ಅಪ್ಪಟ ಪ್ರೇಮಕತೆ ಲವ್ ಮಾಕ್ಟೇಲ್ ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡುವಷ್ಟು ಯಶಸ್ಸು ಪಡೆದಿತ್ತು. ಬಾಕ್ಸಾಫೀಸ್ ನಲ್ಲೂ ಗೆದ್ದಿದ್ದ ಸಿನಿಮಾ ನಟ ಡಾರ್ಲಿಂಗ್ ಕೃಷ್ಣಾ ಹಾಗೂ ಮಿಲನಾ ನಾಗರಾಜ್ ಗೆ ಪ್ರಸಿದ್ಧಿ ತಂದಕೊಟ್ಟಿತ್ತು. ಇದೇ ಗೆಲುವಿನ ಖುಷಿಯಲ್ಲಿ ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್- 2 (love mocktail 2) ತೆರೆಗೆ ತಂದಿದ್ದಾರೆ. ಅಷ್ಟೇ ಅಲ್ಲ ಸಿನಿಮಾ ಇನ್ನಷ್ಟು ಯಶಸ್ಸು ಪಡೆಯುವಂತೆ ಮತ್ತಷ್ಟು ಶ್ರಮ ಹಾಕಿದ್ದಾರೆ. ಈಗ ಡಾರ್ಲಿಂಗ್ ಕೃಷ್ಣ ಶ್ರಮ ಫಲವಾಗಿ ಬದಲಾಗಿದ್ದು ಥಿಯೇಟರ್ ನಲ್ಲಿ ಮನಗೆದ್ದ ಸಿನಿಮಾ ಈಗ ಓಟಿಟಿಯಲ್ಲೂ ಮೊದಲ ಸ್ಥಾನ ಕಾಯ್ದುಕೊಂಡಿದೆ.
ಲವ್ ಮಾಕ್ಟೆಲ್ ಸಿನಿಮಾದಲ್ಲಿ ನಿಧಿಮಾ(ಮಿಲನಾ ನಾಗರಾಜ್) ಹಾಗೂ ಆದಿ ( ಡಾರ್ಲಿಂಗ್ ಕೃಷ್ಣ) ಇಬ್ಬರಿಗೂ ಲವ್ ಆಗುತ್ತದೆ. ಆದರೆ ಅವರಿಬ್ಬರೂ ಮದುವೆಯಾಗಿ ಬದುಕು ಕಟ್ಟಿಕೊಳ್ಳುವ ಹೊತ್ತಿನಲ್ಲಿ ಕ್ಯಾನ್ಸರ್ ತಗುಲಿ ನಿಧಿಮಾ ಸಾಯುತ್ತಾಳೆ. ಆ ಬಳಿಕ ಆದಿ ಒಂಟಿಯಾಗುತ್ತಾನೆ. ಹೀಗೆ ನಿಧಿಮಾ ಕಳೆದುಕೊಂಡು ಒಂಟಿಯಾಗಿರೋ ಆದಿಗೆ ಮದುವೆ ಮಾಡಿಸುವ ಸ್ಟೋರಿಯೇ ಲವ್ ಮಾಕ್ಟೆಲ್ -೨ ಸಿನಿಮಾದಲ್ಲಿ ತೆರೆಕಂಡಿದೆ. ಎರಡನೇ ಪಾರ್ಟ್ ಗೆ ಡಾರ್ಲಿಂಗ್ ಕೃಷ್ಣ ಇನ್ನಷ್ಟು ಶ್ರಮಹಾಕಿದ್ದು ಪಂಚಿಂಗ್ ಕಾಮಿಡಿ ಜೊತೆ ಸಿನಿಮಾ ಇನ್ನಷ್ಟು ಸುಂದರವಾಗಿ ಮೂಡಿಬಂದಿದೆ. ಹೀಗಾಗಿ ತೆರೆ ಮೇಲೂ ಗ್ರ್ಯಾಂಡ್ ಒಫನಿಂಗ್ ಪಡೆದುಕೊಂಡಿದ್ದ ಸಿನಿಮಾ ಈಗ ಅಮೇಜಾನ್ ಪ್ರೈಂನಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಓಟಿಟಿಯಲ್ಲೂ ಗೆದ್ದ (Love Mocktail 2) ಲವ್ ಮಾಕ್ಟೆಲ್ -2
ಕೊರೋನಾ ಪ್ರಮಾಣ ತಗ್ಗಿದ್ದರೂ ಜನರು ಇನ್ನು ಮೊದಲಿನಷ್ಟು ಮುಕ್ತವಾಗಿ ಚಿತ್ರಮಂದಿರಕ್ಕೆ ಬರಲು ಸಿದ್ದರಿಲ್ಲ. ಹೀಗಾಗಿ ಓಟಿಟಿ ಕೂಡ ಸಖತ್ ಪ್ರೇಕ್ಷಕರನ್ನು ಗಳಿಸಿಕೊಂಡಿದೆ. ಹೀಗಾಗಿ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿಕೊಂಡಿರೋ ಲವ್ ಮಾಕ್ಟೇಲ್ -2 ಸಿನಿಮಾ ಓಟಿಟಿ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನದಲ್ಲಿದೆ. ಇದು ಸಿನಿಮಾ ನಿರ್ಮಾಪಕಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣಾಗೆ ಖುಷಿ ತಂದಿದೆ. ಈ ಸಿನಿಮಾದಲ್ಲಿ ನಟ ಡಾರ್ಲಿಂಗ್ ಕೃಷ್ಣ ನಟನೆಯ ಜೊತೆಗೆ ನಿರ್ದೇಶನವನ್ನು ಮಾಡಿದ್ದು, ಪ್ರೇಕ್ಷಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎರಡನೇ ಸಿಕ್ವೆನ್ಸ್ ನಲ್ಲೂ ಪ್ರೇಕ್ಷಕರಿಗೆ ನಿಧಿಮಾರನ್ನು ನೋಡುವ ಆಸೆ ಇತ್ತು. ಇದನ್ನು ಅರಿತುಕೊಂಡಂತೆ ಎರಡನೇ ಭಾಗದಲ್ಲೂ ಮೃತ ನಿಧಿಮಾರನ್ನು ಆಗಾಗ ತೆರೆಗೆ ತರಲಾಗಿದೆ. ಒಟ್ಟಿನಲ್ಲಿ ಲವ್ ಮಾಕ್ಟೇಲ್ -2 ಡಾರ್ಲಿಂಗ್ ಕೃಷ್ಣಾ ಹಾಗೂ ಮಿಲನಾ ನಾಗರಾಜ್ ರನ್ನು ಗೆಲ್ಲಿಸಿದೆ.
ಇದನ್ನೂ ಓದಿ : ಶಾಲೆಯಲ್ಲಿ ಪಾಠವಾಗಲಿದೆ ಅಪ್ಪು ಬದುಕು: ಪಠ್ಯಕ್ರಮಕ್ಕೆ ಸೇರ್ಪಡೆಗೊಳಿಸಲು ಅಭಿಮಾನಿಗಳ ಒತ್ತಡ
ಇದನ್ನೂ ಓದಿ : ಮಾರ್ಚ್ 21ಕ್ಕೆ ತೆರೆಗೆ ಅಪ್ಪಳಿಸಲಿದೆ ತೂಫಾನ್ : ಕೆಜಿಎಫ್-2 ಸಾಂಗ್ ರಿಲೀಸ್ ಗೆ ಮುಹೂರ್ತ ಫಿಕ್ಸ್
( Love mocktail 2 first place at OTT Trending)