ಡಿವೈನ್‌ಸ್ಟಾರ್ ರಿಷಬ್ ಶೆಟ್ಟಿ ಸದ್ಯ ಸ್ಯಾಂಡಲ್‌ವುಡ್‌ನ ಬಹು ಬೇಡಿಕೆಯ ನಟ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಕಾಂತಾರ ಸಿನಿಮಾ ಸೂಪರ್‌ಹಿಟ್ ನಂತರ ನಟ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಕೂಡ ಗುರುತಿಸಿಕೊಂಡಿದ್ದಾರೆ. ಕಾಂತಾರ ಹಿಟ್ ನಂತರ ಅಭಿಮಾನಿಗಳು ಕಾಂತಾರ 2 ಸಿನಿಮಾ ಬೇಡಿಕೆ ಇಟ್ಟುದ್ದು, ಅದಕ್ಕಾಗಿ ಸಿನಿತಂಡ ಸಕಲ ಸಿದ್ಧತೆಯಲ್ಲಿ ಬ್ಯುಸಿಯಾಗಿದ್ದಾರೆ. ಅದರ ನಡುವಲ್ಲೇ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ “ಲಾಫಿಂಗ್ ಬುದ್ಧ” (Laughing Buddha Movie) ಎನ್ನುವ ಹೊಸ ಸಿನಿಮಾದ ನಿರ್ಮಾಣಕ್ಕೆ ಕೈ ಹಾಕಿದ್ದಾರೆ.
ಇತ್ತೀಚೆಗಷ್ಟೇ ತಮ್ಮ ಮಗಳು ರಾದ್ಯಾಳ ಹುಟ್ಟುಹಬ್ಬವನ್ನು ಕುಟುಂಬದವರು, ಸಿನಿತಾರೆಯರು ಸೇರಿದಂತೆ ಗಣ್ಯರೊಂದಿಗೆ ಬಹಳ ಅದ್ದೂರಿಯಾಗಿ ಆಚರಿಸಿದ್ದಾರೆ. ಸದ್ಯ ಎಂ. ಭರತ್ ರಾಜ್ ನಿರ್ದೇಶನದ ಹಾಸ್ಯ ಮನರಂಜನೆಯ “ಲಾಫಿಂಗ್ ಬುದ್ಧ” ಸಿನಿಮಾದ ಮೂಹರ್ತವನ್ನು ಭದ್ರಾವತಿಯ ಚಂಡಿಕಾ ದುರ್ಗಾ ನೆರವೇರಿಸಿದ್ದಾರೆ. ಇನ್ನು ರಿಷಬ್ ಶೆಟ್ಟಿ ತಮ್ಮ ಟ್ವಿಟರ್‌ನಲ್ಲಿ “ಲಾಫಿಂಗ್ ಬುದ್ಧ ಸಿನಿಮಾದ ಚಿತ್ರೀಕರಣ ಇಂದಿನಿಂದ ಪ್ರಾರಂಭ, ಎಂದಿನಂತೆ ನಿಮ್ಮ ಆಶೀರ್ವಾದ ತಂಡದ ಮೇಲೆ ಇರಲಿ” ಎಂದು ಕೇಳಿದ್ದಾರೆ.
ಲಾಫಿಂಗ್ ಬುದ್ಧ ಸಿನಿಮಾದ ಚಿತ್ರೀಕರಣ ಇಂದಿನಿಂದ ಪ್ರಾರಂಭ, ಎಂದಿನಂತೆ ನಿಮ್ಮ ಆಶೀರ್ವಾದ ತಂಡದ ಮೇಲೆ ಇರಲಿ 🙏🏻#BharathRajM @UrsPramodShetty pic.twitter.com/VzIrzm2IJb
— Rishab Shetty (@shetty_rishab) March 13, 2023
ಈ ಸಿನಿಮಾ ಕಥೆಯು ಒಬ್ಬ ಪೊಲೀಸ್ ಪೇದೆಯ ಸುತ್ತ ಸುತ್ತುತ್ತದೆ. ದೇಹದ ತೂಕ ಹೆಚ್ಚಿರುವ ಪೊಲೀಸ್ ಕಾನ್‌ಸ್ಟೇಬಲ್ ಹೇಗೆ ಜನರ ಉತ್ಸಾಹವನ್ನು ಹೆಚ್ಚಿಸುತ್ತಾರೆ. ಇಡೀ ಪೊಲೀಸ್ ಠಾಣೆಗೆ ಸಂತೋಷವನ್ನು ತರುತ್ತಾರೆ ಎನ್ನುವುದೇ ಸಿನಿಮಾದ ಮೂಲಕಥೆಯಾಗಿದೆ. ಸಿನಿಮಾದಲ್ಲಿ ಹಾಸ್ಯದೊಂದಿಗೆ ಭಾವನಾತ್ಮಕ ದೃಶ್ಯಗಳನ್ನು ಒಳಗೊಂಡಿದೆ ಎಂದು ಸಿನಿತಂಡ ಹೇಳಿದೆ.ಈ ಸಿನಿಮಾದಲ್ಲಿ ನಾಯಕ ನಟನ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಹಾಗೂ ನಾಯಕಿ ತೇಜು ಬೆಳವಾಡಿ ಅಭಿನಯಿಸಿದ್ದಾರೆ. ನಟಿ ತೇಜು ಬೆಳವಾಡಿ ಕೊನೆದಾಗಿ ಗಂಟುಮೂಟೆ ಸಿನಿಮಾದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೇ ತೇಜು ಬೆಳವಾಡಿ ಬೇರೆ ಯಾರು ಅಲ್ಲ ನಟ ಪ್ರಕಾಶ್ ಬೆಳವಾಡಿ ಅವರ ಪುತ್ರಿ.
ಇದನ್ನೂ ಓದಿ : ಅಶ್ವಿನಿ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಸಂಭ್ರಮ : ಅಪ್ಪು ನೆನೆದು ಭಾವುಕರಾದ ಫ್ಯಾನ್ಸ್
ಇದನ್ನೂ ಓದಿ : ಅಶ್ವಿನಿ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಸಂಭ್ರಮ : ಅಪ್ಪು ನೆನೆದು ಭಾವುಕರಾದ ಫ್ಯಾನ್ಸ್
ರಿಷಬ್ ಶೆಟ್ಟಿ ಈಸ ಇನಿಮಾವನ್ನು ಕಾಫಿ ಗ್ಯಾಂಗ್ ಸ್ಟುಡಿಯೋಸ್ ಅವರೊಂದಿಗೆ ನಿರ್ಮಾಣ ಕಾರ್ಯ ಮಾಡಲಿದ್ದಾರೆ. ಇವರೊಂದಿಗೆ ಶ್ರೀಕಾಂತ್ ಮತ್ತು ವಿಕಾಸ್ ಕೂಡ ನಿರ್ಮಾಣ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಸಿನಿಮಾ ಶೂಟಿಂಗ್ ಭದ್ರಾವತಿ ಹಾಗೂ ಅಲ್ಲಿಯ ಆಸುಪಾಸಿನಲ್ಲಿ ನಡೆಯಲಿದ್ದು, ವಿಷ್ಣು ವಿಜಯ್ ಅವರ ಅದ್ಭುತ ಸಂಗೀತ ಇರುತ್ತದೆ. ಇನ್ನು ಚಂದ್ರಶೇಖರ್ ಅವರ ಛಾಯಾಗ್ರಹಣ ಹಾಗೂ ಕೆಎಂ ಪ್ರಕಾಶ್ ಅವರ ಸಂಕಲನ ಈ ಸಿನಿಮಾಕ್ಕಿದೆ.
ಇದನ್ನೂ ಓದಿ : Puneeth Rajkumar’s life success story: ದೇವತಾಮನುಷ್ಯನಾದ ಪುನೀತ್ ರಾಜ್ ಕುಮಾರ್ ಅವರ ಜೀವನ ಯಶೋಗಾಥೆ
Laughing Buddha Movie: Before Kantara 2 movie, actor Rishabh Shetty is going to make a new movie “Laughing Buddha”.