ ಕುಬ್ರಾ ಸೇಠ್ ಬರೆದಿರುವ ಓಫನ್ ಬುಕ್ ರಿಲೀಸ್ ಆಗಿದೆ. ಈ ಬುಕ್ ರಿಲೀಸ್ ಆಗುತ್ತಿದ್ದಂತೆ ಕುಬ್ರಾ ಸೇಠ್ ಬಾಲ್ಯದಲ್ಲಿ ಹಾಗೂ ಯೌವ್ವನದಲ್ಲಿ ಅನುಭವಿಸಿದ ನೋವುಗಳು ಬಹಿರಂಗಗೊಂಡಿವೆ. ತಮ್ಮ 17 ನೇ ವಯಸ್ಸಿನಲ್ಲಿ ಕುಬ್ರಾ ಸೇಠ್ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರಂತೆ. ನನ್ನ 17 ನೇ ವಯಸ್ಸಿನಲ್ಲಿ ನಾನು ಬೆಂಗಳೂರಿನ ರೆಸ್ಟೋರೆಂಟ್ ಒಂದಕ್ಕೆ ಭೇಟಿ ನೀಡುತ್ತಿದ್ದೆ. ಆ ರೆಸ್ಟೋರೆಂಟ್ ಮಾಲೀಕರು ನನಗೆ ಮತ್ತು ಸಹೋದರ ದ್ಯಾನಿಶ್ ಗೆ ಆತ್ಮೀಯರಾಗಿದ್ದರು.

ಅಲ್ಲದೇ ಆಗ ಅತ್ಯಂತ ಕಷ್ಟದಲ್ಲಿದ್ದ ನನ್ನ ತಾಯಿಗೆ ಆರ್ಥಿಕ ನೆರವು ನೀಡಿದ್ದರು. ಆದರೆ ಹಾಗೇ ಸಹಾಯ ಮಾಡಿದ ಆತ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ನನ್ನನ್ನು ಅಂಕಲ್ ಎಂದು ಕರೆಯಬೇಡ ಎಂದಿದ್ದ. ಒಮ್ಮೆ ಕಾರಿನಲ್ಲಿ ಹೋಗುವಾಗ ನನ್ನ ಬಟ್ಟೆ ಸರಿಸಿ ನನ್ನ ತೊಡೆಯನ್ನುಮುಟ್ಟಿದ್ದರು ಎಂದು ಬರೆದಿದ್ದಾರೆ. ಅಲ್ಲದೇ ಆತ ನಮ್ಮ ಮನೆಗೆ ಬರುತ್ತಿದ್ದ ಆಗ ನಮ್ಮಮ್ಮ ಅವನಿಗೆ ಅಡುಗೆ ಮಾಡಿ ಬಡಿಸುತ್ತಿದ್ದರು. ಆತ ಊಟ ಮಾಡಿ ಹೋಗುತ್ತಿದ್ದ. ಅಲ್ಲದೇ ನನ್ನ ಕತ್ತಿನ ಮೇಲೆ ಚುಂಬಿಸಿ ನೀನೇಂದರೇ ನನಗಿಷ್ಠ ಎನ್ನುತ್ತಿದ್ದ. ಒಮ್ಮೆ ರೆಸ್ಟೋರೆಂಟ್ ಗೆ ಹೋದಾಗ ಆತ ನನ್ನ ತಲೆ ಹಿಡಿದು ತುಟಿಗೆ ಚುಂಬಿಸಿದ. ನಾನು ಆಗ ಜೋರಾಗಿ ಕೂಗಿ ಕೊಳ್ಳಬೇಕಿತ್ತು. ಅಲ್ಲಿಂದ ಓಡಿ ಹೋಗಬೇಕಿತ್ತು. ಆದರೆ ನಾನು ಶಾಕ್ ನಲ್ಲಿದ್ದೇ. ಅವನು ನನ್ನ ಪ್ಯಾಂಟ್ ಬಿಚ್ಚಿದ ಆಗ ನನ್ನ ಕನ್ಯತ್ವ ಕಳೆದುಹೋಗುತ್ತಿದೆ ಎಂದು ನನಗೆ ಅನ್ನಿಸುತ್ತಿತ್ತು ಎಂದು ಕುಬ್ರಾ ಸೇಠ್ (Kubra Sait) ಬರೆದುಕೊಂಡಿದ್ದಾರೆ.

ಬಳಿಕ ಆತನಿಗೆ ಮದುವೆಯಾಯಿತು, ಎರಡು ಮಕ್ಕಳಾಯಿತು. ಆದರೆ ಅವನಿಗೆ ನಾನಿದನ್ನು ಮನೆಯಲ್ಲಿ ಹೇಳ ಬಹುದೆಂಬ ಭಯವಿತ್ತು. ಅದಕ್ಕಾಗಿ ಆತ ನನಗೆ ಯಾರಿಗಾದರೂ ಹೇಳಿದರೇ ಕುಟುಂಬವನ್ನೇ ನಾಶ ಮಾಡುವ ಬೆದರಿಕೆ ಹಾಕಿದ್ದ ಎಂದು ಕುಬ್ರಾ ಬರೆದಿದ್ದು ಆಗ ನನಗೆ ನನ್ನ ಅತ್ಮ ದೇಹ ಸತ್ತು ಹೋದಂತೆ ಭಾಸವಾಗುತ್ತಿತ್ತು ಎಂದಿದ್ದಾರೆ. ಒಟ್ಟಿನಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯದ ಪ್ರಕರಣ ಸದ್ಯ ಬಾಲಿವುಡ್ ನಲ್ಲಿ ಸದ್ದು ಮಾಡಲಾರಂಭಿಸಿದೆ.
ಇದನ್ನೂ ಓದಿ : Samantha Ruth Prabhu : ಪುಷ್ಪ ಬೆಡಗಿಯ ಹೊಸ ಅವತಾರ : ಬೇಗಂ ಲುಕ್ ನಲ್ಲಿ ಮಿಂಚಿದ ಸಮಂತಾ
ಇದನ್ನೂ ಓದಿ : Sophie Choudry : ಈಕೆಗೆ ಬೆಸ್ಟ್ ಬಟ್ಟೇ ಅಂದ್ರೇ ಬಿಕನಿಯಂತೆ : ಸೋಷಿಯಲ್ ಮೀಡಿಯಾದಲ್ಲಿ ಸೋಫಿಯಾ ರಂಗು
Kubra Sait face Sexual Abuse in Bangaluru