ಶ್ರೀಲಂಕಾದ ಖ್ಯಾತ ಯುವ ಹಾಡುಗಾರ್ತಿ ಯೊಹಾನಿ ಹಾಡಿದ ಮಣಿಕೆ ಮಗೇ ಹಿತೆ ಹಾಡು ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಕ್ರಿಯೆಟ್ ಮಾಡಿದೆ. ಯೋಹಾನಿ ಮತ್ತು ಸತೀಶನ್ ಹಾಡಿದ ಹಾಡು ಕೋಟ್ಯಾಂತರ ಜನರನ್ನು ಮೋಡಿ ಮಾಡಿದೆ. ಕೇವಲ ನಾಲ್ಕು ತಿಂಗಳ ಅವಧಿಯಲ್ಲಿಯೇ ಈ ಹಾಡು ವಿಶ್ವದಾದ್ಯಂತ ಸದ್ದು ಮಾಡುತ್ತಿದೆ.
ಮಣಿಕೆ ಮಗೇ ಹಿತೆ ಸಾಂಗ್ ಈಗಾಗಲೇ ಬಹುತೇಕ ಭಾಷೆಗಳಿಗೆ ಡಬ್ ಆಗಿದೆ. ಸಿಂಹಳಿ ಭಾಷೆಯಲ್ಲಿರುವ ಹಾಡನ್ನು ಯೋಹಾನಿ ಮತ್ತು ಸತೀಶನ್ ರತ್ನಾಕರ ಹಾಡಿದ್ರೆ ಚಮತ್ ಸಂಗೀತ್ ಸಂಯೋಜಿಸಿದ್ದಾರೆ. ಇದೀಗ ಮಣಿಕೆ ಮಗೇ ಹಿತೆ ಸಾಂಗ್ ಇದೀಗ ಕನ್ನಡ ಅವತರಿಣಿಕೆಯಲ್ಲಿ ಮೂಡಿ ಬಂದಿದೆ.
ಖ್ಯಾತ ಆರ್.ಜೆ.ರಾಪಿಡ್ ರಶ್ಮಿ(RJ Rashmi) ಹಾಗೂ ರೆಮೊ (REMO) ಹಾಡಿಗೆ ಧ್ವನಿ ಗೂಡಿಸಿದ್ರೆ ಪ್ರದೀಪ್ ವರ್ಮಾ ಸಂಗೀತ ನೀಡಿದ್ದಾರೆ. ಮನಸು ಹಾಯಾಗಿದೆ. ದಿನವೂ ನಿನ್ನ ಹೀಗೆ ನೋಡಿ. ಮಾತಾಡಿ ಹೃದಯ ಹಾರಾಡಿದೆ… ಎಂದು ರಶ್ಮಿ ಹಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಮೋಡಿ ಮಾಡುತ್ತಿದೆ.
ಇನ್ನೊಂದೆಡೆಯಲ್ಲಿ ಶ್ರೀಲಂಕಾದ ಸಂಗೀತ ಸಂವೇದನೆ ಯೊಹಾನಿಯವರ ವೈರಲ್ ಹಿಟ್ ಹಾಡು “ಮಣಿಕೆ ಮಗೇ ಹಿತೆ” ಅಜಯ್ ದೇವಗನ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ “ಥ್ಯಾಂಕ್ ಗಾಡ್” ನಲ್ಲಿ ಮೂಡಿಬರಲಿದೆ. ಹಿಂದಿ ಆವೃತ್ತಿಯನ್ನು ತನಿಷ್ಕ್ ಬಾಗ್ಚಿ ಸಂಗೀತ ಸಂಯೋಜಿಸಲಿದ್ದು, ರಶ್ಮಿ ವಿರಾಗ್ ಸಾಹಿತ್ಯ ಬರೆದಿದ್ದಾರೆ. “ಥ್ಯಾಂಕ್ ಗಾಡ್” ಚಿತ್ರವನ್ನು ಇಂದ್ರ ಕುಮಾರ್ ನಿರ್ದೇಶಿಸಿದ್ದಾರೆ ಮತ್ತು ಭೂಷಣ್ ಕುಮಾರ್ ನಿರ್ಮಿಸಿದ್ದಾರೆ.
ಯೋಹಾನಿ ಹಾಡು ಇದೀಗ ಹಿಂದಿ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರೋದು ಅವರಿಗೆ ಸಾಕಷ್ಟು ಖುಷಿಯನ್ನು ನೀಡಿದೆ. ಇನ್ನೊಂದೆಡೆಯಲ್ಲಿ ಯೋಹಾನಿ ಹಾಡಿರುವ ಹಾಡನ್ನು ಈಗಾಗಲೇ 160 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ : ವೈದ್ಯರು ಮತ್ತು ಟೈಲರ್ ನಿಂದ ಕಿರುಕುಳಕ್ಕೆ ಒಳಗಾಗಿದ್ದೆ : ನಟಿ ನೀನಾ ಗುಪ್ತಾ
ಇದನ್ನೂ ಓದಿ : ಫೋರ್ಬ್ಸ್ ಪಟ್ಟಿಯಲ್ಲಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಗೆ ಮೊದಲ ಸ್ಥಾನ
( Manike Mage Hithe Song Kannada Version RJ Rashmi )