ಸೋಮವಾರ, ಜೂನ್ 16, 2025
HomeCinemaಚಿರು ಪೋಟೋ ಜೊತೆಯಲ್ಲೇ ಮೇಘನಾಗೆ ಸೀಮಂತ ಶಾಸ್ತ್ರ

ಚಿರು ಪೋಟೋ ಜೊತೆಯಲ್ಲೇ ಮೇಘನಾಗೆ ಸೀಮಂತ ಶಾಸ್ತ್ರ

- Advertisement -

ಸ್ಯಾಂಡಲ್ ವುಡ್ ನಟಿ ಮೇಘನಾ ಸರ್ಜಾ ತುಂಬು ಗರ್ಭಿಣಿ. ಒಂದೆಡೆ ಪ್ರೀತಿಸಿ ಕೈ ಹಿಡಿದ ಪತಿಯ ಅಗಲಿಕೆಯ ನೋವು. ಇನ್ನೊಂದೆಡೆ ಕರಳ ಕುಡಿಯ ಆಗಮನದ ಸಂತೋಷ. ಈ ನಡುವಲ್ಲೇ ಮೇಘನಾ ಸರ್ಜಾ ಮನೆಯವರೀಗ ಮಗಳಿಗೆ ಸೀಮಂತ ಶಾಸ್ತ್ರ ನೆರವೇರಿಸಿ ದ್ದಾರೆ.

Meghana Raj Seemanth 2

ಯುವ ನಟ ಚಿರಂಜೀವಿ ಸರ್ಜಾ ಅಗಲಿಕೆಯ ನೋವಿನಿಂದ ಸರ್ಜಾ ಕುಟುಂಬ ಹಾಗೂ ಮೇಘನಾ ರಾಜ್ ಕುಟುಂಬಕ್ಕೆ ಹೊರಬರೋದಕ್ಕೆ ಸಾಧ್ಯವಾಗುತ್ತಿಲ್ಲ. ಚಿರು ವಂಶದ ಕುಡಿಯನ್ನು ಒಡಲಲ್ಲಿ ಬೆಳೆಸುತ್ತಿರುವ ಮೇಘನಾ ರಾಜ್ ಸರ್ಜಾ ಅವರ ಆರೈಕೆಯನ್ನು ಮಾಡಲಾಗು ತ್ತಿದೆ.

Meghana Raj Seemanth 1

ಮೇಘನಾ ರಾಜ್ ಅವರು ನೋವಿನಿಂದ ಹೊರಬರಬೇಕು ಅನ್ನೋ ಕಾರಣಕ್ಕೆ ಸರ್ಜಾ ಕುಟುಂಬ ಮೇಘನಾ ರಾಜ್ ಸರ್ಜಾ ಅವರನ್ನು ತಂದೆ ತಾಯಿಯರ ಆರೈಕೆಯಲ್ಲಿಯೇ ಬಿಟ್ಟಿದ್ದಾರೆ.

Meghana Raj

ಸುಂದರ್ ರಾಜ್ ಪ್ರವೀಳಾ ಜೋಷಾಯ್ ದಂಪತಿಗಳು ಸಂಕಷ್ಟದ ನಡುವಲ್ಲೇ ಮಗಳ ಮುಖದಲ್ಲಿ ನಗುವನ್ನು ತರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

Meghana Raj Seemantha 1 E1601807847648

7 ತಿಂಗಳು ತುಂಬಿದ ಹಿನ್ನೆಲೆಯಲ್ಲಿ ತಂದೆ ಸುಂದರ್ ರಾಜ್ ಮತ್ತು ತಾಯಿ ಪ್ರಮಿಳಾ ಜೋಷಾಯ್ ಮಗಳು ಮೇಘನಾ ರಾಜ್ ಗೆ ಸೀಮಂತ ಶಾಸ್ತ್ರವನ್ನು ನೆರವೇರಿಸಿದ್ದಾರೆ.

Meghana Raj Seemanth 3

ಅಲ್ಲದೇ ಸೀಮಂತ ಶಾಸ್ತ್ರದಲ್ಲಿ ಮಗಳ ಜೊತೆ ಸುಂದರ್ ರಾಜ್ ಮತ್ತು ತಾಯಿ ಪ್ರಮಿಳಾ ಜೋಷಾಯ್ ಕ್ಲಿಕ್ಕಿಸಿಕೊಂಡಿರುವ ಪೋಟೋಗಳು ಇದೀಗ ವೈರಲ್ ಆಗಿದೆ.

Alvas1

ಮೇಘನಾ ರಾಜ್ ಸರ್ಜಾ ಸೀಮಂತ ಶಾಸ್ತ್ರಕ್ಕೆ ಕುಟುಂಬಸ್ಥರು ಮತ್ತು ಕೆಲವು ಆಪ್ತರಷ್ಟೇ ಭಾಗಿಯಾಗಿದ್ದರು. ಮೇಘನಾ ರಾಜ್ ಸರ್ಜಾ ಅವರಿಗೆ ಪತಿಯಿಲ್ಲದ ಕೊರಗು ಕಾಡಬಾರದೆಂದು ಮೇಘನಾ ಸೀಮಂತದಲ್ಲಿ ಚಿರಂಜೀವಿ ಸರ್ಜಾ ಅವರ ದೊಡ್ಡ ಕಟೌಟ್ ಇರಿಸಲಾಗಿತ್ತು.

Meghana Raj 3 E1599926930242

ಒಂದು ದಶಕಗಳ ಕಾಲ ಪ್ರೀತಿಯಲ್ಲಿ ತೇಲಾಡಿದ್ದ ಚಿರಂಜೀವಿ ಸರ್ಜಾ ಮೇಘನಾ ರಾಜ್ 2017ರಲ್ಲಿ ಎಂಗೇಜ್ ಮೆಂಟ್ ಆಗಿದ್ದರು. ಅಲ್ಲದೇ 2018ರಲ್ಲಿ ಅದ್ದೂರಿಯಾಗಿ ಮದುವೆಯಾಗೋ ಮೂಲಕ ತಮ್ಮ ಕುರಿತು ಹಬ್ಬಿದ್ದ ಗಾಸಿಪ್ ಗಳಿಗೆ ತೆರೆ ಎಳೆದಿದ್ದರು.

Meghana Raj 1

ಕೆಲವೇ ಕೆಲವು ದಿನಗಳಲ್ಲಿಯೇ ಚಿರಂಜೀವಿ ಸರ್ಜಾ ಹಾಗೂ ಮೇಘನಾ ದಂಪತಿಗಳು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಲು ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ಮದುವೆಯಾದ ಮೂರೇ ಮೂರು ವರ್ಷಕ್ಕೆ ಚಿರಂಜೀವಿ ಸರ್ಜಾ ಬಾರದ ಲೋಕಕ್ಕೆ ಪಯಣಿಸಿ ಬಿಟ್ಟಿದ್ದಾರೆ.

Meghana Family

ಕನ್ನಡ ಚಿತ್ರರಂಗ ಮಾತ್ರವಲ್ಲ ಪ್ರೀತಿಸಿ ಮದುವೆಯಾಗೋ ಅದೆಷ್ಟೋ ದಂಪತಿಗಳ ಪಾಲಿಗೆ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ದಂಪತಿ ಮಾದರಿಯಾಗಿದ್ದರು. ಮೇಘನಾ ರಾಜ್ ಸರ್ಜಾ ತನ್ನ ಪತಿಯನ್ನು ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದರು.

Meghana Chiru 1

ಚಿರು ಸರ್ಜಾ ಇಂದು ನಮ್ಮೊಂದಿಗಿಲ್ಲ ಅನ್ನೋದನ್ನು ಯಾರಿಂದಲೂ ಅರಿಗಿಸಿಕೊಳ್ಳೋದಕ್ಕೂ ಸಾಧ್ಯವಾಗುತ್ತಿಲ್ಲ. ಇದೇ ಕಾರಣದಿಂದಲೇ ಮೇಘನಾ ರಾಜ್ ಸರ್ಜಾ ಅವರ ಸೀಮಂತ ಕಾರ್ಯದಲ್ಲಿಯೂ ಚಿರು ಕಟೌಟ್ ಇರಿಸಲಾಗಿದೆ.

Chiranjivi Meghana

ಮೇಘನಾ ರಾಜ್ ಸರ್ಜಾ ಅವರ ಹಿಂಬದಿಯಲ್ಲಿ ಕಟೌಟ್ ಇರಿಸಲಾಗಿದ್ದು, ನೋಡಿದ್ರೆ ಚಿರಂಜೀವಿ ಸರ್ಜಾ ಅವರೇ ನಿಂತುಕೊಂಡು ಪತ್ನಿಯ ಸೀಮಂತ ಶಾಸ್ತ್ರವನ್ನು ನೆರವೇರಿಸಿದಂತೆ ಭಾಸವಾಗುತ್ತಿದೆ.

Meghana Raj 4

ಮೇಘನಾ ಸರ್ಜಾ ಅವರಿಗೆ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಕೂಡ ಚಿರು ಇಲ್ಲಾ ಅನ್ನೋ ನೋವು ಕಾಡದಂತೆ ನೋಡಿಕೊಳ್ಳುತ್ತಿ ದ್ದಾರೆ.

Meghana Raj 3

ತಾಯಿಯ ಮನೆಯವರ ಆರೈಕೆಯಲ್ಲಿರುವ ಮೇಘನಾ ಸರ್ಜಾ ಅವರ ಯೋಗಕ್ಷೇಮವನ್ನು ಚಿತ್ರರಂಗದ ಗಣ್ಯರು ಭೇಟಿ ನೀಡಿ ವಿಚಾರಿಸು ತ್ತಿದ್ದಾರೆ. ಮೇಘನಾ ರಾಜ್ ಅವರಿಗೆ ಯಾವುದೇ ನೋವು ಕಾಡದಂತೆಯೂ ಹಿರಿಯ ನಟಿಯರು ನೋಡಿಕೊಳ್ಳುತ್ತಿದ್ದಾರೆ.

Meghana Raj 1 E1599926895745

ಮಾತ್ರವಲ್ಲ ಸರ್ಜಾ ಕುಟುಂಬಸ್ಥರು ಕೂಡ ನೋವಲ್ಲೇ ಮೇಘನಾ ನಗುಮುಖದಲ್ಲಿರುವಂತೆ ನೋಡಿಕೊಳ್ಳುತ್ತಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular