ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಡಿಫರೆಂಟ್ ಟೈಟಲ್ ಸಿನಿಮಾಗಳು ಬರುತ್ತಿವೆ. ಈ ವಿಭಿನ್ನ ಶೀರ್ಷಿಕೆಗಳಿಂದಲೇ ಸಿನಿಪ್ರಿಯರನ್ನು ಚಿತ್ರದತ್ತ ಆಕರ್ಷಿಸಿಸುವ ಟ್ರೆಂಡ್ ಶುರುವಾಗಿದೆ. ಈಗ ಅಂಥದೇ ಮತ್ತೊಂದು ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಅದುವೇ (Manku Bhai Foxy Rani) ಮಂಕು ಭಾಯ್ ಫಾಕ್ಸಿ ರಾಣಿ. ಮಂಗಳೂರಿನ ಪ್ರತಿಭಾನ್ವಿತ ಯುವ ಸಿನಿಮೋತ್ಸಾಹಿಗಳ ತಂಡವೇ ಸೇರಿಕೊಂಡು ತಯಾರಿಸಿರುವ ಈ ಚಿತ್ರ ಸೆನ್ಸಾರ್ ಪಾಸಾಗಿ ರಿಲೀಸ್ ಗೆ ಸಜ್ಜಾಗಿದೆ.
The melody king Sonu Nigam's soulful track "Minchanthe Minuguthiro" hits 300K+ views already !!! Have you tuned it yet?
— A2 Music (@A2MusicSouth) September 15, 2022
Check out: https://t.co/dJMAstoDr1
*
*
*#minchantheminuguthiro #a2music #A2musicsouth #kannadasongs #kannadamovies #sonunigam #latestkannadasongs pic.twitter.com/dIbCUnOj5E
(Manku Bhai Foxy Rani)ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ(Roopesh Shetty) ನಾಯಕನಾಗಿ ಬಣ್ಣ ಹಚ್ಚಿದ್ದು, ಇವರಿಗೆ ಜೋಡಿಯಾಗಿ ಬ್ರಹ್ಮಗಂಟು ಸೀರಿಯಲ್ ಕಲಾವಿದೆ ಗೀತಾ ಭಾರತಿ ಭಟ್ ಅಭಿನಯಿಸಿದ್ದಾರೆ. ಖ್ಯಾತ ಕಲಾವಿದ ಪ್ರಕಾಶ್ ತೂಮಿನಾಡ್, ಪಂಚಮಿ ರಾವ್, ಅರ್ಜುನ್ ಕಜೆ ತಾರಾಬಳಗದಲ್ಲಿದ್ದಾರೆ. ತುಳು ಸಿನಿಮಾಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಗಗನ್ ಎಂ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.
ಇದನ್ನೂ ಓದಿ : ನಟ ಡಾಲಿ ಧನಂಜಯ ಅಭಿನಯದ “ಮಾನ್ಸೂನ್ ರಾಗ” ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ
ಇದನ್ನೂ ಓದಿ : “ಕೆಜಿಎಫ್” ನಟ ಯಶ್ ಹೊಸ ಲುಕ್ ವೈರಲ್
ಇದನ್ನೂ ಓದಿ : ಗ್ಲಾಸ್ ಹಿಡಿದು ಹೆಜ್ಜೆ ಹಾಕಿದ ಗಲೀ ಗಲೀ ಹುಡುಗಿ: ಮಾಲ್ಢೀವ್ಸ್ ನಲ್ಲಿ ಮೌನಿ ರಾಯ್ ಹವಾ
ಇದನ್ನೂ ಓದಿ : ”ಕಬ್ಜ” ಬಗ್ಗೆ ಕ್ರೇಜ್ ಹುಟ್ಟಿಸಿದ ಕಿಚ್ಚ ಸುದೀಪ್
ಇದನ್ನೂ ಓದಿ : ಬ್ರಹ್ಮಾಸ್ತ್ರ ಸೂಪರ್ ಸಕ್ಸಸ್ : ರಾಷ್ತ್ರೀಯ ಸಿನಿಮಾ ದಿನ ಮುಂದೂಡಿಕೆ
ಲವ್ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಎಂ.ಕೆ .ಕೆ.ಷಹಜನ್ ಛಾಯಾಗ್ರಹಣ, ವಿನ್ಯಾಸ್ ಮದ್ಯ ಶಮೀರ್ ಮುಡಿಪು ಸಂಗೀತ ಹಾಗೂ ಸುಶಾಂತ್ ಶೆಟ್ಟಿ, ಪ್ರಜ್ವಲ್ ಸುವರ್ಣ ಸಂಕಲನವಿದೆ. ಜೋಶ್ವ ಜೈಶಾನ್ ಕ್ರಾಸ್ತ ನಿರ್ಮಾಣ ಮಾಡಿರುವ ಈ ಚಿತ್ರದ ಫಸ್ಟ್ ಟ್ರ್ಯಾಕ್ ಭಾರೀ ಮೆಚ್ಚುಗೆ ಪಡೆದುಕೊಂಡಿದೆ. ಸೋನು ನಿಗಂ ಕಂಠದಲ್ಲಿ ಮೂಡಿಬಂದಿರುವ ಮಿಂಚಂತೆ ಮಿನುಗುತಿರೊ ಎಂಬ ಹಾಡು ಎ2 ಮ್ಯೂಸಿಕ್ ಯೂಟ್ಯೂಬ್ ನಲ್ಲಿ ಕೇಳುಗರನ್ನು ಮಂತ್ರ ಮುಗ್ದರನ್ನಾಗಿ ಮಾಡುತ್ತಿದೆ.
Sonu Nigam's New kannada song "Minchanthe Minuguthiro" is out now. Listen.https://t.co/hsf5fpwK4O
— We Singing Star (@WeSingingStar) September 1, 2022
Different title ‘Manku Bhai Foxy Rani’ ready for release… Bigg Boss fame Rupesh Shetty’s dream debut movie