ಬದುಕಿನ ಹಲವು ಏರಿಳಿತಗಳಿಗೆ ಸಾಕ್ಷಿಯಾದ ನಟಿ ಮೇಘನಾ ರಾಜ್ (Meghana Raj Sarja ಬಹು ವರ್ಷಗಳ ಬಳಿಕ ಮತ್ತೊಂದು ಸುಂದರ ಪಾತ್ರ ಹಾಗೂ ಸಿನಿಮಾದೊಂದಿಗೆ ತೆರೆಮೇಲೆ ಬರಲು ಸಜ್ಜಾಗಿದ್ದಾರೆ. ಆರಂಭದಿಂದಲೂ ವಿಭಿನ್ನ ಪಾತ್ರಗಳ ಮೂಲಕವೇ ಸದ್ದು ಮಾಡಿದ್ದ ಮೇಘನಾ ರಾಜ್ ಈಗಲೂ ತತ್ಸಮ ತದ್ಬವ ( Tatsama tabdhava) ಸಿನಿಮಾದಲ್ಲಿ ಕೂಡ ಹಿಂದೆಂದೂ ಕಂಡಿರದ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.

ಬಾಲ್ಯದಿಂದಲೂ ನಟನೆ ಹಾಗೂ ಚಿತ್ರರಂಗದ ಜೊತೆಗೆ ನಂಟು ಹೊಂದಿರೋ ನಟಿ ಮೇಘರಾರಾಜ್ ತನ್ನಿಚ್ಛೆಯಂತೆ ನಟನೆಯಲ್ಲಿ ಬದುಕು ಕಟ್ಟಿಕೊಂಡರು. ನಟನೆ, ಪ್ರೀತಿ,ಮದುವೆ,ಬದುಕು ಎಂದೆಲ್ಲ ಖುಷಿಯಾಗಿದ್ಧ ಮೇಘನಾಗೆ ಚಿರು ಸಾವು ಎಂದೂ ಮರೆಯದ ಆಘಾತವೊಂದನ್ನು ನೀಡಿತ್ತು.

ಪ್ರೀತಿಯ ಪ್ರತಿರೂಪ ಹೊಟ್ಟೆಯಲ್ಲಿರುವಾಗಲೇ ಪತಿಯನ್ನು ಕಳೆದುಕೊಂಡ ಮೇಘನಾ ಅಕ್ಷರಷಃ ಕುಸಿದು ಹೋಗಿದ್ದರು. ಆದರೆ ಹೊಟ್ಟೆಯೊಳಗಿನ ಕೂಸು ಮೇಘನಾರ ಬದುಕಿನಲ್ಲಿ ಮತ್ತೆ ಹೊಸಬೆಳಕು ತಂದಿತ್ತು.ಸದ್ಯ ಚಿರು ಪ್ರತಿರೂಪದಂತಿರೋ ರಾಯನ್ ರಾಜ್ ಸರ್ಜಾರನ್ನು ತಂದೆ- ತಾಯಿ ಎಲ್ಲವೂ ಆಗಿ ಸಾಕ್ತಿದ್ದಾರೆ ಮೇಘನಾ ರಾಜ್. ಇದರ ಜೊತೆಗೆ ಬಹುತೇಕ ತಾವು ಮರೆತೇ ಬಿಟ್ಟದ್ದರೂ ಎಂಬಂತಾಗಿದ್ದ ಚಿತ್ರರಂಗಕ್ಕೆ ಪೂರ್ಣ ಪ್ರಮಾಣದಲ್ಲಿ ಹಿಂತಿರುಗಿದ್ದಾರೆ.
ಇದನ್ನೂ ಓದಿ : ಮಾದಕತೆಯೇ ಮೈತುಂಬಿದ ಮಾಡೆಲ್: ಜೀನಲ್ ಜೋಶಿ ಪೋಟೋಸ್ ವೈರಲ್
ಕೊರೋನಾ ಸೇರಿದಂತೆ ವಿವಿಧ ಕಾರಣಗಳಿಗಾಗಿ ಬಹುತೇಕ ನಾಲ್ಕು ವರ್ಷದಿಂದ ಚಿತ್ರರಂಗದಿಂದ ದೂರವಿದ್ದ ಮೇಘನಾ ತತ್ಸಮ ತದ್ಬವದ ಮೂಲಕ ಮತ್ತೆ ಬಣ್ಣ ಹಚ್ಚಿ ರ್ರೀ ಎಂಟ್ರಿ ಕೊಟ್ಟಿದ್ದಾರೆ. ಇಷ್ಟಕ್ಕೂ ತಮಗೆ ಬಂದಿದ್ದ ಹತ್ತಾರು ಅವಕಾಶಗಳ ಮಧ್ಯೆ ಮೇಘನಾ ರಾಜ್ ತತ್ಸಮ ತದ್ಬವ ಸಿನಿಮಾವನ್ನೇ ಒಪ್ಪಿಕೊಂಡಿದ್ದು ಯಾಕೆ ಎಂಬ ಪ್ರಶ್ನೆಗೆ ಖುದ್ದು ಮೇಘನಾ ಉತ್ತರ ನೀಡಿದ್ದಾರೆ.

ಕೇವಲ ಉತ್ತರ ಮಾತ್ರವಲ್ಲ ಒಂದು ರೀತಿಯಲ್ಲಿ ಸಿನಿಮಾ ಒಪ್ಪಿಕೊಳ್ಳೋದಿಕ್ಕೆ ತಮ್ಮ ಬದುಕಿನ ಸ್ಥಿತಿಯೇ ಕಾರಣವಾಯ್ತು ಎಂಬರ್ಥದಲ್ಲಿ ಮಾತನಾಡಿದ್ದು, ಈ ಮಾತುಗಳು ಮೇಘನಾ ರಾಜ್ ಸರ್ಜಾ ಚಿರುವನ್ನು ಎಷ್ಟು ಮಿಸ್ ಮಾಡ್ಕೊಂಡ್ರು ಅನ್ನೋದನ್ನು ಹೇಳುವಂತಿದೆ. ಹೌದು ಮೇಘನಾ ರಾಜ್ ರನ್ನು ಈ ಸಿನಿಮಾದತ್ತ ಸೆಳೆದಿದ್ದು, My Husband Is Missing ಅನ್ನೋ ಡೈಲಾಗ್. ಹೌದು ಹಲವು ನ್ಯೂಸ್ ಇಂಟರವ್ಯೂಗಳಲ್ಲಿ ಮೇಘನಾ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ಪನ್ನಗಾಭರಣ ಈ ಸಿನಿಮಾದ ಕತೆ ಕೇಳುವಂತೆ ಹೇಳಿದಾಗ ಸ್ಕ್ರಿಪ್ಟ್ ನೋಡಿದ ಮೇಘನಾ ರಾಜ್ ಗೆ ಮೈ ಹಸ್ಬೆಂಡ್ ಮಿಸ್ಸಿಂಗ್ ಅನ್ನೋ ಡೈಲಾಗ್ ತುಂಬ ಕಾಡಿತತ್ತಂತೆ .ಕೊನೆಗೆ ಪನ್ನಗಾಭರಣ ಈ ಸಿನಿಮಾ ಮಾಡುವಂತೆ ಕೇಳಿದಾಗ ಅದೇ ಕಾರಣಕ್ಕೆ ಮೇಘನಾ ಮರುಮಾತಿಲ್ಲದೇ ಈ ಸಿನಿಮಾವನ್ನು ಒಪ್ಪಿಕೊಂಡರಂತೆ.
ಇದನ್ನೂ ಓದಿ : Meghanaraj ಹೊಸ ಪೋಟೋ ಶೂಟ್ : ಮಹಾರಾಣಿಯಾಗಿ ಮಿಂಚಿದ ಮೇಘನಾ
ಸಪ್ಟೆಂಬರ್ ನಲ್ಲೇ ಮೇಘನಾ ಸಿನಿಮಾ ತೆರೆಗೆ ಬರ್ತಿದ್ದು, ಸಿನಿಮಾ ಉತ್ತಮ ಪ್ರದರ್ಶನ ಕಾಣುವ ವಿಶ್ವಾಸದಲ್ಲಿದ್ದಾರೆ ಮೇಘನಾ ಸರ್ಜಾ. ಸಿನಿಮಾ ಪ್ರಮೋಶನ್ ಕೆಲಸದಲ್ಲಿ ಬ್ಯುಸಿಯಾಗಿರೋ ಮೇಘನಾ ರಾಜ್ ಸಿನಿಮಾವನ್ನು ಸಕ್ಸಸ್ ಮಾಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ನಾನು ಸಿನಿಮಾ ಮಾಡಬೇಕೋ, ಬೇಡವೋ ಎಂಬ ಗೊಂದಲದಲ್ಲಿದ್ದಾಗ ಅಭಿಮಾನಿಗಳು ಸಿನಿಮಾ ಮಾಡಿ ಎಂದು ಹುರಿದುಂಬಿಸಿದ್ದರು. ಅದೇ ಭರವಸೆಯೊಂದಿಗೆ ನಾನು ಮತ್ತೆ ಕೆರಿಯರ್ ಆರಂಭಿಸಿದ್ದೇನೆ. ಅಭಿಮಾನಿಗಳೆಲ್ಲ ಥಿಯೇಟರ್ ಗೆ ಬಂದು ಸಿನಿಮಾ ನೋಡ್ತಾರೇ ಅನ್ನೋ ವಿಶ್ವಾಸವಿದೆ ಎಂದಿದ್ದಾರೆ.

ತತ್ಸಮ ತದ್ವವ ಟೈಟಲ್ ನಂತೆ ಸಾಕಷ್ಟು ಕುತೂಹಲ ಮೂಡಿಸೋ ಸಿನಿಮವಾಗಿದ್ದು, ಕಳೆದುಹೋದ ಪತಿಯನ್ನು ಹುಡುಕುವ ಆತಂಕಿತ ಪತ್ನಿ ಕ್ಯಾರೆಕ್ಟರ್ ನಲ್ಲಿ ಮೇಘನಾ ಸರ್ಜಾ ಮಿಂಚಿದ್ದಾರೆ. ಚಿರು ಸ್ನೇಹಿತರ ಗುಂಪಿನ ಸದಸ್ಯರೇ ಈ ಸಿನಿಮಾದ ವಿವಿಧ ರೋಲ್ ಗಳಲ್ಲಿದ್ದಾರೆ.ಪನ್ನಗಾಭರಣ ನಿರ್ದೇಶಿಸಿದ್ದರೇ, ಮೇಘನಾ ಸರ್ಜಾ ಪತಿ ಹುಡುಕುವ ಪಾತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮಿಂಚಿದ್ದಾರೆ.
Meghana Raj Sarja Sandalwood Famous Actor Chiranjeevi Sarja Wife Come Back in Kannada movie Tatsama Tadbhava Reaction