ಭಾನುವಾರ, ಏಪ್ರಿಲ್ 27, 2025
HomeCinemaLaughing Buddha Movie : ನಟ ರಿಷಬ್‌ ಶೆಟ್ಟಿ ನಿರ್ಮಾಣದ ಲಾಫಿಂಗ್‌ ಬುದ್ಧ ಸಿನಿಮಾ ಚಿತ್ರೀಕರಣ...

Laughing Buddha Movie : ನಟ ರಿಷಬ್‌ ಶೆಟ್ಟಿ ನಿರ್ಮಾಣದ ಲಾಫಿಂಗ್‌ ಬುದ್ಧ ಸಿನಿಮಾ ಚಿತ್ರೀಕರಣ ಮುಕ್ತಾಯ

- Advertisement -

ನಟ ರಿಷಬ್‌ ಶೆಟ್ಟಿ ಆರಂಭ ದಿನಗಳಿಂದಲೂ ಸಿನಿರಂಗ ಎಲ್ಲಾ ಚಟುವಟಿಕೆಗಳಲ್ಲಿಯೂ ತಮ್ಮನ್ನು ತಾವು (Laughing Buddha Movie) ತೊಡಗಿಸಿಕೊಂಡಿದ್ದಾರೆ. ರಿಷಬ್‌ ಶೆಟ್ಟಿ ಅವರು ನಟನೆ, ನಿರ್ದೇಶನ ಹಾಗೂ ನಿರ್ಮಾಣ ಕೆಲಸದಲ್ಲೂ ತೊಡಗಿಸಿಕೊಂಡಿರುವುದು ಗೊತ್ತೆ ಇದೆ. ನಟ ರಿಷಬ್‌ ಶೆಟ್ಟಿ ವಿಭಿನ್ನ ಸಿನಿಮಾಗಳನ್ನು ನಿರ್ಮಾಣ ಮಾಡುವ ಮೂಲಕ ಹೊಸ ಆಲೋಚನೆಗಳಿಗೆ ಅವಕಾಶಗಳನ್ನು ನೀಡಿದ್ದಾರೆ. ಸದ್ಯ ನಟ ರಿಷಬ್‌ ಶೆಟ್ಟಿ ಅವರ ನಿರ್ಮಾಣದ ಲಾಫಿಂಗ ಬುದ್ಧ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದೆ. ಹೀಗಾಗಿ ಸಿನಿಪ್ರೇಕ್ಷಕರಿಗೆ ಮತ್ತೊಂದು ಸಿಹಿ ಸುದ್ಧಿ ಸಿಕ್ಕಿದೆ.

ಲಾಫಿಂಗ್‌ ಬುದ್ಧ ಸಿನಿಮಾವನ್ನು ರಿಷಬ್‌ ಶೆಟ್ಟಿ ಫಿಲ್ಮ್ಸ್‌ ಬ್ಯಾನರ್‌ನಲ್ಲೇ ನಿರ್ಮಾಣ ಮಾಡಿದ್ದು, ಶೂಟಿಂಗ್‌ ಮುಕ್ತಾಯಗೊಂಡಿದೆ. ಈ ಸಿನಿಮಾದ ಚಿತ್ರೀಕರಣವನ್ನು ಭದ್ರಾವತಿ, ಕಾರ್ಗಲ್‌ ಹಾಗೂ ಬೆಂಗಳೂರಿನಲ್ಲಿ ಮಾಡಲಾಗಿದೆ. ಭದ್ರಾವತಿಯ ಚಂಡಿಕಾ ದುರ್ಗ ದೇವಸ್ಥಾನದಲ್ಲಿ ಶುರುವಾಗಿದ್ದು, ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಶೂಟಿಂಗ್‌ ಮುಕ್ತಾಯಗೊಂಡಿದೆ. ಸದ್ಯ ಚಿತ್ರೀಕರಣ ಮುಗಿಸಿದ ಬಳಿಕವೇ ಫೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿ ಸಿನಿತಂಡ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ : Spy Movie Review : ನಟ ನಿಖಿಲ್‌ ಸಿದ್ಧಾರ್ಥ್‌ ಅಭಿನಯದ ಸ್ಪೈ ಸಿನಿಮಾ ನೋಡಿದ ಫ್ಯಾನ್ಸ್‌ ರಿಯಾಕ್ಷನ್‌ ಹೇಗಿದೆ ?

ಇದನ್ನೂ ಓದಿ : Actor Diganth : ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿತಂಡಕ್ಕೆ ಸಾಥ್‌ ನೀಡಿದ ದೂದ್‌ ಪೇಡಾ ನಟ ದಿಗಂತ್

ನಟ ಪ್ರಮೋದ್‌ ಶೆಟ್ಟಿ ಹಾಗೂ ತೇಜು ಬೆಳವಾಡಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಪೂರ್ಣ ಪ್ರಮಾಣದ ಹಾಸ್ಯಮಯವಾಗಿದ್ದು, ಪ್ರೇಕ್ಷಕರನ್ನು ಗಮನ ಸೆಳೆಯುವಲ್ಲಿ ಯಶಸ್ವಿಯಾಗಲಿದೆ ಎಂದು ಸಿನಿತಂಡ ಹೇಳಿದೆ. ಈ ಸಿನಿಮಾವನ್ನು ಎಂ. ಭರತ್‌ ರಾಜ್‌ ನಿರ್ದೇಶಿಸಿದ್ದಾರೆ. ಲಾಫಿಂಗ್‌ ಬುದ್ಧ ಸಿನಿಮಾಕ್ಕೆ ವಿಷ್ಣು ವಿಜಯ್‌ ಟ್ಯೂನ್‌ ಹಾಕುತ್ತಿದ್ದು, ಚಂದ್ರಶೇಖರ್‌ ಕ್ಯಾಮರಾ ಹಾಗೂ ಕೆ.ಎಂ.ಪ್ರಕಾಶ್‌ ಎಡಿಟಿಂಗ್‌ ಮಾಡುತ್ತಿದ್ದಾರೆ.

Laughing Buddha Movie : Laughing Buddha movie produced by actor Rishabh Shetty has been completed

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular