ಸ್ಯಾಂಡಲ್‌ವುಡ್ ಲವ್ಲೀ ಸ್ಟಾರ್ ಪ್ರೇಮ್ ಕುಮಾರ್ (Lovely star Prem’s birthday) ಅವರಿಗೆ ಇಂದು (ಏಪ್ರಿಲ್ 18) 47ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ನಟ ಪ್ರೇಮ್ ಹುಟ್ಟುಹಬ್ಬಕ್ಕೆ ಸ್ಯಾಂಡಲ್‌ವುಡ್ ನಟರು, ನಿರ್ದೇಶಕರು, ಸ್ನೇಹಿತರು ಸೇರಿದಂತೆ ಅನೇಕರು ಶುಭ ಕೋರಿದ್ದಾರೆ.
ನಿರ್ದೇಶಕ ತರುಣ್ ಸುಧೀರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ,”ನನ್ನ ಆತ್ಮೀಯ ಗೆಳೆಯನ ವಿಶೇಷ ದಿನದಂದು ಅವನಿಗೆ ಪ್ರಪಂಚದ ಎಲ್ಲಾ ಸುಖ ಸಿಗಲೆಂದು ಹಾರೈಸುತ್ತೇನೆ… ನನ್ನ ಆತ್ಮೀಯ ಗೆಳೆಯ, ನನ್ನ ವಿಶ್ವಾಸಿ, ಸ್ಟೈಲಿಶ್ ಸ್ಟಾರ್ ಪ್ರೇಮ್ ಮಗಾ ನಿಮಗೆ ಅತಿರಂಜಿತ ಜನ್ಮದಿನ ಮತ್ತು ಜೀವನವನ್ನು ಬಯಸುತ್ತೇನೆ” ಎಂದು ಗೆಳಯನಿಗೆ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ.
ನಟ ಶರಣ್ ಕೂಡ ಟ್ವೀಟ್‌ನಲ್ಲಿ, ” ನನ್ನ ಆಪ್ತ, ಜಿಗರಿ, ಕುಟುಂಬದ ಸದಸ್ಯನಾದ ಪ್ರೇಮ್ ಅವರಿಗೆ ಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು ನನ್ನ ಆತ್ಮೀಯ ಸ್ನೇಹಿತ, ನನ್ನ ಸಹೋದರನಿಗೆ ಮಾತ್ರ ಈ ವಿಶ್ವವು ನೀಡಬಹುದಾದ ಅತ್ಯುತ್ತಮವಾದದ್ದನ್ನು ಹಾರೈಸುತ್ತೇನೆ… ಜನ್ಮದಿನದ ಶುಭಾಶಯಗಳು ಸ್ಟೈಲಿಶ್ ಸ್ಟಾರ್ ಪ್ರೇಮ್ ” ಎಂದು ಬರ್ತಡೆಗೆ ಗೆಳೆಯ ಪೋಟೋ ಹಂಚಿಕೊಳ್ಳುವ ಮೂಲಕ ಶುಭ ಹಾರೈಸಿದ್ದಾರೆ.
ನನ್ನ ಆತ್ಮೀಯ ಗೆಳೆಯನ ವಿಶೇಷ ದಿನದಂದು ಅವನಿಗೆ ಪ್ರಪಂಚದ ಎಲ್ಲಾ ಸುಖ ಸಿಗಲೆಂದು ಹಾರೈಸುತ್ತೇನೆ…
— Tharun Sudhir (@TharunSudhir) April 18, 2023
My best buddy, my confidant , @StylishstarPrem
Maga wishing you an extravagant birthday and life 🤗♥️♥️#HappyBirthdayLovelyStarPrem pic.twitter.com/tc1E5ggjoQ
ನಟ ಪ್ರೇಮ್ ಕುಮಾರ್ ಕನ್ನಡ ಸಿನಿರಂಗದಲ್ಲಿ ಪ್ರಮುಖ ನಟರಲ್ಲಿ ಒಬ್ಬರಾಗಿದ್ದಾರೆ. ಇವರು ಸ್ಯಾಂಡಲ್‌ವುಡ್‌ನಲ್ಲಿ ನೆನಪಿರಲಿ ಪ್ರೇಮ್ , ಲವ್ಲಿ ಸ್ಟಾರ್ ಪ್ರೇಮ್ ಎಂದು ಪ್ರಸಿದ್ದಿಯಾಗಿದ್ದಾರೆ. ಇವರು 2004ರಲ್ಲಿ ಪ್ರಾಣ ಸಿನಿಮಾದ ಮೂಲಕ ಕನ್ನಡ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಕನ್ನಡದ ಸ್ಫುರದ್ರೂಪಿ ನಟರಲ್ಲಿ ಪ್ರೇಮ್ ಕೂಡ ಒಬ್ಬರು. ಎಷ್ಟೇ ವರ್ಷ ಕಳೆದರೂ ಇನ್ನು ಚಿರು ಯುವಕನಂತೆ ಕಾಣಿಸುತ್ತಾರೆ. ಹೀಗಾಗಿ ಇವರ ಹುಟ್ಟಹಬ್ಬಕ್ಕೆ ಸಿನಿರಂಗದ ಗಣ್ಯರು, ಅಭಿಮಾನಿಗಳು ಹ್ಯಾಪಿ ಬರ್ತಡೆ ಪ್ರೇಮ್ ಸರ್ ಲವ್ಲೀಯಾಗಿರಿ ಎಂದು ಫ್ಯಾನ್ಸ್ ವಿಶ್ ಮಾಡಿದ್ದಾರೆ.
ನನ್ನ ಆಪ್ತ, ಜಿಗರಿ, ಕುಟುಂಬದ ಒಂದು ಸದಸ್ಯನಾದ ಪ್ರೇಮ್ ಅವರಿಗೆ ಹುಟ್ಟು ಹಬ್ಬದ ಪ್ರೀತಿಯ ಶುಭಾಶಯಗಳು ❤️
— Sharaan (@realSharaan) April 18, 2023
Wishing my closest friend, my brother only the best this universe can offer… Happiest Birthday @StylishstarPrem 💐 pic.twitter.com/cc82F4wFPr
ಇನ್ನು ನಟ ಪ್ರೇಮ್ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಜನಮನ್ನಣೆ ಗಳಿಸಿದ್ದಾರೆ. ನಟ ಪ್ರೇಮ್ ಪ್ರಾಣ, ನೆನಪಿರಲಿ, ಜೊತೆ ಜೊತೆಯಲಿ, ಪಲ್ಲಕಗಕಿ, ಗುಣವಂತ, ಹೊಂಗನಸು, ಗೌತಮ್, ಸವಿ ಸವಿ ನೆನವು, ಜೊತೆಗಾರ, ಚೆಲುವೆಯೆ ನಿನ್ನ ನೋಡಲು, ಎರಡನೇ ಮದುವೆ, ಐ ಆಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ, ಚೌಕ, ದಲಪತಿ, ಲೈಪ್ ಜೊತೆ ಒಂದು ಸೆಲ್ಫಿ ಹೀಗೆ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರ ಅಭಿನಯದ ಹಾಡುಗಳನ್ನು ಫ್ಯಾನ್ಸ್ ಯಾವಗಲೂ ಗುನುಗುತ್ತಿರುತ್ತಾರೆ.
ಇದನ್ನೂ ಓದಿ : ರಾಘವೇಂದ್ರ ಸ್ಟೋರ್ಸ್ ಟ್ರೈಲರ್ ರಿಲೀಸ್ : ಮೆಚ್ಚುಗೆ ವ್ಯಕ್ತಪಡಿಸಿದ ಕಾಂತಾರ ನಟ ರಿಷಬ್ ಶೆಟ್ಟಿ
ಇದನ್ನೂ ಓದಿ : ರಾಘವೇಂದ್ರ ಸ್ಟೋರ್ಸ್ ಟ್ರೈಲರ್ ರಿಲೀಸ್ ಮಾಡಲಿದ್ದಾರೆ ಕಾಂತಾರ ರಿಷಬ್ ಶೆಟ್ಟಿ
ಇನ್ನು ಇವರು ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿದ್ದು, ಆಗಾಗ ಹೆಂಡತಿ ಹಾಗೂ ಮಕ್ಕಳಿಬ್ಬರೊಂದಿಗೆ ಎಂಜಾಯ್ ಮಾಡುತ್ತಿರುತ್ತಾರೆ. ಇವರು 2000ರಲ್ಲಿ ಪ್ರೀತಿಸಿ ಮದುವೆ ಆಗಿದ್ದು, ಈ ದಂಪತಿಗಳಿಗೆ ಅಮೃತಾ ಹಾಗೂ ಏಕಾಂತ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಈಗಾಗಲೇ ಮಕ್ಕಳಿಬ್ಬರು ಸಿನಿರಂಗವನ್ನು ಎಂಟ್ರಿ ಕೊಟ್ಟದ್ದಾರೆ. ಮಗ ಏಕಾಂತ್ ಮಾಮು ಟೀ ಅಂಗಡಿ, ರಾಮರಾಜ್ಯ -ಗಾಂಧಿ ತಾತನ ಕನಸು, ಸಾಹೇಬ, ಗುರುಶಿಷ್ಯರು ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ಅಮೃತಾ ಟಗರು ಪಲ್ಯ ಸಿನಿಮಾದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.
Lovely star Prem’s birthday: Sandalwood friends wished lovely star Prem on his birthday.