ಲವ್ ಮಾಕ್ಟೇಲ್ ಸಿನಿಮಾ ಸಿಂಪಲ್ ಆಗಿ ನಿರ್ಮಾಣಗೊಂಡು ಸಿನಿ ರಸಿಕರ ಮನಸ್ಸು ಕದ್ದಿತ್ತು. ಲವ್ ಮಾಕ್ಟೇಲ್ ಸಿನಿಮಾ ಹಿಟ್ ಆದ ನಂತರ ಕೈಗೆತ್ತಿಕೊಂಡ ಸಿನಿಮಾ ಲವ್ ಮಾಕ್ಟೇಲ್ 2 ಸಿನಿಮಾ. ಈ ಸಿನಿಮಾವನ್ನು ಕೃಷ್ಣ ಹಾಗೂ ಮಿಲನಾ ನಾಗರಾಜ್ ನಿರ್ಮಿಸಿದ್ದು, ನಿರ್ದೇಶನದ ಜವಾಬ್ದಾರಿ ಕೃಷ್ಣ ಅವರದ್ದು. ಈಗ ಈ ಚಿತ್ರದ ಶೂಟಿಂಗ್ಗೆ ತೆರೆ ಎಳೆಯಲಾಗಿದೆ.

ಲವ್ ಮಾಕ್ಟೇಲ್ ಚಿತ್ರದ ಯಶಸ್ಸಿನಿಂದಾಗಿ ಈಗ ಎರಡನೇ ಭಾಗದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ವೀಕ್ಷಕರ ನಿರೀಕ್ಷೆಯನ್ನು ಮುಟ್ಟಲು ಚಿತ್ರತಂಡ ಶಕ್ತಿ ಮೀರಿ ಪ್ರಯತ್ನಿಸಿದೆ. ಅದರಲ್ಲೂ ಈ ಕೊರೋನಾ ಆತಂಕದ ನಡುವೆ ಚಿತ್ರ ತಂಡ ಶೂಟಿಂಗ್ ಅನ್ನು ಯಶಸ್ವಿಯಾಗಿ ಮುಗಿಸಿದೆ.

ನಟರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಕೃಷ್ಣ ಈಗ ನಿರ್ದೇಶಕ ಹಾಗೂ ನಟರಾಗಿ ಡಾರ್ಲಿಂಗ್ ಕೃಷ್ಣ ಅವರು ಲವ್ ಮಾಕ್ಟೇಲ್ 2 ಸಿನಿಮಾದ ಚಿತ್ರೀಕರಣ ಮುಗಿಸಿರುವ ಖುಷಿಯಲ್ಲಿದ್ದಾರೆ. ಯಾಕೆಂದರೆ ಈ ಕೋವಿಡ್ ಸಂಕಷ್ಟದಲ್ಲಿ ಸಿನಿಮಾ ಶೂಟಿಂಗ್ ಮುಗಿಸುವುದು ಸುಲಭದ ಮಾತಲ್ಲ.

ಲವ್ ಮಾಕ್ಟೇಲ್ 2 ಸಿನಿಮಾದ ನಿರ್ದೇಶನ ಹೇಳುವಷ್ಟು ಸುಲಭವಾಗಿರಲಿಲ್ಲವಂತೆ. ಈ ಸಿನಿಮಾ ಶೂಟಿಂಗ್ ಟೈಮ್ ಅಲ್ಲಿ ಸಾಕಷ್ಟು ಸಂಕಷ್ಟಗಳು, ತೋಡಕುಗಳು ಎದುರಾಗಿದ್ದವು. ಆದರೂ ಸಹ ಚಿತ್ರತಂಡ ಈ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ಚಿತ್ರಕರಣವನ್ನು ಸಂಪೂರ್ಣವಾಗಿ ಮುಗಿಸಿದೆ.
ಲವ್ ಮಾಕ್ಟೇಲ್ 2 ಸಿನಿಮಾದ ಚಿತ್ರೀಕರಣ ಮುಗಿಸಿದ ಖುಷಿಯನ್ನು ಕೃಷ್ಣ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದನ್ನ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿ ರಿಲೀಸ್ ಡೇಟ್ ಯಾವಾಗ ಎಂದು ಕೇಳಿದ್ದಾರೆ.
ಇದನ್ನೂ ಓದಿ : ಲವ್ ಮಾಕ್ಟೇಲ್ ಜೋಡಿ ಮನೆಗೆ ಹೊಸ ಅತಿಥಿ….! ಕೃಷ್ಣಾ-ಮಿಲನಾ ಹಂಚಿಕೊಂಡ್ರು ಖುಷಿ ವಿಷಯ…!!