ಕಾಡುವ ನೋವುಗಳಿಂದ ಕೊಂಚ ಬ್ರೇಕ್ ಪಡೆದಂತೆ ತಮ್ಮ ಹಳೆ ಬದುಕಿಗೆ ಮರಳುತ್ತಿರುವ ನಟಿ ಮೇಘನಾ ರಾಜ್ ಈಗ ಮತ್ತೆ ಫಾರ್ಮ್ ಗೆ ಬರಲು ಸಜ್ಜಾಗುತ್ತಿದ್ದಾರೆ. ತಾಯ್ತನದ ಸಂಭ್ರಮದಲ್ಲಿದ್ದ ಮೇಘನಾ ಮತ್ತೆನಟನೆಗೆ ಮರಳಲು ಮುಂದಾಗಿದ್ದು ವರ್ಕೌಟ್ (Meghana Raj Work out) ಮೂಲಕ ಜಿಮ್‌ನಲ್ಲಿ ಬೆವರು ಹರಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ನ್ಯೂ ಮಮ್ಮಿ ಮೇಘನಾ ರಾಜ್ ತಾಯ್ತನದ ಬ್ರೇಕ್ ನಿಂದ ಮತ್ತೆ ನಟನೆಗೆ ಮರಳಲು ಸಿದ್ಧವಾಗಿದ್ದಾರೆ. ಈಗಾಗಲೇ ಪನ್ನಗಾಭರಣ ನಿರ್ದೇಶನದ ಸಿನಿಮಾವೊಂದಕ್ಕೆ ಸಹಿ ಹಾಕಿರುವ ಮೇಘನಾ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ.

ತಾಯ್ತನದ ಸಂಭ್ರಮದಲ್ಲಿದ್ದಾಗಲೇ ಪತಿ ಹಾಗೂ ನಟ ಚಿರಂಜೀವಿ ಸರ್ಜಾನನ್ನು ಕಳೆದುಕೊಂಡ ಮೇಘನಾ ರಾಜ್ ಅಕ್ಷರಷಃ ಕಣ್ಣೀರಿನಲ್ಲಿಕೈತೊಳೆಯುವಂತಾಗಿದ್ದರು. ಆದರೆ ಚಿರುವಿನಪ್ರತಿರೂಪದಂತೆ ಬಂದಮಗು ಅವರ ಬದುಕಿನಲ್ಲಿ ಹೊಸಬೆಳಕುಮೂಡಿಸಿತ್ತು. ಚಿರು ಅಗಲಿಕೆಯ ನೋವಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಮೇಘನಾ ರಾಜ್ ಒಂದಿಷ್ಟು ದಿನಗಳ ವಿರಾಮದ ಬಳಿಕ ನಟನೆಗೆ ಮರಳುತ್ತೇನೆ ಎಂದಿದ್ದರು.

ಚಿರುಗೆ ನಾನು ನಟಿಸಬೇಕೆಂಬ ಆಸೆ ಇತ್ತು. ಸಿನಿಮಾ ನಟನೆಯನ್ನು ಯಾವಾಗಲೂ ಬಿಡಬಾರದೆಂದು ಅವರು ಹೇಳುತ್ತಿದ್ದರು. ಹೀಗಾಗಿ ಅವರ ಆಸೆಯನ್ನು ಈಡೇರಿಸುವುದಕ್ಕಾದರೂ ನಾನು ಮತ್ತೆ ನಟನೆಗೆ ಮರಳುತ್ತೇನೆ ಎಂದಿದ್ದರು. ಕಳೆದ ಅಕ್ಟೋಬರ್ 22 ರಂದು ಚಿರು ಹಾಗೂ ಮೇಘನಾ ಪುತ್ರ ರಾಯನ್ ರಾಜ್ ಸರ್ಜಾ ಒಂದು ವರುಷಕ್ಕೆ ಕಾಲಿಟ್ಟಿದ್ದು ಮೇಘನಾ ರಾಜ್ ಮನೆಯಲ್ಲೇ ಅದ್ದೂರಿಯಾಗಿ ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಬರ್ತಡೇ ಸೆಲಿಬ್ರೇಟ್ ಮಾಡಿದ್ದಾರೆ.

ಮಗನಿಗೆ ೮-೯ ತಿಂಗಳಾಗುತ್ತಿದ್ದಂತೆ ನಿಧಾನಕ್ಕೆ ಜಾಹೀರಾತುಗಳಲ್ಲಿ ಕಾಣಿಸಿಕೊಂಡ ನಟಿ ಮೇಘನಾ ಈಗ ಮತ್ತೆ ಹಿರಿತೆರೆಗೆ ಬರಲು ಸಿದ್ಧವಾಗಿದ್ದಾರೆ. ಹೀಗಾಗಿ ಇತ್ತೀಚಿಗೆ ಮತ್ತೆ ಮೇಘನಾ ವರ್ಕೌಟ್ ಆರಂಭಿಸಿದ್ದಾರಂತೆ. ಮೇಘನಾ ಸ್ವತಃ ಇನ್ ಸ್ಟಾ ಗ್ರಾಂನಲ್ಲಿ ತಮ್ಮ ಜಿಮ್ ವರ್ಕೌಟ್ ಪೋಟೋ ಶೇರ್ ಮಾಡಿದ್ದಾರೆ. ಸದಾ ಕಾಲ ಪುತ್ರನ ಪೋಟೋಗಳ ಜೊತೆ ಇನ್ ಸ್ಟಾಗ್ರಾಂನಲ್ಲಿ ಹಾಜರಾಗುತ್ತಿದ್ದ ಮೇಘನಾ ರಾಜ್ ಈ ಭಾರಿ ತಮ್ಮದೇ ವರ್ಕೌಟ್ ಪೋಟೋ ಶೇರ್ ಮಾಡಿರೋದಿಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ.

ಮಾತ್ರವಲ್ಲ ವೆಲ್ ಕಂಬ್ಯಾಕ್ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಮೇಘನಾ ರಾಜ್ ಪನ್ನಗಾಭರಣ ನಿರ್ದೇಶನದ ಸಿನಿಮಾಗೆ ಸಿದ್ಧವಾಗುತ್ತಿದ್ದು ಇದಕ್ಕೆ ವಾಸುಕಿ ವೈಭವ್ ಸಂಗೀತವಿದೆ. ಮಗುವಿಗೆ ಹೆಚ್ಚಿಗೆ ಸಮಯ ನೀಡಬೇಕಾಗಿರೋದರಿಂದ ತುಂಬ ಚ್ಯೂಸಿಯಾಗಿ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮೇಘನಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : Meghanaraj ಹೊಸ ಪೋಟೋ ಶೂಟ್ : ಮಹಾರಾಣಿಯಾಗಿ ಮಿಂಚಿದ ಮೇಘನಾ
ಇದನ್ನೂ ಓದಿ : Meghana Raj’s son : ಮೇಘನಾ ಬದುಕಿನ ಖುಷಿಗೆ ವರ್ಷದ ಹರ್ಷ: we love you ಎಂದ ಕುಟ್ಟಿಮಾ
ಇದನ್ನೂ ಓದಿ : ಚಂದನವನಕ್ಕೆ ಕಂಬ್ಯಾಕ್ ಮಾಡಿದ ಮೇಘನಾ ರಾಜ್ : ಪತಿಯ ಜನ್ಮದಿನದಂದೇ ಬಣ್ಣ ಹಚ್ಚಿದ ಚಿರು ಪತ್ನಿ
( Meghana Raj work out photos viral, Re Entry into the sandalwood )