ಸೋಮವಾರ, ಜೂನ್ 16, 2025
HomeCinemaವೀಕೆಂಡ್‌ ವಿಥ್‌ ರಮೇಶ್‌ ಸೀಸನ್‌ 5 : ಈ ವಾರದ ಅತಿಥಿಗಳು ಯಾರಾರು ಗೊತ್ತೆ ?

ವೀಕೆಂಡ್‌ ವಿಥ್‌ ರಮೇಶ್‌ ಸೀಸನ್‌ 5 : ಈ ವಾರದ ಅತಿಥಿಗಳು ಯಾರಾರು ಗೊತ್ತೆ ?

- Advertisement -

ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳಿಗೆ ಒಂದು ತೆರನಾದ ಅಭಿಮಾನಿಗಳು ಇದ್ದರೆ, ಕಿರುತೆರೆಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳಿಗೆ ಬಹಳ ದೊಡ್ಡಮಟ್ಟದ ಅಭಿಮಾನಿಗಳು ಇದ್ದಾರೆ. ಅಷ್ಟೇ ಅಲ್ಲದೇ ರಿಯಾಲಿಟಿ ಶೋಗಳು ಇತಿಹಾಸ ಸೃಷ್ಟಿಸಿದ್ದವರನ್ನು ಪರಿಚಯಿಸುದರೊಂದಿಗೆ, ಅತೀಹೆಚ್ಚು ಜನಮನ್ನಣೆ ಪಡೆಯುತ್ತಿದೆ. ಕಳೆದ ಹಲವು ವರ್ಷಗಳಿಂದ ಪ್ರಸಾರ ವಾಗುತ್ತಿದ್ದ, ವೀಕೆಂಡ್‌ ವಿಥ್‌ ರಮೇಶ್‌ ಕಾರ್ಯಕ್ರಮ ಕರೋನಾದಿಂದ ನಿಲ್ಲಿಸಲಾಗಿತ್ತು. ಸದ್ಯ ಈ ಕಾರ್ಯಕ್ರಮ ಪುನಃ ಪ್ರಾರಂಭವಾಗಿ ಮತ್ತೆ ಕರುನಾಡ ಜನರನ್ನು ಮನರಂಜಿಸುತ್ತಿದೆ. ಇನ್ನು ಈ ವಾರದಲ್ಲಿ ಯಾವ ಅತಿಥಿಗಳು ಸಾಧಕರ ಸೀಟ್‌ನಲ್ಲಿ ಕೂರಲಿದ್ದಾರೆ (Mandya Ramesh – Avinash) ಎನ್ನುವ ಕುರಿತು ಮಾಹಿತಿ ಸಿಕ್ಕಿದೆ.

ಜೀ ಕನ್ನಡ ವಾಹಿನಿ ಅಧಿಕೃತವಾಗಿ ಟ್ವೀಟ್‌ನಲ್ಲಿ, “ರಂಗಭೂಮಿ, ಸಿನಿಮಾ ರಂಗದಲ್ಲಿ ಛಾಪು ಮೂಡಿಸಿರೋ ಅಪರೂಪದ ಕಲಾವಿದರಾದ ಅವಿನಾಶ್, ಮಂಡ್ಯ ರಮೇಶ್ ಈ ವೀಕೆಂಡ್ ಅತಿಥಿಗಳು! ವೀಕೆಂಡ್ ವಿತ್ ರಮೇಶ್-5, ಶನಿ-ಭಾನು ರಾತ್ರಿ 9ಕ್ಕೆ.” ಎಂದು ಇಬ್ಬರು ಅತಿಥಿಗಳ ಪ್ರೋಮೋ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋಗಳಲ್ಲಿ ಬಿಗ್​ ಬಾಸ್​, ರಾಜಾ ರಾಣಿ, ಜೋಡಿ ನಂ.1, ಸೂಪರ್‌ ಕ್ವೀನ್‌, ಇಸ್ಮಾರ್ಟ್ ಜೋಡಿ, ಸರಿಗಮಪ ಹೀಗೆ ಎಲ್ಲಾ ಚಾನೆಲ್‌ಗಳಲ್ಲಿಯೂ ಒಂದಿಲ್ಲೊಂದು ರಿಯಾಲಿಟಿ ಶೋಗಳು ಅತೀ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಇದನ್ನೂ ಓದಿ : ಟಾಲಿವುಡ್ ನಟ ಅಲ್ಲು ರಮೇಶ್ ಹೃದಯಾಘಾತದಿಂದ ನಿಧನ

ಇದನ್ನೂ ಓದಿ : Actress Aarti Arrest : ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಕಿರುತೆರೆ ನಟಿ ಅರೆಸ್ಟ್

ಈಗಾಗಲೇ ಹೊಸ ಸೀಸನ್‌ ಶುರುವಾಗಿದ್ದು, ಆರು ಎಪಿಸೋಡ್‌ಗಳನ್ನು ಮುಗಿಸಿವೆ. ಈ ಸೀಸನ್‌ನಲ್ಲಿ ಮೊದಲ ಗೆಸ್ಟ್‌ ಆಗಿ ಮೋಹಕತಾರೆ, ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಬಂದಿದ್ದಾರೆ. ಇನ್ನೂ ಎರಡನೇ ಗೆಸ್ಟ್‌ ಆಗಿ ಭಾರತದ ಮೈಕಲ್‌ ಜಾಕ್ಸನ್‌ ಎಂದೇ ಪ್ರಖ್ಯಾತಿ ಪಡೆದಿರುವ ಡ್ಯಾನ್ಸರ್‌ ಪ್ರಭುದೇವ್‌ ಬಂದಿದ್ದು, ಮೂರನೇ ವಾರದಲ್ಲಿ ಶನಿವಾರ ಲಕ್ಷಾಂತರ ಹೃದಯಗಳನ್ನು ಗೆದ್ದ ಹಿರಿಯ ನಟ ದತ್ತಣ್ಣ ಗೆಸ್ಟ್‌ ಆಗಿ ಬಂದರೆ, ಭಾನುವಾರ ಲಕ್ಷಾಂತರ ಹೃದಯಗಳಿಗೆ ಮಿಡಿದ ಡಾ.ಸಿ.ಎನ್‌ ಮಂಜುನಾಥ್‌ ಅವರು ಗೆಸ್ಟ್‌ ಆಗಿ ಕರುನಾಡ ಜನರ ಎದುರು ಕಾಣಿಸಿಕೊಂಡಿದ್ದಾರೆ. ಕಳೆದ ವಾರದಲ್ಲಿ ನಟ ರಾಕ್ಷಸ ಡಾಲಿ ಧನಂಜಯ್‌ ಸಾಧಕರ ಸೀಟ್‌ನಲ್ಲಿ ಕುಳಿತುಕೊಂಡಿದ್ದು, ಅವರ ಸಾಧನೆ ಹಾದಿಯಲ್ಲಿ ನಡೆದು ಬಂದ ಕಷ್ಟದ ದಿನಗಳನ್ನು ನೋಡಿದ ಪ್ರೇಕ್ಷಕರು ಮರುಗಿದ್ದಾರೆ.

Mandya Ramesh – Avinash : Weekend With Ramesh Season 5 : Guess Who Are This Week’s Guests?

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular