Meghana Raj Sarja : ಸಾಮಾನ್ಯವಾಗಿ ಸೆಲೆಬ್ರಿಟಿಗಳು ವೀಕೆಂಡ್ ಅಂದ್ರೇ ಪಾರ್ಟಿಗಳಲ್ಲೇ ಕಾಣಸಿಗ್ತಾರೆ ಅನ್ನೋ ಮಾತಿದೆ. ಆದರೆ ಸ್ಟಾರ್ ಮಮ್ಮಿಗಳಿಗೆ ಈ ಮಾತು ಅನ್ವಯಿಸೋದಿಲ್ಲ. ಯಾಕೆಂದ್ರೇ ಅವರೆಲ್ಲ ಮಕ್ಕಳ ಜೊತೆ ಬ್ಯುಸಿಯಾಗಿರುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಅಂದ್ರೇ ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ಮತ್ತು ಬಹುಭಾಷಾ ನಟಿ ಮೇಘನಾ ರಾಜ್. ಅದರಲ್ಲೂ ಮಗನಿಗೆ ತಂದೆ ತಾಯಿ ಎಲ್ಲವೂ ಆಗಿರುವ ಮೇಘನಾ ರಾಜ್ ವೀಕೆಂಡ್ ನ್ನು ಮಗ ರಾಯನ್ ರಾಜ್ ಸರ್ಜಾಗಾಗಿ ಮೀಸಲಿಟ್ಟಿದ್ದಾರೆ. ಅಷ್ಟೇ ಅಲ್ಲ ಮಗನ ಜೊತೆ ವೀಕೆಂಡ್ ಹೇಗಿತ್ತು ಅನ್ನೋ ಪೋಟೋಸ್ ಕೂಡ ಶೇರ್ ಮಾಡಿದ್ದಾರೆ.
ಬದುಕಿನ ಬಹುದೊಡ್ಡ ನೋವಿನಿಂದ ಹೊರಬಂದಿರೋ ನಟಿ ಮೇಘನಾ ರಾಜ್ ಸಹಜಜೀವನಕ್ಕೆ ಮರಳುತ್ತಿದ್ದಾರೆ. ಮಗನಿಗಾಗಿ ಎಲ್ಲ ನೋವನ್ನು ಮರೆಯುತ್ತೇನೆ ಎಂದಿದ್ದ ಮೇಘನಾ ರಾಜ್ ಮಗನ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಾರೆ.

ಶೂಟಿಂಗ್ ಸಮಯ ಬಿಟ್ಟು ಬೇರೆ ಹೊತ್ತಿನಲ್ಲಿ ಮಗನನ್ನು ಬಿಟ್ಟು ಕದಲೋದೇ ಇಲ್ವಂತೆ. ಹೀಗಾಗಿ ಮೇಘನಾ ವಿಕೇಂಡ್ ಕೂಡ ಮಗನ ಆಟೋಟ ಹಾಗೂ ಆರೈಕೆಯಲ್ಲೇ ಕಳೆದುಹೋಗುತ್ತೆ. ಈ ವೀಕೆಂಡ್ ನ್ನೂ ಮಗನ ಜೊತೆ ಕಳೆದಿರೋ ಮೇಘನಾ ಮಗನ ತುಂಟಾಟದ ವಿಡಿಯೋ ಹಾಗೂ ಪೋಟೋ ಶೇರ್ ಮಾಡಿದ್ದಾರೆ.
ಮಗ ಡ್ರಾಯಿಂಗ್ ಹಾಗೂ ಕಲರಿಂಗ್ ಮಾಡ್ತಿರೋ ವಿಡಿಯೋ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಮೇಘನಾ ಮನೆಯಲ್ಲಿ ಹರಡಿರೋ,ಅಲ್ಲಲ್ಲಿ ಪೇಂಟ್ ಚೆಲ್ಲಿದ ಪ್ಲೋರ್ ತೋರಿಸಿ ಇಲ್ಲಿ ಕಲಾವಿದರನ್ನು ಹುಡುಕಿ ಎಂಬ ಕ್ಯಾಪ್ಸನ್ ಕೂಡ ನೀಡಿದ್ದಾರೆ.
ಇದನ್ನೂ ಓದಿ : ಕೆಎಲ್ ರಾಹುಲ್ ನಿವೃತ್ತಿ : ಏನಿದು ಹೊಸ ಸಂಚು ?
ಸದ್ಯ ಕಿಂಡರಗಾರ್ಡ್ ನಲ್ಲಿ ಓದ್ತಿರೋ ಮೇಘನಾ ರಾಜ್ ಸರ್ಜಾ ಪುತ್ರ ರಾಯನ್ ರಾಜ್ ಸರ್ಜಾ ಡ್ರಾಯಿಂಗ್ ನಲ್ಲಿ ಆಸಕ್ತಿ ತೋರುತ್ತಿದ್ದಾನಂತೆ. ಹೀಗಾಗಿ ಫ್ರೀ ಟೈಂ ಸಿಕ್ಕಾಗಲೆಲ್ಲ ಮೇಘನಾ ಮಗನ ಜೊತೆ ಬಣ್ಣ ತುಂಬುವ ಕೆಲಸದಲ್ಲಿ ಬ್ಯುಸಿಯಾಗ್ತಾರಂತೆ.

ಅಷ್ಟೇ ಅಲ್ಲ ಚಿರು ಡ್ಯಾನ್ಸ್ ಡ್ಯಾನ್ಸ್ ನೋಡುತ್ತಾ ಮಗ ರಾಯನ್ ರಾಜ್ ಸರ್ಜಾ ಬೀನ್ ಬ್ಯಾಗ್ ಮೇಲೆ ಬೀಳುವ ದೃಶ್ಯವೊಂದನ್ನು ನಟಿ ಮೇಘನಾ ರಾಜ್ ಹಂಚಿಕೊಂಡಿದ್ದಾರೆ. ಈ ಹಿಂದೆ ತಮ್ಮದೇ ಯೂ ಟ್ಯೂಬ್ ನಲ್ಲಿ ಮಗನ ಆಟಿಕೆಗಳ ವ್ಲೋಗ್ ಮಾಡಿದ್ದ ಮೇಘನಾ ರಾಜ್ ಮಗನ ದಿನಚರಿ, ಅವನಿಷ್ಟದ ಟಾಯ್ಸ್ ಹಾಗೂ ತಿಂಡಿ ತಿನಿಸುಗಳ ಬಗ್ಗೆಯೂ ವಿವರಣೆ ನೀಡಿದ್ದರು. ಸದ್ಯ ರಾಯನ್ ಡ್ರಾಯಿಂಗ್ ವಿಡಿಯೋ ಶೇರ್ ಮಾಡಿದ್ದಾರೆ.
ಇದನ್ನೂ ಓದಿ : ಇದನ್ನೂ ಓದಿ : IPL 2025 : ಎಂಎಸ್ ಧೋನಿ ನಿವೃತ್ತಿ: ಸಿಎಸ್‌ಕೆ ತಂಡಕ್ಕೆ ರಿಷಬ್ ಪಂತ್
ಅಚ್ಚ ನೀಲಿ ಬಣ್ಣದಲ್ಲಿ ಕೈಅದ್ದಿ ಅದರ ಪ್ರಿಂಟ್ ತೆಗೆದ ರಾಯನ್ ಖುಷಿಯಾಗಿರೋ ವಿಡಿಯೋ ಹಂಚಿಕೊಂಡಿದ್ದಾರೆ. ಸದ್ಯ ರಿಯಾಲಿಟಿ ಶೋ, ಸಿನಿಮಾ ಹಾಗೂ ಜಾಹೀರಾತುಗಳಲ್ಲಿ ಬ್ಯುಸಿಯಾಗಿರೋ ಮೇಘನಾ ರಾಜ್ ಸರ್ಜಾ , ಇತ್ತೀಚೆಗಷ್ಟೇ ಅವಾರ್ಡ್ ಫಂಕ್ಷನ್ ಗಾಗಿ ದುಬೈಗೆ ಹಾರಿದ್ದರು.
ಮೂಲತಃ ಮಲೆಯಾಳಂ ಸಿನಿಮಾಗಳಿಂದಲೇ ಗುರುತಿಸಿಕೊಂಡ ಮೇಘನಾ, ಒಳ್ಳೆಯ ಕತೆ ಸಿಕ್ಕರೇ ಮಲೆಯಾಳಂಗೂ ಮರಳೋದಾಗಿ ಹೇಳಿದ್ದಾರೆ. ತತ್ಸಮ್ ತದ್ಭವ ಸಿನಿಮಾದ ಯಶಸ್ಸಿನ ಬಳಿಕ ಮೇಘನಾ ರಾಜ್ ಗೆ ಸಾಕಷ್ಟು ಅವಕಾಶಗಳು ಬಂದಿದ್ದು, ಮೇಘನಾ ಮಾತ್ರ ಸಖತ್ ಚ್ಯೂಸಿಯಾಗಿದ್ದಾರೆ. ಸದ್ಯ ಮೇಘನಾ ಶ್ರೀನಗರ ಕಿಟ್ಟಿ ಜೊತೆಗೆ ನಟಿಸಿದ ಅಮರ್ಥ ಸಿನಿಮಾ ರಿಲೀಸ್ ಗೆ ಸಿದ್ಧವಾಗಿದೆ.
ಇದನ್ನೂ ಓದಿ : IPL 2025 Auction : ಸೂರ್ಯಕುಮಾರ್‌ಗಾಗಿ ಶ್ರೇಯಸ್ ಅಯ್ಯರ್ ಮುಂಬೈಗೆ ಮಾರಾಟಕ್ಕೆ ಸಿದ್ದವಾದ ಕೆಕೆಆರ್
ಕನ್ನಡ ಚಿತ್ರರಂಗದಲ್ಲೇ ತಾರಾ ದಂಪತಿಯ ಮಗಳಾಗಿ ಬೆಳೆದು ಬಂದ ಮೇಘನಾ ರಾಜ್ ಪರಸ್ಪರ ಪ್ರೀತಿಸಿ ಸರ್ಜಾ ಕುಟುಂಬದ ಕುಡಿ ಚಿರಂಜೀವಿ ಸರ್ಜಾ ಜೊತೆ ಮದುವೆಯಾಗಿದ್ದರು. ಆದರೆ ದಿಢೀರ್ ಹೃದಯಾಘಾತ ದಿಂದ ನಟ ಚಿರು ಕಣ್ಮರೆಯಾದರು. ಪತಿ ಅಗಲಿಕೆ ವೇಳೆ ಐದು ತಿಂಗಳ ಗರ್ಭಿಣಿ ಯಾಗಿದ್ದ ಮೇಘನಾ ಪುತ್ರ ನೊಂದಿಗೆ ಜೀವನ ನಡೆಸುತ್ತಿದ್ದಾರೆ.
Meghana Raj Sarja Shares Special Video About Rayan Raj Sarja