ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಕನ್ನಡದ ಪ್ರತಿಭಾವಂತ ನಟ. ಆದರೆ ಸರ್ಜಾ ವಂಶದ ಕುಡಿ ಚಿರಂಜೀವಿ ಸರ್ಜಾ ಅಕಾಲಿಕ ಸಾವು ಅಭಿಮಾನಿಗಳಿಗೆ ಹಾಗೂ ಸರ್ಜಾ ಕುಟುಂಬಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಡುವಲ್ಲೇ ಮೇಘನಾ ಸರ್ಜಾ ಮಗುವಿನ ವಿಚಾರವಾಗಿ ಹರಡಿದಾಡುತ್ತಿರುವ ಸುದ್ದಿಗಳು ಮೇಘನಾ ಅವರಿಗೆ ಬೇಸರ ತರಿಸಿದ್ದು, ಯೂ ಟ್ಯೂಬ್ ಚಾಲೆನ್ ಗಳ ವಿರುದ್ದ ಬೇಸರ ವ್ಯಕ್ತಪಡಿಸಿದ್ದಾರೆ.

ಮೇಘನಾ ರಾಜ್ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ರು. ಸರ್ಜಾ ಕುಟುಂಬ ಹಾಗೂ ಸುಂದರ್ ರಾಜ್ ಕುಟುಂಬ ಮಾತ್ರವಲ್ಲ ಇಡೀ ಚಿತ್ರರಂಗವೇ ಮೇಘನಾ ಚಿರು ಜೋಡಿಯನ್ನು ಮೆಚ್ಚಿಕೊಂಡಿತ್ತು. ಗಂಡ ಹೆಂಡತಿ ನಡುವಿನ ಬಾಂಧವ್ಯ ಇತರರಿಗೆ ಮಾದರಿಯಂತಿತ್ತು. ಚಿರು ಧ್ರುವ ಸರ್ಜಾಗೆ ಅಣ್ಣನಾಗಿದ್ರು ತಂದೆಯ ಸ್ಥಾನವನ್ನು ತುಂಬಿದ್ರೆ, ಮೇಘನಾ ರಾಜ್ ಮೈದುನನ್ನು ತನ್ನ ಮಗನಂತೆ ಪ್ರೀತಿ ಕೊಡ್ತಿದ್ರು. ಸದಾ ಕಾಲ ನಗುನಗುತ್ತಲೇ ಜೀವನದ ಬಂಡಿಯನ್ನು ಸಾಗಿಸುತ್ತಿದ್ದ ಚಿರು ಮೇಘನಾ ಬಾಳಲ್ಲಿ ಆ ವಿಧಿ ಅಟ್ಟಹಾಸವನ್ನು ಮೆರೆದಿದ್ದಾನೆ.

ಮೇಘನಾ ರಾಜ್ ಸರ್ಜಾ ಜೀವವನ್ನೇ ಇಟ್ಟುಕೊಂಡಿದ್ದ ಚಿರು ಇಂದು ನಮ್ಮೊಂದಿಗಿಲ್ಲ. ಆ ನೋವಿನಿಂದ ಹೊರಬರೋದಕ್ಕೆ ಮೇಘನಾ ಅವರಿಂದ ಸಾಧ್ಯವಾಗುತ್ತಿಲ್ಲ. ಚಿರು ಬಾರದ ಲೋಕಕ್ಕೆ ಪಯಣಿಸುವ ಹೊತ್ತಲ್ಲೇ ಮೇಘನಾ ತುಂಬು ಗರ್ಭಿಣಿ. ಚಿರು ಮೇಘನಾ ಹೊಟ್ಟೆ ಯಲ್ಲಿ ಹುಟ್ಟಿ ಬರ್ತಾರೆ ಅಂತಾ ಲಕ್ಷಾಂತರ ಅಭಿಮಾನಿಗಳು ಕಾಯುತ್ತಿದ್ದಾರೆ.

ಸರ್ಜಾ ಕುಟುಂಬಸ್ಥರು ಮೇಘನಾ ರಾಜ್ ಸರ್ಜಾ ಅವರು ಚಿರು ಅಗಲುವಿಕೆಯ ನೋವಿನಿಂದ ಹೊರಬರಲಿ ಅನ್ನೋ ಕಾರಣಕ್ಕೆ ಮೇಘನಾ ಅವರನ್ನು ತಂದೆ ತಾಯಿಯ ಆರೈಕೆಯಲ್ಲಿ ಬಿಟ್ಟಿದ್ದಾರೆ. ಭಾರವಾದ ಹೃದಯದಲ್ಲಿಯೇ ಹಿರಿಯ ನಟ ಸುಂದರ್ ರಾಜ್ ಹಾಗೂ ಪ್ರಮೀಳಾ ಅವರು ಮಗಳನ್ನು ಸಂತೋಷವಾಗಿ ಡುತ್ತಿದ್ದಾರೆ. ಮಗಳ ಮಗುವಿನ ನಿರೀಕ್ಷೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

ಆದರೆ ಈ ನಡುವಲ್ಲೇ ಮೇಘನಾ ಸರ್ಜಾ ಅವರಿಗೆ ಕುರಿತಂತೆ ಹಲವು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಿರು ಸಾವಿನ ವಿಚಾರ ಡ್ರಗ್ಸ್ ದಂಧೆಗೆ ಥಳಕು ಹಾಕುತ್ತಿದ್ದಂತೆಯೇ ಮೇಘನಾ ರಾಜ್ ಅವರು ಬಹಿರಂಗವಾಗಿಯೇ ತಮ್ಮ ನೋವನ್ನು ತೋಡಿಕೊಂಡು ಕಣ್ಣೀರು ಸುರಿಸಿದ್ದರು. ಈ ನಡುವಲ್ಲೇ ಮೇಘನಾ ರಾಜ್ ಸರ್ಜಾ ಅವರಿಗೆ ಗಂಡು ಮಗುವಾಗಿದೆ ಅನ್ನೋ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಮೇಘನಾ ರಾಜ್ ಸರ್ಜಾ ಅವರಿಗೆ ಬೇಸರವನ್ನು ಮೂಡಿಸಿದೆ.

ತಮ್ಮ ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ಮೇಘನಾ ಹಲವು ವಿಚಾರಗಳನ್ನು ಬರೆದುಕೊಂಡಿದ್ದಾರೆ. ಪ್ರಮುಖವಾಗಿ ನನ್ನ ಕುಟುಂಬಕ್ಕೆ ಸಂಬಂಧಿಸಿದಂತೆ ಎಲ್ಲಾ ವಿಚಾರಗಳನ್ನು ನಾನು ಅತೀ ಶೀಘ್ರದಲ್ಲಿಯೇ ನಿಮ್ಮ ಮುಂದೆ ಬಂದು ತಿಳಿಸುತ್ತೇವೆ. ಹಲವು ಯೂ ಟ್ಯೂಬ್ ಚಾನೆಲ್ ಗಳು ಲೈಕ್ ಗಳಿಸೋ ಸಲುವಾಗಿ ಇಲ್ಲ ಸಲ್ಲದ ಸುದ್ದಿಗಳನ್ನು ಪ್ರಕಟಿಸುತ್ತಿವೆ.

ಆದರೆ ಇಂತಹ ಸುದ್ದಿಗಳು ಸತ್ಯಕ್ಕೆ ದೂರವಾಗಿದೆ. ಹೀಗಾಗಿ ಇಂತಹ ಸುದ್ದಿಗಳನ್ನು ಅಭಿಮಾನಿಗಳು ನಂಬ ಬಾರದು ಅಂತಾ ಮನವಿ ಮಾಡಿಕೊಂಡಿದ್ದಾರೆ. ಮಾತ್ರವಲ್ಲ ಇಂತಹ ಸುದ್ದಿಯನ್ನು ಪ್ರಕಟಿಸುವವರ ವಿರುದ್ದ ಕೂಡ ಮೇಘನಾ ರಾಜ್ ಸರ್ಜಾ ಬೇಸರ ವ್ಯಕ್ತಪಡಿಸಿ ದ್ದಾರೆ.

ಮೊದಲೇ ನೋವಲ್ಲಿರುವ ಮೇಘನಾ ರಾಜ್ ಸರ್ಜಾ ಅವರಿಗೆ ಕೆಲವೊಂದು ಬೆಳವಣಿಗೆ ಸಹಜವಾಗಿಯೇ ಬೇಸರ ಮೂಡಿಸುತ್ತಿದೆ. ಇಂತಹ ಸುದ್ದಿಯನ್ನು ಪ್ರಕಟಿಸಿ ಮೇಘನಾ ಅವರಿಗೆ ನೋವುಂಟು ಮಾಡಬೇಡಿ ಅಂತಾ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡುತ್ತಿದ್ದಾರೆ.