ಸಾಮಾನ್ಯವಾಗಿ ಮಾಡೆಲ್ ಅಂದ್ರೇ ತೆಳ್ಳಗೆ ಬೆಳ್ಳಗೆ ಇರಬೇಕು ಅನ್ನೋ ಮಾತಿದೆ. ಆದರೆ ಈಕೆ ಮಾತ್ರ ಫ್ರೀ ಸೈಜ್ ಮಾಡೆಲ್ ಅಂತಾನೇ ಫೇಮಸ್. ಹಾಟ್ ಹಾಟ್ ಪೋಟೋಗಳ ಮೂಲಕವೇ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ ಹಸಿ ಕ್ವಾಜಿ ನೋಡಿದ ಜನರು ಮಾತ್ರ ವಾವ್ ಹಸೀನಾ ಅಂತಿದ್ದಾರೆ. ಹಸೀ ಕ್ವಾಜಿ (Haseequazi Photoshoot) ಮುಸ್ಲಿಂ ಎನ್ನಿಸುವ ಈ ಹೆಸರಿನ ಈಕೆ ಮೂಲತಃ ಹಿಂದು. ಡಬ್ಬಿಂಗ್ ಆರ್ಟಿಸ್ಟ್ ಆಗಿರೋ ಹಸೀ ಬಳಿಕ ಮಾಡೆಲಿಂಗ್ ಗೆ ಎಂಟ್ರಿಕೊಟ್ಟವರು.

ಡಬ್ಬಿಂಗ್ ಗೆ ಹೆಸರಾದ ಹಸೀಗೆ ಬಳಿಕ ಸ್ನೇಹಿತರು ಮಾಡೆಲಿಂಗ್ ನಲ್ಲಿ ತೊಡಗಿಕೊಳ್ಳಲು ಸಲಹೆ ನೀಡಿದ್ದರಂತೆ. ಇದಕ್ಕೆ ಕಾರಣ ಮಾಡೆಲಿಂಗ್ ನಲ್ಲಿ ಈಕೆಗಿದ್ದ ಆಸಕ್ತಿ. ತೆಳ್ಳಗೆ ಬೆಳ್ಳಗೆ ಝಿರೋ ಸೈಜ್ ಇದ್ದೋರಿಗೆ ಮಾತ್ರ ಫ್ಯಾಶನ್ ಲೋಕ ಅಂತಿರೋ ಅಭಿಪ್ರಾಯವನ್ನು ಬದಲಾಯಿಸಿದ ಹಸೀ, ತಮ್ಮ ಫ್ರೀ ಸೈಜ್ ಬಾಡಿ ಜೊತೆಗೆ ಹಾಟ್ ಹಾಟ್ ಪೋಟೋಶೂಟ್ ನಡೆಸಿ ಅಭಿಮಾನಿಗಳ ಮನಗೆದ್ದಿದ್ದಾರೆ.

ಕಾಡು,ಮೇಡು,ನದಿ,ನೀರು,ರೆಸಾರ್ಟ್ ಹೀಗೆ ನಾನಾ ಕಡೆಗಳಲ್ಲಿ ಟ್ರೆಡಿಶನಲ್ ಹಾಗೂ ಮಾಡರ್ನ್ ಡ್ರೆಸ್ ಗಳಲ್ಲಿ ಹಸೀ ಪೋಟೋಗಳಿಗೆ ಪೋಸ್ ನೀಡಿದ್ದಾರೆ. ಮೂಲತಃ ಕೇರಳದವರಾದ ಹಸೀ ಪೋಟೋಶೂಟ್ ಗಳಲ್ಲಿ ಕೇರಳದ ಸಾಂಪ್ರದಾಯಿಕ ಶೈಲಿಯ ಉಡುಪುಗಳ ಪ್ರಭಾವವೂ ಜೋರಾಗಿದೆ. ಸದ್ಯ 38 ವರ್ಷದ ಹಸೀ ಸಾಹಿತ್ಯದಲ್ಲಿ ಪದವಿ ಪಡೆದಿದ್ದು, ಕೇರಳದ ಡಬ್ಬಿಂಗ್ ಲೋಕದಲ್ಲಿ ಒಳ್ಳೆಯ ಹೆಸರು ಸಂಪಾದಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ಹಸೀ, ಸದಾ ಒಂದಿಲ್ಲೊಂದು ಪೋಟೋಶೂಟ್ ಮೂಲಕವೇ ಸಂಚಲನ ಮೂಡಿಸುತ್ತಾರೆ. ನೆಟ್ಟಿಗರು ಹಸೀಯನ್ನು ಪ್ಲಸ್ ಸೈಜ್ ಮಾಡೆಲ್ ಎಂದೇ ಕರೆಯುತ್ತಾರೆ. ಆದರೂ ಈ ಕಮೆಂಟ್ ಅಥವಾ ನೆಗೆಟಿವ್ ಪ್ರತಿಕ್ರಿಯೆಗಳಿಗೆ ಹಸೀ ತಲೆ ಕೆಡಿಸಿಕೊಳ್ಳದೇ ಅರಾಂ ಆಗಿ ತಮ್ಮ ಮಾಡೆಲಿಂಗ್ ಮುಂದುವರೆಸಿದ್ದಾರೆ.

ಅಂದಾಜು 80 ಕೆಜಿ ತೂಕದ ಹಸೀ ಕೇರಳದಾದ್ಯಂತ ತಮ್ಮ ಬೋಲ್ಡ್ ಪೋಟೋಗಳಿಂದಲೇ ಅಭಿಮಾನಿಗಳ ಎದೆಗೆ ಕಿಚ್ಚು ಹಚ್ಚಿದ್ದಲ್ಲದೇ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಕಾಡುಗಳ ಮಧ್ಯೆ ವನದೇವತೆಯಂತೇ, ನೀರಿಗೆ ಹೊರಟ ನೀರೆಯಂತೇ, ನೀರಿನಲ್ಲಿ ಮಿಂದ ಜಲಕನ್ಯೆಯಂತೇ ಹೀಗೆ ನಾನಾ ರೂಪದಲ್ಲಿ ಮಾದಕ ಮೈಮಾಟ ತೋರುತ್ತಾ ಪೋಸ್ ನೀಡಿದ್ದು ಹಸೀ ಸೋಷಿಯಲ್ ಮೀಡಿಯಾದ ತುಂಬ ಹಾಟ್ ಪೋಟೋಗಳೇ ರಾರಾಜಿಸುತ್ತಿದೆ.






ಇದನ್ನೂ ಓದಿ : ಶಾಕುಂತಲೆಯಾದ್ರು ಸುಕೃತಾ : ಲಕ್ಷಣ ನಟಿಯ ಲವ್ಲೀ ಪೋಟೋಶೂಟ್ ವೈರಲ್
ಇದನ್ನೂ ಓದಿ : 100 ಕೋಟಿ ಗಳಿಸಿದ ಚಿತ್ರಗಳು ಮತ್ತು ಅವುಗಳನ್ನು ನಿರ್ಮಿಸಿದ ಬಜೆಟ್; ಕುತೂಹಲಕರ ಮಾಹಿತಿ ಇಲ್ಲಿದೆ
( Malayalam model Haseequazi photoshoot)