ಸ್ಯಾಂಡಲ್‌ವುಡ್ ನಿರ್ದೇಶಕ ಎಪಿ ಅರ್ಜುನ್ ನಿರ್ದೇಶಿಸಿದ್ದ ಅದ್ದೂರಿ ಸಿನಿಮಾದ ಮೂಲಕ ಅದ್ದೂರಿಯಾಗಿ ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದ ನಟ ಧ್ರುವ ಸರ್ಜಾ. ಇದೀಗ ಮತ್ತೊಮ್ಮೆ ಅರ್ಜುನ್ ಜತೆ ಮಾರ್ಟಿನ್ (Martin teaser release) ಸಿನಿಮಾಕ್ಕಾಗಿ ಕೈಜೋಡಿಸಿದ್ದಾರೆ. ಮೊದಲ ಸಿನಿಮಾದಲ್ಲಿ ಪಕ್ಕಾ ಲವ್ ಸ್ಟೋರಿ ಮಾಡಿದ್ದ ಈ ಜೋಡಿ ಈ ಬಾರಿ ಭರ್ಜರಿ ಆಕ್ಷನ್ ಸಿನಿಮಾವನ್ನು ಕಟ್ಟಿದೆ. ಪ್ರತಿ ಪೋಸ್ಟ್‌ನಲ್ಲಿಯೂ ಭಾರತದ ಅತಿದೊಡ್ಡ ಆಕ್ಷನ್ ಸಾಗಾ ಎಂದು ಬರೆದುಕೊಳ್ಳುತ್ತಿರುವ ಮಾರ್ಟಿನ್ ಸಿನಿತಂಡದ ಮೇಲೆ ಸಾಮಾನ್ಯವಾಗಿ ನಿರೀಕ್ಷೆ ಹುಟ್ಟುಕೊಂಡಿತ್ತು. ಇನ್ನು ದೊಡ್ಡ ಮಟ್ಟದಲ್ಲಿ ಸಿನಿಮಾದ ಶೂಟಿಂಗ್ ನಡೆದಿದ್ದು, ನಿರ್ಮಾಪಕ ಉದಯ್ ಕೆ ಮೆಹ್ತಾ ಅದ್ದೂರಿಯಾಗಿ ಸಿನಿಮಾವನ್ನು ನಿರ್ಮಿಸಿದ್ದಾರೆ. ಇನ್ನು ಸಿನಿಮಾದ ಕ್ಲೈಮ್ಯಾಕ್ಸ್‌ಗಾಗಿಯೇ 52 ದಿನಗಳ ಕಾಲ ಶೂಟಿಂಗ್ ಮಾಡಿದ್ದ ಸಿನಿತಂಡ ಸಿನಿ ರಸಿಕರ ಹುಬ್ಬೇರುವಂತೆ ಮಾಡಿತ್ತು. ಹೀಗೆ ಸಿನಿಮಾ ಚಿತ್ರೀಕರಣಕ್ಕೆ ಹೆಚ್ಚಿನ ಸಮಯ ತೆಗದುಕೊಂಡಿರುವ ಮಾರ್ಟಿನ್ ಸಿನಿಮಾ ನಿರೀಕ್ಷೆಯನ್ನು ಮುಟ್ಟಲಿದೆಯಾ, ಎನ್ನುವುದು ಎಲ್ಲರ ಪ್ರಶ್ನೆ ಆಗಿದೆ.
ಇನ್ನು ಸಿನಿತಂಡ ಸಿನಿಮಾದ ಟೀಸರ್ ಬಿಡುಗಡೆ ದಿನಾಂಕವನ್ನು ಘೋಷಿಸಿದಾಗ ಟೀಸರ್ ಯಾವ ಮಟ್ಟದಲ್ಲಿರಲಿದೆ, ಟೀಸರ್ ನೋಡಿದರೆ ಸಿನಿಮಾ ಯಾವ ರೇಂಜಿಗೆ ಮೂಡಿ ಬಂದಿರಬಹುದು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ ಎಂಬ ಕುತೂಹಲ ಸಿನಿ ರಸಿಕರ ಪಾಲಿನಲ್ಲಿತ್ತು. ಅದರಂತೆ ಇಂದು ( ಫೆಬ್ರವರಿ 23 ) ಮಾರ್ಟಿನ್ ಸಿನಿಮಾದ ಟೀಸರ್ ಸಂಜೆ 5.55ಕ್ಕೆ ಲಹರಿ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದ್ದು, ಇದಕ್ಕೂ ಮುನ್ನ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಸಿನಿಮಂದಿರದಲ್ಲಿ ಸಿನಿಮಾದ ಟೀಸರ್ ಅನ್ನು ಬಿಡುಗಡೆಗೊಳಿಸಲಾಗಿದೆ. ಎಲ್ಲಾ ಐದು ಭಾಷೆಗಳಲ್ಲೂ ಟೀಸರ್ ಪ್ರದರ್ಶನಗೊಂಡಿದ್ದು, ಈ ಟೀಸರ್ ವೀಕ್ಷಿಸಲು ಸಿನಿ ರಸಿಕರು ಟಿಕೆಟ್ ಬುಕ್ ಮಾಡಿಕೊಂಡು ಬಂದಿದ್ದರು. ಇನ್ನು ಟೀಸರ್ ವೀಕ್ಷಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾದ ಟೀಸರ್ ಹೇಗಿದೆ ಎನ್ನುವುದನ್ನು ಸಿನಿ ರಸಿಕರು ಟ್ವಿಟರ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಬರೆದುಕೊಂಡಿದ್ದಾರೆ.
ಮಾರ್ಟಿನ್ ಸಿನಿಮಾದ ಟೀಸರ್ ವೀಕ್ಷಿಸಿದ ಸಿನಿ ರಸಿಕನೋರ್ವ ಮಾರ್ಟಿನ್ ತಮಾಷೆನೇ ಅಲ್ಲ, ಮುಂದಿನ ಕೆಜಿಎಫ್ ಎಂದು ಬರೆದುಕೊಂಡಿದ್ದಾರೆ. ಇನ್ನು ಯುಟ್ಯೂಬ್‌ನಲ್ಲಿ ಈ ಸಿನಿಮಾದ ಟೀಸರ್‌ನ ಥಿಯೇಟರ್ ರೆಕಾರ್ಡೆಡ್ ವಿಡಿಯೊ ವೀಕ್ಷಿಸಿರುವ ಹಲವಾರು ಹಿಂದಿ ಸಿನಿ ರಸಿಕರು ಇದೇ ರೀತಿಯ ಕಾಮೆಂಟ್ ಮಾಡುತ್ತಿದ್ದು, ಇದು ಮತ್ತೊಂದು ಕೆಜಿಎಫ್ ತರಹ ಇದೆ ಎಂದು ಬರೆದುಕೊಂಡಿದ್ದಾರೆ. ಇನ್ನು ಟೀಸರ್ ವೀಕ್ಷಿಸಿದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಯೋರ್ವ ಟೀಸರ್ ಪ್ರದರ್ಶನದ ವೇಳೆ ಪುನೀತ್ ಹಾಗೂ ಚಿರಂಜೀವಿ ಸರ್ಜಾಗೆ ಟ್ರಿಬ್ಯೂಟ್ ಸಲ್ಲಿಸಿದ ವಿಡಿಯೊ ಹಂಚಿಕೊಂಡು ಸಿನಿತಂಡದ ಈ ಕೆಲಸಕ್ಕೆ ಧನ್ಯವಾದ ಅರ್ಪಿಸಿದ್ದಾರೆ ಹಾಗೂ ಟೀಸರ್‌ನ ಕ್ವಾಲಿಟಿ ಹಾಗೂ ಸೆಟ್‌ಗಳ ಕುರಿತು ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿರುವ ಇವರು ಧ್ರುವ ಸರ್ಜಾ ಮಾಸ್ ಅಪಿಯರೆನ್ಸ್‌ಗೆ ಫಿದಾ ಆಗಿದ್ದಾರೆ.
ಇದನ್ನೂ ಓದಿ : ಹನಿಮೂನ್ ಮುಗಿಸಿ ಬಂದ ಸಿದ್ಧಾರ್ಥ್, ಕಿಯಾರಾ ಜೋಡಿ ಮೇಲೆ ನೆಟ್ಟಿಗರ ಕೆಂಗಣ್ಣು ಯಾಕೆ ?
ಇದನ್ನೂ ಓದಿ : ನಟ ರಾಮ್ ಚರಣ್ ಪತ್ನಿ ಡೆಲಿವರಿ ಮಾಡಿಸುವ ಡಾಕ್ಟರ್ ಯಾರು ಗೊತ್ತಾ ?
ಇದನ್ನೂ ಓದಿ : Kiccha Sudeep-Venkat Prabhu: ತಮಿಳಿನ ಸೋಲೇ ಇಲ್ಲದ ನಿರ್ದೇಶಕನ ಜತೆ ಕಿಚ್ಚ ಸುದೀಪ್ ಮುಂದಿನ ಚಿತ್ರ
ಟೀಸರ್ ಕುರಿತು ಟ್ವೀಟ್ ಮಾಡಿರುವ ಮತ್ತೋರ್ವ ಸಿನಿ ರಸಿಕ ಟೀಸರ್‌ನಲ್ಲಿ ಬರುವ ‘ಯು ಥಿಂಕ್ ಯು ಆರ್ ಸ್ಟ್ರಾಂಗ್.. ಅಂಡ್ ಈ ನೋ ಈ ಆಮ್ ಸ್ಟ್ರಾಂಗ್’ ಡೈಲಾಗ್ ಅನ್ನು ಟ್ವೀಟ್ ಮಾಡಿದ್ದು, ಟೀಸರ್ ನೋಡಿದ ಬಳಿಕ ಸಿನಿಮಾದ ಮೇಲಿನ ನಿರೀಕ್ಷೆ ಡಬಲ್ ಆಯಿತು. ಇದು ನಿಜವಾಗಿಯೂ ಎಪಿ ಅರ್ಜುನ್ ಸಿನಿಮಾನಾ ಎಂದು ಬರೆದುಕೊಂಡಿದ್ದಾರೆ. ಮತ್ತೋರ್ವ ಸಿನಿ ರಸಿಕ ಟೀಸರ್‌ನ ಹೈಲೈಟ್ ಬಗ್ಗೆಯೇ ಗೊಂದಲ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಜೈಲಿನಲ್ಲಿ ಭಾರತದ ಕ್ರಿಮಿನಲ್ ಎಂದು ಪ್ರಶ್ನೆ ಹಾಕುವ ಮೂಲಕ ತಮ್ಮಲ್ಲಿನ ಗೊಂದಲವನ್ನು ಹೊರಹಾಕಿದ್ದಾರೆ. ಹೌದು, ಟೀಸರ್‌ನ ಆರಂಭದಲ್ಲಿಯೇ ನಾಯಕ ಧ್ರುವ ಸರ್ಜಾ ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿರುತ್ತಾರೆ. ಈ ಅಂಶ ಗೊಂದಲದ ಜತೆಗೆ ಸಿನಿಮಾದ ಕಥೆ ಯಾವ ಮಟ್ಟದ್ದಿರಬಹುದು ಎಂಬ ಕುತೂಹಲವನ್ನೂ ಸಹ ಹೆಚ್ಚಿಸಿದೆ.
Martin Teaser Release at Veeresh Theatre: Actor Dhruva Sarja Fans Give Huge Response