Meghana Raj sarja : ನಟಿ ಮೇಘನಾ ರಾಜ್ ಸರ್ಜಾ ಸ್ಯಾಂಡಲ್ ವುಡ್ ನ ಡಿಸೆಂಟ್ ಬ್ಯೂಟಿ ಅಂತನೇ ಫೇಮಸ್. ತಾನಾಯ್ತು ತನ್ನ ಕೆರಿಯರ್ ಆಯ್ತು ಅಂತಿರೋ ಈ ನಟಿ ಸದ್ಯ ಸಂಭ್ರಮದಲ್ಲಿದ್ದಾರೆ. ಹೊಸದೊಂದು ಗೂಡು ಕಟ್ಟಿಕೊಂಡಿರೋ ನಟಿ ಮೇಘನಾ ಇತ್ತೀಚಿಗೆ ಅದ್ದೂರಿಯಾಗಿ ಗೃಹಪ್ರವೇಶ ಮಾಡಿದ್ದಾರೆ. ಮೇಘನಾ ರಾಜ್ ಸರ್ಜಾ ಖುಷಿ ಖುಷಿಯಾಗಿ ಹೊಸಮನೆ ಪೋಟೋ ಹಂಚಿಕೊಳ್ತಿದ್ದಂಗೆ ಚಿರು ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಅಷ್ಟೇ ಅಲ್ಲ ಹಾಗಿದ್ದರೇ ಇನ್ಮುಂದೇ ಶಾಶ್ವತವಾಗಿ ಮೇಘನಾ ಚಿರು ಮನೆಯಿಂದ ದೂರವಾದ್ರಾ ಅಂತ ಕೊರಗ್ತಿದ್ದಾರೆ. ಅಷ್ಟಕ್ಕೂ ಚಿರು ಮನೆಯಿಂದ ನಿಜವಾಗಿಯೂ ಮೇಘನಾ ದೂರ ಉಳಿದಿದ್ದು ಅದಕ್ಕೂ ಬಲವಾದ ಕಾರಣವಿದೆಯಂತೆ.

ಮಲೆಯಾಳಂ,ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ ಕುರುಕ್ಷೇತ್ರ ಖ್ಯಾತಿಯ ಮೇಘನಾ ಸರ್ಜಾ ಸದ್ಯ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡಿದ್ದಾರೆ. ಜಾಹೀರಾತು, ರಿಯಾಲಿಟಿ ಶೋ ಅಂತೆಲ್ಲ ಬ್ಯುಸಿಯಾಗಿರೋ ಮೇಘನಾ ಸಿನಿಮಾದಲ್ಲೂ ಗೆದ್ದಿದ್ದಾರೆ. ತತ್ಸಮ್ ತದ್ಭವ್ ಮೇಘನಾ ರಾಜ್ ಕೆರಿಯರ್ ಗೆ ಸಖತ್ ಹೆಸರು ತಂದುಕೊಟ್ಟಿದೆ. ಸದ್ಯ ಮೇಘನಾ ರಾಜ್ ಅಮರ್ಥ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಇದೆಲ್ಲದರ ನಡುವೆ ನಟಿ ಮೇಘನಾ ರಾಜ್ ಸರ್ಜಾ ಜೆ.ಪಿ.ನಗರದಲ್ಲಿ ಹೊಸ ಮನೆಯೊಂದನ್ನು ಕಟ್ಟಿಸಿದ್ದಾರೆ. ಮೂರು ಅಂತಸ್ತಿನ ಮನೆಗೆ ಭರ್ಜರಿ ಇಂಟೀರಿಯರ್ ಡಿಸೈನ್ ಕೂಡ ಮಾಡಿಸಿದ್ದಾರಂತೆ. ಮನೆಗೆ ಮೇಘನಾ ರಾಜ್ ಸರ್ಜಾ ಹಾಗೂ ರಾಯನ್ ರಾಜ್ ಎಂದಷ್ಟೇ ಹೆಸರು ಹಾಕಿಸಿದ್ದಾರೆ. ರಾಯನ್ ರಾಜ್ ಮುಂದೇ ಸರ್ಜಾ ಸರ್ ನೇಮ್ ಬಿಟ್ಟಿರೋದು ಚಿರು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ : ಪವಿತ್ರಾ ಗೌಡ ಮೈಮೇಲೆ ದರ್ಶನ್ ಹಚ್ಚೆ : ಟ್ಯಾಟೂ ನೋಡಿ ಅಭಿಮಾನಿಗಳು ಏನಂದ್ರು ?
ಇದುವರೆಗೂ ನಟಿ ಮೇಘನಾ ರಾಜ್ ಜೆ.ಪಿ.ನಗರದಲ್ಲಿದ್ದ ತಮ್ಮ ತವರು ಮನೆಯಲ್ಲೇ ವಾಸವಾಗಿದ್ದರು. ಪೋಷಕರಾದ ನಟ ಸುಂದರ ರಾಜ್ ಹಾಗೂ ತಾಯಿ ಪ್ರಮೀಳಾ ಜೋಷಾಯ್ ಜೊತೆ ಮೇಘನಾ ರಾಜ್ ಸರ್ಜಾ ಕಳೆದ ಐದು ವರ್ಷದಿಂದ ವಾಸವಾಗಿದ್ದರು. 2021 ರಲ್ಲಿ ನಟಿ ಮೇಘನಾ ರಾಜ್ ಐದು ತಿಂಗಳ ಗರ್ಭೀಣಿ ಆಗಿದ್ದಾಗ ಪತಿ ಹಾಗೂ ನಟ ಚಿರಂಜೀವಿ ಸರ್ಜಾರನ್ನು ಕಳೆದುಕೊಂಡರು.

ಅಂದಿನಿಂದ ನಟಿ ಮೇಘನಾ ರಾಜ್ ಸರ್ಜಾ ತಮ್ಮ ತವರು ಮನೆಯಲ್ಲೇ ಉಳಿದುಕೊಂಡಿದ್ದಾರೆ. ಮೇಘನಾ ರಾಜ್ ಸರ್ಜಾ ಪೋಷಕರು ಕೂಡ ನಮಗಿರೋದು ಒಂದೇ ಮಗಳು. ಅವಳನ್ನು ಯಾರು ನೋಡೋದು ಬೇಡ ನಾವೇ ನೋಡಿಕೊಳ್ತಿವಿ ಎಂದಿದ್ದರು. ಈಗ ಮೇಘನಾ ತಮಗಾಗಿ ತಮ್ಮದೇ ಆಯ್ಕೆಯಂತೆ ಮನೆ ಕಟ್ಟಿಕೊಂಡಿದ್ದಾರೆ. ಈ ಮನೆ ನೋಡ್ತಿದ್ದಂತೆ ಮೇಘನಾ ಹಾಗೂ ಚಿರು ಅಭಿಮಾನಿಗಳು ಹಾಗಿದ್ದರೇ ಇನ್ನೆಂದೂ ಮೇಘನಾ ರಾಜ್ ಸರ್ಜಾ ಚಿರಂಜೀವಿ ಮನೆಗೆ ಹೋಗಲ್ವಾ ಅಂತ ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗಾಗಿ ದೇಗುಲ ನಿರ್ಮಿಸಿದ ಅಭಿಮಾನಿ
ಮೂಲಗಳ ಪ್ರಕಾರ ನಿಜವಾಗಿಯೂ ಚಿರು ಮನೆಯಿಂದ ದೂರ ಇರಲು ಮೇಘನಾ ನಿರ್ಧರಿಸಿದ್ದಾರಂತೆ. ಅದಕ್ಕೂ ಸಕಾರಣವಿದೆ. ಮೇಘನಾ ಚಿರು ಆಮನೆಯಲ್ಲಿ ಖುಷಿ ಖುಷಿಯಾಗಿ ಒಂದಾಗಿ ಬದುಕಿದ್ದರು. ಜೀವನದ ಬಗ್ಗೆ ಭವಿಷ್ಯದ ಬಗ್ಗೆ ಸಾವಿರಾರು ಕನಸು ಕಂಡಿದ್ದರು. ಆದರೆ ಈಗ ಚಿರು ಬದುಕಿಲ್ಲ. ಹೀಗಾಗಿ ಆ ಮನೆಗೆ ಹೋದರೇ ಸದಾಕಾಲ ಮೇಘನಾನೆ ಎಲ್ಲಾ ಕಡೆ ಚಿರು ನೆನಪು ಕಾಡಿ ಮನಸ್ಸಿಗೆ ನೋವಾಗುತ್ತದೆ. ಇತ್ತೀಚಿಗೆ ಕಷ್ಟಪಟ್ಟು ನೋವಿನಿಂದ ಹೊರಬಂದು ಮಗನ ಮುಖ ನೋಡಿ ಹೊಸ ಬದುಕು ಆರಂಭಿಸಿದ್ದಾರೆ. ಹೀಗಾಗಿ ಚಿರು ನೆನಪು ಮತ್ತು ಮಗನ ಬಾಲ್ಯದ ಜೊತೆ ಖುಷಿಯಾಗಿ ಬದುಕಲು ಮೇಘನಾ ಹೊಸ ಮನೆ ಕಟ್ಟಿದ್ದಾರಂತೆ.
Meghana Raj sarja New house