ಸೋಮವಾರ, ಏಪ್ರಿಲ್ 28, 2025
HomeCinemaಮೇಘನಾ ರಾಜ್ ಸರ್ಜಾ ನೋವಿಗೆ ಪೋಟೋ ಎಡಿಟ್ ಮೂಲಕ ಸಾಂತ್ವನ ಹೇಳಿದ ಕಲಾವಿದ

ಮೇಘನಾ ರಾಜ್ ಸರ್ಜಾ ನೋವಿಗೆ ಪೋಟೋ ಎಡಿಟ್ ಮೂಲಕ ಸಾಂತ್ವನ ಹೇಳಿದ ಕಲಾವಿದ

- Advertisement -

ಮೇಘನಾ ಸರ್ಜಾ….ಹೆಣ್ಣುಮಗಳೊಬ್ಬಳು ಎಂದು ಅನುಭವಿಸಬಾರದ ನೋವು ಉಣ್ಣುತ್ತಲೇ ನಾಳಿನ ಖುಷಿಗಾಗಿ ಕಾಯುತ್ತಿರುವ ಹೆಣ್ಣುಮಗಳು. ಅಗಲಿದ ಪತಿಗಾಗಿ ದುಃಖಿಸಬೇಕೋ ಅಥವಾ ಬರಲಿರುವ ಗಂಡನ ಪ್ರತಿರೂಪದಂತ ಮಗುವಾಗಿ ಸಂಭ್ರಮಿಸಬೇಕೋ ಎಂಬ ಗೊಂದಲದಲ್ಲಿರೋ ಮೇಘನಾಗೆ ಅಭಿಮಾನಿಯೊಬ್ಬರು ಸುಂದರವಾಗಿ ಪೋಟೋ ಎಡಿಟ್ ಮಾಡಿಕೊಡುವ ಮೂಲಕ ಚಿರು ಮೇಘನಾ ಜೊತೆಗೆ ಇದ್ದಾರೆ ಎಂಬ ಭರವಸೆ ತುಂಬಿದ್ದಾರೆ.

ಇತ್ತೀಚಿಗಷ್ಟೇ ಮೇಘನಾ ರಾಜ್ ಸರ್ಜಾ ಅವರಿಗೆ ಸಂಪ್ರದಾಯದಂತೆ ಸರಳವಾಗಿ ಸೀಮಂತ ಶಾಸ್ತ್ರ ನಡೆಸಲಾಯಿತು. ಈ ವೇಳೆ ಮೇಘನಾ ಅವರ ಆಸೆಯಂತೆ ಅವರ ಸೀಮಂತದ ಸ್ಥಳದಲ್ಲಿ ಚಿರಂಜೀವಿ ಸರ್ಜಾ ಅವರ ದೊಡ್ಡ ಕಟೌಟ್ ನಿರ್ಮಿಸಲಾಗಿತ್ತು. ಕಟೌಟ್ ಪಕ್ಕದಲ್ಲಿ ಮೇಘನಾ ಕುಳಿತ ದೃಶ್ಯ ಎಂಥ ಕಲ್ಲು ಹೃದಯದವನ್ನು ಕಲಕುವಂತಿತ್ತು.

ಈ ಪೋಟೋಗಳು ವೈರಲ್ ಆಗುತ್ತಿದ್ದಂತೆ ಜನರು ಮೇಘನಾ ಸ್ಥಿತಿ ಕಂಡು ಸ್ವತಃ ಕಣ್ಣೀರಾಗಿದ್ದರು. ಆದರೆ ಮೇಘನಾ ಸರ್ಜಾ ಸ್ಥಿತಿ ಕಂಡು ಮರುಗಿದ ಕಲಾವಿದ  ಕರಣ್ ಆಚಾರ್ಯ ತಮ್ಮ ಕುಂಚದ ಮೂಲಕ ಮೇಘನಾ ಅವರೊಂದಿಗೆ ಚಿರುಸರ್ಜಾ ನಿಂತು ಅವರನ್ನು ಮುನ್ನಡೆಸುತ್ತಿರುವಂತ ಕಲಾಕೃತಿಯೊಂದನ್ನು ಸಿದ್ಧಪಡಿಸಿ  ಆ ಮೂಲಕ ಚಿರು ಇಲ್ಲೇ ಅಜರಾಮರವಾಗಿದ್ದಾರೆ ಎಂಬ ಭಾವನೆ ಹಾಗೂ ವಿಶ್ವಾಸ ತುಂಬುವ ಪ್ರಯತ್ನ ಮಾಡಿದ್ದಾರೆ.

ಕರಣ್ ಆಚಾರ್ಯ ಪೋಟೋದಲ್ಲಿ ತುಂಬು ಗರ್ಭೀಣಿ ಮೇಘನಾರನ್ನು ಚಿರು ಬಳಸಿಕೊಂಡು ನಿಂತಿರುವಂತೆ ಚಿತ್ರಿಸಲಾಗಿದ್ದು, ಅತ್ಯಂತ ಹೃದಯಸ್ಪರ್ಶಿಯಾಗಿರುವ  ಕಲಾಕೃತಿ ಎಲ್ಲರನ್ನು ಸೆಳೆಯುತ್ತಿದೆ. ಕರಣ್ ಆಚಾರ್ಯ  ಅವರು ಇದನ್ನು ಸಿದ್ಧಪಡಿಸೋದಿಕ್ಕೆ ಚಿರು ಅಭಿಮಾನಿಗಳ ಒತ್ತಾಯವೂ ಕಾರಣವಂತೆ. ಸೀಮಂತದ ಕೆಲ ಪೋಟೋದಲ್ಲಿ ಮೇಘನಾ ಒಬ್ಬರೇ ನಿಂತದ್ದನ್ನು ಕಂಡ  ಅಭಿಮಾನಿಗಳು ಈ ಪೋಟೋಗಳಲ್ಲಿ ಏನಾದ್ರೂ ಮ್ಯಾಜಿಕ್  ಮಾಡಿ ಎಂದು ಕರಣ ಆಚಾರ್ಯರಲ್ಲಿ ಮನವಿ ಮಾಡಿದ್ದರಂತೆ.

ಇದನ್ನೇ ಆಧರಿಸಿ ಕರಣ್ ಆಚಾರ್ಯ ಕೆಲ ಪೋಟೋ ಸಿದ್ಧಪಡಿಸಿದ್ದು, ಚಿರು ಮೇಘನಾ ಜೊತೆ ಜೀವಂತವಾಗಿ ನಿಂತಷ್ಟು ಸುಂದರವಾಗಿ ಮೂಡಿಬಂದಿದ್ದು, ನೋಡುಗರನ್ನು ಸೆಳೆಯುತ್ತಿದೆ. ಪತಿಯನ್ನು ಕಳೆದುಕೊಂಡು ಕೊರಗುತ್ತಿರುವ ಮೇಘನಾಗೆ ಅಭಿಮಾನಿಗಳು ಇನ್ನಿಲ್ಲದ ಪ್ರೀತಿ ತೋರುತ್ತಿದ್ದು, ಚಿರು ಮೇಲಿನ ಪ್ರೀತಿಗೆ ಅಭಿಮಾನಿಗಳ  ಈ ವರ್ತನೆಯೇ ಸಾಕ್ಷಿಯಂತಿದೆ.

RELATED ARTICLES

Most Popular