ಭಾನುವಾರ, ಜೂನ್ 15, 2025
HomeCinemaLock Upp Kangana Ranaut : ಕಂಗನಾ ರಣಾವತ್‌ಗೆ ಮುಗಿಯದ ಸಂಕಷ್ಟ: ಲಾಕ್ ಅಪ್ ಶೋ...

Lock Upp Kangana Ranaut : ಕಂಗನಾ ರಣಾವತ್‌ಗೆ ಮುಗಿಯದ ಸಂಕಷ್ಟ: ಲಾಕ್ ಅಪ್ ಶೋ ವಿರುದ್ಧ ತಡೆಯಾಜ್ಞೆ

- Advertisement -

ಇದೇ ಮೊದಲ ಭಾರಿಗೆ ರಿಯಾಲಿಟಿ ಶೋವೊಂದನ್ನು ನಿರೂಪಣೆ ಮಾಡ್ತಿರೋ ಬಾಲಿವುಡ್ ಫೈರ್ ಬ್ರ್ಯಾಂಡ್ ಕಂಗನಾ ರನಾವುತ್ ಗೆ ಶೋ ( Lock Upp Kangana Ranaut) ಆರಂಭವಾಗೋ ಹೊತ್ತಿ ನಲ್ಲೇ ಶಾಕ್ ವೊಂದು ಎದುರಾಗಿದೆ. ಲಾಕ್ ಅಪ್ ಎಂಬ ಹೆಸರಿನ ಈ ಶೋ ಫೆ.27 ರಂದು ಆರಂಭವಾಗಬೇಕಿತ್ತು.ಆದರೆ ಈಗ ಹೈದ್ರಾಬಾದ್ ಮೂಲದ ಉದ್ಯಮಿಯೊಬ್ಬರು ಈ ಶೋದ ವಿರುದ್ಧ ಕಾಪಿರೈಟ್ ಪ್ರಕರಣವನ್ನು ದಾಖಲಿಸಿದ್ದಾರೆ.

Lock Upp Kangana Ranaut

ಬಾಲಿವುಡ್ ನಿರ್ದೇಶಕಿ ಏಕ್ತಾ ಕಪೂರ್ ನಿರ್ದೇಶನದಲ್ಲಿ ಮೂಡಿಬರ್ತಿರೋ ಲಾಕ್ ಅಪ್ ಶೋವನ್ನು(Lock Upp) ತಲೈವಿ ಖ್ಯಾತಿಯ ಕಂಗನಾ ರನಾವುತ್ ಹೋಸ್ಟ್ ಮಾಡ್ತಿದ್ದಾರೆ. ಆದರೆ ಈ ಶೋದ ವಿರುದ್ಧ ಹೈದ್ರಾಬಾದ್ ಮೂಲದ ಉದ್ಯಮಿ ಸನೋಬರ್ ಬೇಗ್ ಕಾಪಿರೈಟ್ ಪ್ರಕರಣ ದಾಖಲಿಸಿದ್ದಾರೆ. ಈ ದೂರಿನಲ್ಲಿ ಸನೋಬರ್ ಬೇಗ್, ಲಾಕ್ ಅಪ್ ಶೋ ನನ್ನ ಪರಿಕಲ್ಪನೆ. ಈ ಹಿಂದೆ ಖಾಸಗಿ ವಾಹಿನಿಯೊಂದರ ಜೊತೆಗೆ ನಾನು ಈ ಐಡಿಯಾವನ್ನು ಹಂಚಿಕೊಂಡಿದ್ದೆ. ಆದರೆ ಆಗ ಐಡಿಯಾವನ್ನು ಕೇಳಿಸಿಕೊಂಡವರು ನನಗೆ ಅನ್ಯಾಯ ಮಾಡಿ ನನ್ನ ಪರಿಕಲ್ಪನೆ ಕದ್ದಿದ್ದಾರೆ ಎಂದು ಆರೋಪಿಸಿ ಹೈದ್ರಾಬಾದ್ ನ ಸಿಟಿಸಿವಿಲ್‌ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.

Lock Upp Kangana Ranaut

ಈ ದೂರನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಿರುವ ನ್ಯಾಯಾಲಯ, ಲಾಕ್ ಅಪ್‌ ಕಾರ್ಯಕ್ರಮವನ್ನು ಯಾವುದೇ ಫ್ಲ್ಯಾಟ್ ಫಾರ್ಮ್ ನಲ್ಲೂ ಪ್ರದರ್ಶಿಸಬಾರದೆಂದು ಲಾಕ್ ಅಪ್ ತಯಾರಕರಿಗೆ ನೊಟೀಸ್ ನೀಡಿದೆ . ಇದರಿಂದ ಕಂಗನಾ ಮೊದಲ ಶೋಗೆ ವಿಘ್ನ ಬಂದಂತಾಗಿದೆ. ಆಭಿಷೇಕ್ ರೇ ಎಂಬುವವರೊಂದಿಗೆ ತನ್ನ ಐಡಿಯಾವನ್ನು ಶೇರ್ ಮಾಡಿದ್ದಾಗಿ ದೂರುದಾರರು ಆರೋಪಿಸಿದ್ದಾರೆ.ಮಾತ್ರವಲ್ಲ 2018 ರಲ್ಲೇ ಈ ಬಗ್ಗೆ ನಾನು ನೋಂದಾಯಿಸಿಕೊಂಡಿದ್ದೇನೆ. ಆಗಲೇ ಓಟಿಟಯೊಂದರ ಜೊತೆ ಕಾನ್ಸೆಪ್ಟ್ ಬಗ್ಗೆ ಚರ್ಚೆ ನಡೆಸಿದ್ದೆ ಎಂದು ದೂರುದಾರರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಅಲ್ಲದೇ ಅಭಿಷೇಕ್ ಅವರೊಂದಿಗೆ ನಾನು ಈ ಕಾನ್ಸೆಪ್ಟ್ ನ ಶೋ ಬಗ್ಗೆ ಸಾಕಷ್ಟು ಸಭೆಗಳನ್ನು ನಡೆಸಿದ್ದೇನೆ. ಆದರೆ ಆಮೇಲೆ ಅವರು ಕೈ ಕೊಟ್ಟು ಬೇರೆ ವಾಹಿನಿಯಲ್ಲಿ ಈ ಶೋದ ಪ್ರೋಮೋ ನೋಡಿ ಶಾಕ್ ಗೆ ಒಳಗಾದೇ ಎಂದು ದೂರುದಾರ ಸನೋಬರ್ ಆರೋಪಿಸಿದ್ದಾರೆ. ಅಲ್ಲದೇ ನನ್ನದಾಗಿರೋ ಈ ಕಾನ್ಸೆಪ್ಟ್ ಗಾಗಿ ನಾನು ಸುಪ್ರೀಂ ಕೋರ್ಟ್ ವರೆಗೂ ಹೋರಾಡಲು ರೆಡಿ ಎಂದು ಹೇಳಿಕೊಂಡಿದ್ದಾರೆ. ಮ್ಯಾಕ್ಸ್ ಪ್ಲೇಯರ್ ನಲ್ಲಿ ಲಾಕ್ ಅಪ್ ಶೋ ಪ್ರಸಾರವಾಗಬೇಕಿದ್ದು, ಇದರಲ್ಲಿ ಸೆಲೆಬ್ರೆಟಿಗಳನ್ನು ಜೈಲ್ ನಲ್ಲಿಡಲಾಗುತ್ತದೆ‌. ಅಲ್ಲದೇ ಅವರು ಎಲಿಮಿನೇಶನ್ ನಿಂದ ತಪ್ಪಿಸಿಕೊಳ್ಳಲು ತಮ್ಮ ಒಂದು ಸಿಕ್ರೆಟ್ ನ್ನು ರಿವೀಲ್ ಮಾಡಬೇಕು ಎಂಬುದು ಶೋದ ಕಾನ್ಸೆಪ್ಟ್.

ಇದನ್ನೂ ಓದಿ : ಜೇಮ್ಸ್ ಫ್ರೀ ರಿಲೀಸ್ ಗೆ ಬಿಗ್ ಇವೆಂಟ್ : ಕಾರ್ಯಕ್ರಮಕ್ಕೆ ಬರ್ತಾರೆ ಚಿರಂಜೀವಿ, ಜ್ಯೂ ಎನ್.ಟಿ.ಆರ್

ಇದನ್ನೂ ಓದಿ : ಮಾಲ್ಡೀವ್ಸ್ ಅಮೈರಾ ಮಾದಕಲೋಕ : ಬಿಕನಿಯಲ್ಲಿ ಮತ್ತೇರಿಸಿದ ಪ್ರಸ್ತಾನಂ ಚೆಲುವೆ

( Lock Upp Kangana Ranaut Ekta Kapoor reality show in deep Leagal trouble)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular