ಇತ್ತೀಚಿಗೆ ಸ್ಯಾಂಡಲ್ ವುಡ್ ನಟಿಮಣಿಯರು ಬೆಳ್ಳಿತೆರೆ ಯಲ್ಲಿ ಮಾತ್ರವಲ್ಲದೇ ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಗುಳಿಕೆನ್ನೆಯ ಬೆಡಗಿ ರಚಿತಾರಾಮ್ ಕಿರುತೆರೆಯ ಕಾಮಿಡಿ ಶೋಗೆ ಜಡ್ಜ್ ಆಗಿ ಬರ್ತಿರೋದು ಸುದ್ದಿ ಮಾಡಿತ್ತು. ಈಗ ಈ ಸಾಲಿಗೆ ಲೂಸಿಯಾ ಖ್ಯಾತಿಯ ನಟಿ ಶ್ರುತಿ ಹರಿಹರನ್ Sruthi Hariharan) ಹೊಸ ಸೇರ್ಪಡೆ.
ಕನ್ನಡದ ಕಿರುತೆರೆಯಿಂದ ಹಿರಿ ತೆರೆಗೆ ಬಂದ ನಟಿ ಶ್ರುತಿ ಹರಿಹರನ್ ಬಳಿಕ ಹಿಂತಿರುಗಿ ನೋಡ ದಷ್ಟು ಬ್ಯುಸಿಯಾದರು. ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದ ನಟಿ ಮೀಟೂ ಪ್ರಕರಣದ ಬಳಿಕ ಅಂದಾಜು ಎರಡು ವರ್ಷಗಳ ಕಾಲ ಚಂದನವನದಿಂದ ಅಂತರ ಕಾಯ್ದುಕೊಂಡಿದ್ದರು. ಈಗ ಮತ್ತೆ ನಟನೆಗೆ ಮರಳಿದ್ದಾರೆ. ಆಕ್ಟಿಂಗ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರೋ ಶ್ರುತಿಗೆ ಅವಕಾಶಗಳ ಸುರಿಮಳೆಯೇ ಎದುರಾಗಿದೆ. ಇತ್ತೀಚಿಗಷ್ಟೇ ಸಾಲುಗಾರ ಸಿನಿಮಾ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ.

ಇದಲ್ಲದೇ ಈಗಾಗಲೇ,ಪರಮ್ ವಾ ಸ್ಪಾಟ್ ಲೈನ್ ಬ್ಯಾನರ್ ಅಡಿಯಲ್ಲಿ ಮೂಡಿ ಬರ್ತಿರೋ ಅರ್ಜುನ್ ಲೂವಿಸ್ ನಿರ್ದೇಶನದ ಸ್ಟ್ರಾಬೆರಿ ಸಿನಿಮಾಕ್ಕೂ ಸೈ ಎಂದಿದ್ದಾರೆ. ಇನ್ನು ಟಗರು ಖ್ಯಾತಿಯ ಡಾಲಿ ಧನಂಜಯ್ ನಟಿಸಿ ನಿರ್ಮಿಸುತ್ತಿರುವ ಹೆಡ್ ಬುಷ್ ಸಿನಿಮಾದಲ್ಲೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದೆಲ್ಲದರ ಮಧ್ಯೆ ನಟಿ ಶ್ರುತಿ ಹರಿಹರನ್ ಇನ್ಮುಂದೆ ಕನ್ನಡ ಕಿರುತೆರೆಯ ಮೂಲಕ ಕರುನಾಡಿನ ಮನೆ ಮನೆಗೆ ಬರಲಿದ್ದಾರೆ.

ಈಗಾಗಲೇ ಹಲವಾರು ಭಾರಿ ಕಿರುತೆರೆಗೆ ಬಂದಿರೋ ಶ್ರುತಿ ಡ್ಯಾನ್ಸ್ ಶೋವೊಂದರಲ್ಲಿ ನಿರ್ಣಾಯಕಿಯಾಗಿದ್ದರು.ಮೂಲತಃ ಡ್ಯಾನ್ಸ್ ಆರ್ಟಿಸ್ಟ್ ಆಗಿರೋ ಶ್ರುತಿ ಇದೇ ಹಿನ್ನೆಲೆಯಿಂದಲೇ ಲೂಸಿಯಾ ಸಿನಿಮಾಕ್ಕೆ ಆಯ್ಕೆಯಾಗಿದ್ದರು. ಈಗ ಮೊದಲ ಬಾರಿಗೆ ಕಾಮಿಡಿ ಶೋವೊಂದಕ್ಕೆ ನಿರ್ಣಾಯಕಿಯಾಗಿ ಸೆಲೆಕ್ಟ್ ಆಗಿದ್ದು ಈಗಾಗಲೇ ಪ್ರೋಮೋ ಕೂಡ ತೆರೆಕಂಡಿದೆ.

ಶ್ರುತಿ ಹರಿಹರನ್ ಹಿರಿಯ ಕಾಮಿಡಿ ನಟ ಮುಖ್ಯಮಂತ್ರಿ ಚಂದ್ರು ಹಾಗೂ ಕುರಿ ಪ್ರತಾಪ್ ಜೊತೆ ಕಾಮಿಡಿ ಶೋದ ಮೌಲ್ಯ ಮಾಪನ ಮಾಡಲಿದ್ದಾರೆ. ವಿಶೇಷವೆಂದರೇ ಈ ಕಾಮಿಡಿ ಶೋವನ್ನು ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದ ಹಾಗೂ ಹಾಸ್ಯನಟ ಶಿವರಾಜ್ ಕೆ.ಆರ್.ಪೇಟೆ ನಿರೂಪಣೆ ಮಾಡಲಿದ್ದಾರೆ. ಸದ್ಯದಲ್ಲೇ ಶೋ ಆರಂಭವಾಗಲಿದ್ದು ಶ್ರುತಿ ಅವರನ್ನು ತೆರೆ ನೋಡಲು ಅಭಿಮಾನಿಗಳು ಕಾತುರರಾಗಿ ಕಾಯ್ತಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ನಟಿಶ್ರುತಿ ಹರಿಹರನ್ ಹಿರಿಯ ನಾಯಕ ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ್ದರು. ಇತ್ತೀಚಿಗಷ್ಟೇ ಈ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ.
ಇದನ್ನೂ ಓದಿ : ಓಟಿಟಿ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನಕ್ಕೇರಿದ ಲವ್ ಮಾಕ್ಟೆಲ್ -2
ಇದನ್ನೂ ಓದಿ : ದಿ ಕಾಶ್ಮೀರಿ ಫೈಲ್ಸ್ ಕನ್ನಡಕ್ಕೆ : ಹಿಂದುತ್ವವೇ ಬಿಜೆಪಿ ಅಜೆಂಡಾ ಎಂದ ಕಾಂಗ್ರೆಸ್
(Lucia Actress Sruthi Hariharan entry to television show)